ಗಬ್ಬೆದ್ದು ನಾರುತ್ತಿದೆ ಎಂ.ಜಿ.ರಸ್ತೆ ಮಾರುಕಟ್ಟೆ
ಮೈಸೂರು

ಗಬ್ಬೆದ್ದು ನಾರುತ್ತಿದೆ ಎಂ.ಜಿ.ರಸ್ತೆ ಮಾರುಕಟ್ಟೆ

July 9, 2018

ಮೈಸೂರು:  ಒಂದೆಡೆ ಕಸದ ರಾಶಿ, ಕೊಳೆತ ತರಕಾರಿಗಳ ದುರ್ವಾಸನೆ, ಮತ್ತೊಂದೆಡೆ ಚರಂಡಿಗೆ ಅಳವಡಿಸಿದ್ದ ಸ್ಲ್ಯಾಬ್‍ಗಳು ಒಡೆದಿದ್ದು, ಪಾದಚಾರಿಗಳ ಸುಗಮ ಸಂಚಾರಕ್ಕೂ ಅಡ್ಡಿ… ಇದು ಎಂ.ಜಿ.ರಸ್ತೆಯ ಮಾರುಕಟ್ಟೆ ಸ್ಥಿತಿ.

ಅಗ್ರಹಾರದಿಂದ ಮಾಲ್ ಆಫ್ ಮೈಸೂರು ಕಡೆಗೆ ಹೋಗುವ ಎಂ.ಜಿ.ರಸ್ತೆಯಲ್ಲಿರುವ ಮಾರು ಕಟ್ಟೆಯ ಬಳಿ ಕೊಳೆತ ತರಕಾರಿಗಳು, ಬಾಳೆ ಎಲೆ ಗಳು ಹಾಗೂ ಪ್ಲಾಸ್ಟಿಕ್ ಸೇರಿದಂತೆ ಕಸದ ರಾಶಿ ಮುಕ್ತವಾಗಿ ಎಲ್ಲರನ್ನು ಸ್ವಾಗತಿಸಿದರೆ, ಮತ್ತೊಂದೆಡೆ ಮೈಸೂರಿನ ಸುತ್ತಮುತ್ತಲಿನ ವಿವಿಧ ಭಾಗಗಗಳಿಂದ ತರಕಾರಿಗಳನ್ನು ಹೊತ್ತುತರುವ ಆಟೋ, ಬೈಕ್ ಸೇರಿದಂತೆ ಮತ್ತಿತರೆ ವಾಹನಗಳನ್ನು ರಸ್ತೆಯಲ್ಲಿಯೇ ನಿಲ್ಲಿಸುವುದರಿಂದ ಆ ಮಾರ್ಗವಾಗಿ ಸಂಚರಿಸುವ ವಾಹನ ಸವಾರರಿಗೆ ತುಂಬಾ ಕಿರಿಕಿರಿಯಾಗುತ್ತಿದೆ.

ಬಿಡಾಡಿ ದನಗಳ ಹಾವಳಿ: ಆಹಾರವನ್ನರಸಿ ಮಾರುಕಟ್ಟೆಗೆ ಲಗ್ಗೆಯಿಡುವ ಬಿಡಾಡಿ ದÀನಗಳು, ಬಿಸಾಡಿದ್ದ ಕೊಳೆತ ತರಕಾರಿ, ಹಣ್ಣುಗಳು, ಬಾಳೆ ಎಲೆ, ಸೊಪ್ಪುಗಳನ್ನು ತಿನ್ನುತ್ತಾ ರಸ್ತೆಯ ಮಧ್ಯೆಯೇ ನಿಲ್ಲು ವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುವ ಜತೆಗೆ ಅಪಘಾತಗಳ ಸಂಭವವೂ ಹೆಚ್ಚಾಗಿರುತ್ತದೆ.

ವಾಹನ ನಿಲ್ದಾಣವಾದ ರಸ್ತೆ: ಮಾರುಕಟ್ಟೆಗೆ ಮೈಸೂರಿನ ಸುತ್ತಮುತ್ತಲಿನ ಭಾಗಗಳಿಂದ ತರಕಾರಿ ಗಳನ್ನು ಹೊತ್ತು ತಂದ ಆಟೋ, ಬೈಕ್ ಸೇರಿದಂತೆ ಮತ್ತಿತರೆ ವಾಹನಗಳನ್ನು ರಸ್ತೆಯಲ್ಲಿ ನಿಲುಗಡೆ ಮಾಡುತ್ತಾರೆ. ಇಲ್ಲಿ ವಾಹನ ನಿಲ್ದಾಣದ ವ್ಯವಸ್ಥೆ ಮಾಡದಿರುವುದೇ ಇದಕ್ಕೆ ಪ್ರಮುಖ ಕಾರಣ.

ಒಡೆದ ಸ್ಲಾಬ್‍ಗಳು: ಎಂ.ಜಿ.ರಸ್ತೆಯಲ್ಲಿನ ವಸ್ತು ಪ್ರದರ್ಶನ ಪ್ರಾಧಿಕಾರದ ಕಾಂಪೌಂಡ್ ಪಕ್ಕ ಹಾಗೂ ಮಾರುಕಟ್ಟೆಯ ಮುಂಭಾಗ ದಲ್ಲಿ ಮಳೆಯ ನೀರು ಸರಾಗ ವಾಗಿ ಹರಿಯಲು ಚರಂಡಿ ಯನ್ನು ನಿರ್ಮಿಸಿ, ಸ್ಲ್ಯಾಬ್ ನಿಂದ ಮುಚ್ಚಲಾಗಿತ್ತು. ಇಂದು ಸ್ಲ್ಯಾಬ್‍ಗಳು ಅಲ್ಲಲ್ಲಿ ಒಡೆದಿದ್ದು, ಅಪಘಾತಕ್ಕೆ ಆಹ್ವಾನ ನೀಡುತ್ತಿವೆ. ಪಾದಚಾರಿಗಳು ಎಚ್ಚರ ತಪ್ಪಿದರೆ ಅಪಘಾತ ಕಟ್ಟಿಟ್ಟ ಬುತ್ತಿ. ಜತೆಗೆ ಚರಂಡಿಯಲ್ಲಿ ಪ್ಲಾಸ್ಟಿಕ್, ಕೊಳೆತ ತರಕಾರಿ ತ್ಯಾಜ್ಯಗಳಿಂದ ತುಂಬಿ ಹೋಗಿ ದ್ದು, ಮಳೆ ಬಂತೆಂದರೆ ದುರ್ವಾ ಸನೆ ಬೀರುತ್ತಿದೆ. ಇದರಿಂದ ವಾಹನ ಸವಾರರು ನರಕ ಯಾತನೆ ಅನುಭವಿಸುವಂತಾಗಿದೆ.

ಡಿವೈಡರ್ ನಾಪತ್ತೆ: ವಾಹನಗಳ ಸುಗಮ ಸಂಚಾರಕ್ಕೆ ರಸ್ತೆಯ ಮಧ್ಯೆ ಡಿವೈಡರ್ ನಿರ್ಮಿಸ ಲಾಗಿತ್ತು. ಆದರೆ, ದಿನನಿತ್ಯ ಮಾರುಕಟ್ಟೆಗೆ ತರಕಾರಿ ಗಳನ್ನು ಹೊತ್ತುತರುವ ವಾಹನ ಬಾಲಕರು ಮಾರು ಕಟ್ಟೆ ಡಿವೈಡರ್ ಮೇಲೆಯೇ ವಾಹನಗಳನ್ನು ತಿರುವು ಪಡೆಯುವುದರಿಂದ ಡಿವೈಡರ್ ನಾಪತ್ತೆಯಾಗಿದೆ.

ಕಸದ ಕಂಟೈನರ್ ಇಲ್ಲ: ಮಾರುಕಟ್ಟೆಯಲ್ಲಿ ಕಸದ ಕಂಟೈನರ್ ಇಲ್ಲದಿರುವುದು ಕಸದ ರಾಶಿ ಉಂಟಾಗಲು ಮುಖ್ಯಕಾರಣ. ಜತೆಗೆ ಮಳೆ ಬಂದರೆ ಮಾರುಕಟ್ಟೆಯೆಲ್ಲಾ ಕೆಸರುಗದ್ದೆಯಾಗಿ ಮಾರ್ಪಾ ಡಾಗುತ್ತದೆ. ತರಕಾರಿಗಳೆಲ್ಲ ಕೊಳೆತು ದುರ್ವಾಸನೆ ಬೀರುತ್ತವೆ. ಇದು ಆ ಮಾರ್ಗದಲ್ಲಿ ನಿತ್ಯ ಸಂಚರಿಸುವ ವಾಹನ ಸವಾರರು, ಮಾರುಕಟ್ಟೆ ವ್ಯಾಪಾರಿಗಳ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರಲಿದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಕಸದ ರಾಶಿ ಯನ್ನು ವಿಲೇಮಾರಿ ಮಾಡಿ ಸಮಸ್ಯೆಗೆ ನಾಂದಿ ಹಾಡಲಿದ್ದಾರೆಯೇ ಎಂದು ಕಾದು ನೋಡಬೇಕಿದೆ.

Translate »