ನೀರಿಗಾಗಿ ಕೈಕಟ್ಟಿ ನಿಲ್ಲುವ ದುಸ್ಥಿತಿ ನಿರ್ಮಾಣ: ಕೇಂದ್ರದ ವಿರುದ್ಧ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅಸಮಾಧಾನ
ಹಾಸನ

ನೀರಿಗಾಗಿ ಕೈಕಟ್ಟಿ ನಿಲ್ಲುವ ದುಸ್ಥಿತಿ ನಿರ್ಮಾಣ: ಕೇಂದ್ರದ ವಿರುದ್ಧ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅಸಮಾಧಾನ

July 9, 2018

ಬೇಲೂರು: ರಾಜ್ಯದ ಕೆರೆ ಕಟ್ಟೆಗಳಲ್ಲಿ ನೀರಿಲ್ಲದೆ, ರೈತರು ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ನಮ್ಮಲ್ಲಿ ನಾಲ್ಕು ಜಲಾಶಯ ಇದ್ದರೂ ನೀರಿಗಾಗಿ ಕೇಂದ್ರ ಸರ್ಕಾರದ ಅನುಮತಿಗಾಗಿ ಕೈಕಟ್ಟಿ ನಿಲ್ಲಬೇಕಾದ ದುಸ್ಥಿತಿ ನಿರ್ಮಾಣವಾಗಿದೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕಿನ ಹಗರೆ ಗ್ರಾಮದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ಕಾಮ ಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು.ರೈತರ 34 ಸಾವಿರ ಕೋಟಿ ರೂ. ಸಾಲವನ್ನು ಒಂದೇ ಬಾರಿ ಮನ್ನಾ ಮಾಡಲು ಹೆಚ್.ಡಿ.ಕುಮಾರಸ್ವಾಮಿ ಮುಂದಾದಾಗ ಹಲವರು ಈ ಬಗ್ಗೆ ಮೂಗು ಮುರಿದಿ ದ್ದಾರೆ. ಆದರೆ ಕಳೆದ ಏಳೆಂಟು ವರ್ಷಗಳಲ್ಲಿ ಅವರು ಏಕೆ ಮಾಡಲು ಸಾಧ್ಯವಾಗಿಲ್ಲ. ಹೆಚ್.ಡಿ.ಕುಮಾರಸ್ವಾಮಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬಳಿ ಸಹಾಯ ಕೋರಿದಾಗ ಅವರು ಕೂಡ ಒಪ್ಪಿದ್ದರು. ಆದರೆ ಇಲ್ಲಿನ ಬಿಜೆಪಿ ನಾಯಕರು ಸಮ್ಮಿಶ್ರ ಸರ್ಕಾರಕ್ಕೆ ಉತ್ತಮ ಫಲಿತಾಂಶ ಸಿಗುತ್ತದೆ ಎಂದು ಚಾಡಿ ಹೇಳಿ ಅಡ್ಡಿ ಪಡಿಸಿದರು ಎಂದು ದೂರಿದರು. ಬಿಜೆಪಿಯ ಮುಖಂಡರು ಲೋಕಸಭಾ ಚುನಾವಣೆಗೂ ಮುನ್ನ ನೀಡಿದ ಭರವಸೆಯಂತೆ ಈ ದೇಶದ ಪ್ರತಿ ಯೊಬ್ಬರ ಖಾತೆಗೆ 15 ಲಕ್ಷ ರೂ. ಹಣ ತುಂಬುವುದಾಗಿ ಹೇಳಿದ್ದ ಪ್ರಧಾನ ಮಂತ್ರಿಯ ವರು ಇದುವರೆಗೂ ಒಂದು ಬಿಡಿಗಾಸನ್ನು ಹಾಕಿಲ್ಲ. ಈ ಬಗ್ಗೆ ಬಿಜೆಪಿಯವರು ಯಾಕೆ ಚಕಾರ ಎತ್ತುತ್ತಿಲ್ಲ ಎಂದು ಚಾಟಿ ಬೀಸಿದರು.

ರಾಜ್ಯ ಬಜೆಟ್‍ನಲ್ಲಿ ಮುಖ್ಯಮಂತ್ರಿ ಹಾಸನ, ರಾಮನಗರ, ಮಂಡ್ಯಕ್ಕೆ ಹೆಚ್ಚು ಅನುದಾನ ಕೊಟ್ಟಿದ್ದಾರೆ ಎಂದು ಬಿಜೆಪಿ ಯವರು ಆರೋಪಿಸುತ್ತಿದ್ದಾರೆ. ಆದರೆ ಹತ್ತು ವರ್ಷದಲ್ಲಿ ಜಿಲ್ಲೆಯಲ್ಲಿ ಏನು ಅಭಿವೃದ್ಧಿ ಯಾಗಿದೆ ಎಂದು ಬಂದು ನೋಡಿದರೆ ಗೊತ್ತಾಗುತ್ತೆ ಎಂದು ಗುಡುಗಿದರಲ್ಲದೆ, ಕುಮಾರಸ್ವಾಮಿ ಮಂಡಿಸಿರುವ ಬಜೆಟ್ ಅನ್ನು ಒಕ್ಕಲಿಗರ ಬಜೆಟ್ ಎಂದು ಕೆಲವರು ವ್ಯಂಗ್ಯವಾಡುತ್ತಿದ್ದಾರೆ. ಎರಡು ದಿನ ತಾಳ್ಮೆ ಯಿಂದ ಇದ್ದರೆ ಸಿಎಂ ಯಾವ ಜಿಲ್ಲೆಗೆ ಎಷ್ಟು ಅನುದಾನ ಕೊಟ್ಟಿದ್ದಾರೆ ಹಾಗೂ ರಾಜ್ಯದ ರೈತರ ಸಾಲ ಹೇಗೆ ಮನ್ನಾ ಮಾಡಲು ಪ್ರಯತ್ನಿಸಿದ್ದಾರೆ ಎಂದು ತಿಳಿಯುತ್ತದೆ ಎಂದರು.

ಶಾಸಕ ಲಿಂಗೇಶ್ ಮಾತನಾಡಿ, ಬೇಲೂರು- ಹಳೇಬೀಡು ವಿಶ್ವಪ್ರಸಿದ್ದ ಪ್ರವಾಸಿ ತಾಣಗಳಾಗಿದ್ದು, ರಸ್ತೆ ಹಾಗೂ ಮೂಲ ಭೂತ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ಅಗತ್ಯ ಎಂದು ಕೋರಿದರು. ಈ ಸಂದ ರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ತೋ.ಚ.ಅನಂತ ಸುಬ್ಬರಾಯ. ಜಿಪಂ ಸದಸ್ಯೆ ಲತಾ ದಿಲೀಪ್, ಲತಾ ಮಂಜೇಶ್ವರಿ, ಮಾಜಿ ಸದಸ್ಯ ಬಿ.ಡಿ.ಚಂದ್ರೇಗೌಡ, ಎಪಿಎಂಸಿ ಅಧ್ಯಕ್ಷ ವಿಷ್ಣುಕುಮಾರ್, ಜೆಡಿಎಸ್ ಮುಖಂಡರಾದ ಈಶ್ವರ್, ಕಾಂತರಾಜು ಸೇರಿದಂತೆ ಇತರ ಜನಪ್ರತಿನಿಧಿಗಳಿದ್ದರು

Translate »