ಮೈಸೂರು: ಪೊಲೀಸರಲ್ಲಿ ಆರೋಗ್ಯದ ಬಗ್ಗೆ ಶಿಸ್ತು ಮೂಡಿಸಲು ಕೆಎಸ್‍ಆರ್‍ಪಿ ಎಡಿಜಿಪಿ ಭಾಸ್ಕರ್ ರಾವ್ ಅವರು ಇತ್ತೀಚೆಗೆ ಸುತ್ತೋಲೆ ಹೊರಡಿಸಿದ್ದಾರೆ. ಪೊಲೀಸ್ ಇಲಾಖೆಯು ಪೊಲೀಸರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ. ಡೊಳ್ಳು ಹೊಟ್ಟೆ, ಬೊಜ್ಜು ಬೆಳೆಸಿಕೊಂಡು ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರ ದೈಹಿಕ ಸಾಮಥ್ರ್ಯದಿಂದ ಇಲಾಖೆಯಲ್ಲಿ ಅಶಿಸ್ತು ಮೂಡಿದ್ದು, ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ. ಹಾಗಾಗಿ ಈ ಸುತ್ತೋಲೆ ಹೊರಡಿಸಲಾಗಿದೆ. ರಾಜ್ಯದ 12 ಕೆಎಸ್‍ಆರ್‍ಪಿ ಪಡೆಗಳಲ್ಲಿರುವ ಪೊಲೀಸರ ಡೊಳ್ಳು ಹೊಟ್ಟೆ ಕರಗಿಸುವ ಜವಾಬ್ದಾರಿ ಆಯಾಯ ಕಮಾಂಡೆಂಟ್‍ಗಳದ್ದಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ….