ಡೊಳ್ಳು ಹೊಟ್ಟೆ ಕರಗಿಸುವಂತೆ ಪೊಲೀಸರಿಗೆ ಎಡಿಜಿಪಿ ಭಾಸ್ಕರ್‍ರಾವ್ ಸೂಚನೆ
ಮೈಸೂರು

ಡೊಳ್ಳು ಹೊಟ್ಟೆ ಕರಗಿಸುವಂತೆ ಪೊಲೀಸರಿಗೆ ಎಡಿಜಿಪಿ ಭಾಸ್ಕರ್‍ರಾವ್ ಸೂಚನೆ

July 9, 2018

ಮೈಸೂರು:  ಪೊಲೀಸರಲ್ಲಿ ಆರೋಗ್ಯದ ಬಗ್ಗೆ ಶಿಸ್ತು ಮೂಡಿಸಲು ಕೆಎಸ್‍ಆರ್‍ಪಿ ಎಡಿಜಿಪಿ ಭಾಸ್ಕರ್ ರಾವ್ ಅವರು ಇತ್ತೀಚೆಗೆ ಸುತ್ತೋಲೆ ಹೊರಡಿಸಿದ್ದಾರೆ.

ಪೊಲೀಸ್ ಇಲಾಖೆಯು ಪೊಲೀಸರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ. ಡೊಳ್ಳು ಹೊಟ್ಟೆ, ಬೊಜ್ಜು ಬೆಳೆಸಿಕೊಂಡು ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರ ದೈಹಿಕ ಸಾಮಥ್ರ್ಯದಿಂದ ಇಲಾಖೆಯಲ್ಲಿ ಅಶಿಸ್ತು ಮೂಡಿದ್ದು, ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ. ಹಾಗಾಗಿ ಈ ಸುತ್ತೋಲೆ ಹೊರಡಿಸಲಾಗಿದೆ. ರಾಜ್ಯದ 12 ಕೆಎಸ್‍ಆರ್‍ಪಿ ಪಡೆಗಳಲ್ಲಿರುವ ಪೊಲೀಸರ ಡೊಳ್ಳು ಹೊಟ್ಟೆ ಕರಗಿಸುವ ಜವಾಬ್ದಾರಿ ಆಯಾಯ ಕಮಾಂಡೆಂಟ್‍ಗಳದ್ದಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕೆಎಸ್‍ಆರ್‍ಪಿ ಪೊಲೀಸರು ವಿವಿಧ ಕಾರಣಗಳಿಂದ ಸಾವನ್ನಪ್ಪುತ್ತಿದ್ದು, ಇದಕ್ಕೆಪೊಲೀಸರ ಜೀವನ ಶೈಲಿ, ಆಹಾರ ಪದ್ಧತಿಯೇ ಮುಖ್ಯ ಕಾರಣ ಎಂಬುದು ತಜ್ಞರ ವರದಿಯಿಂದ ಬಯಲಾಗಿದೆ. ಹಾಗಾಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯಕವಾಗಿದ್ದು, ಹೆಚ್ಚಿನ ತೂಕ ಇದ್ದರೆ, ಕರ್ತವ್ಯ ನಿರ್ವಹಿ ಸುವುದು ಕಷ್ಟ ಸಾಧ್ಯ ಎಂದು ತಿಳಿಸಿದ್ದಾರೆ. ಹೀಗಾಗಿ ಎಲ್ಲಾ ಪಡೆಗಳ ಕಮಾಂಡೆಂಟ್‍ಗಳು ತಮ್ಮ ಪಡೆಗಳಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತೂಕದ ವಿವರಗಳನ್ನು ನಮೂದಿಸುವುದು. ಅಗತ್ಯಕ್ಕಿಂತ ಹೆಚ್ಚಿನ ತೂಕವುಳ್ಳ ಪೊಲೀಸರಿಗೆ ನಿಯಮಿತ ಆಹಾರ, ಯೋಗ, ವ್ಯಾಯಾಮ ಮಾಡಿ ದೇಹದ ತೂಕವನ್ನು ಕಡ್ಡಾಯವಾಗಿ ಇಳಿಸಬೇಕು. ಇಲ್ಲವಾದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಕೆಎಸ್‍ಆರ್‍ಪಿ ಎಡಿಜಿಪಿ ಭಾಸ್ಕರ್ ರಾವ್ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

Translate »