ಎಸ್‍ಟಿಜಿಯಲ್ಲಿ `ಮಾನ್ಸೂನ್ ಮ್ಯಾರಥಾನ್ ಓಟ’
ಮಂಡ್ಯ

ಎಸ್‍ಟಿಜಿಯಲ್ಲಿ `ಮಾನ್ಸೂನ್ ಮ್ಯಾರಥಾನ್ ಓಟ’

July 9, 2018

ಚಿನಕುರುಳಿ: ಇಲ್ಲಿನ ಎಸ್‍ಟಿಜಿ ಪಬ್ಲಿಕ್ ಶಾಲೆಯಲ್ಲಿ ಶನಿವಾರ `ಮಾನ್ಸೂನ್ ಮ್ಯಾರಥಾನ್ ಓಟದ’ ಸ್ಪರ್ಧೆ ನಡೆಯಿತು.

ವಿಶ್ವ ಜನಸಂಖ್ಯಾ ದಿನಾಚರಣೆ, ಸಣ್ಣ ತಮ್ಮೇಗೌಡ, ಅಂಕಮ್ಮನವರ 26ನೇ ವರ್ಷದ ಪುಣ್ಯಸ್ಮರಣೆ ಹಾಗೂ ಮುಂಗಾರು ಮಳೆ ಆಹ್ವಾನಿಸಿ ಎಸ್‍ಟಿಜಿ ಶಿಕ್ಷಣ ಸಂಸ್ಥೆ ಆಯೋ ಜಿಸಿದ್ದ `ಮಾನ್ಸೂನ್ ಮ್ಯಾರಥಾನ್ ಓಟದ’ ಸ್ಪರ್ಧೆಗೆ ಸಂಸ್ಥೆ ಸಿಇಓ ಸಿ.ಪಿ.ಶಿವರಾಜು ಚಾಲನೆ ನೀಡಿದರು.

ಎಸ್‍ಟಿಜಿ ಪಬ್ಲಿಕ್ ಶಾಲೆಯಿಂದ ಹೊರಟ ಮ್ಯಾರಥಾನ್ ಸ್ಪರ್ಧಿಗಳು ಚಿನಕುರಳಿ ಗ್ರಾಮ ಬಳಸಿಕೊಂಡು ಸುಮಾರು ಮೂರೂವರೆ ಕಿ.ಮಿ. ಓಡುವ ಮೂಲಕ ಶಾಲೆಗೆ ಆಗಮಿಸಿದರು. ಸ್ಪರ್ಧೆಯಲ್ಲಿ ಶಾಲೆಯ 1 ರಿಂದ 9ನೇ ತರಗತಿವರೆಗಿನ 250ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.

ಗಂಡು ಮಕ್ಕಳ ವಿಭಾಗದಲ್ಲಿ ಬಿ.ವಿ.ರವಿ ಶಂಕರ್(ಪ್ರಥಮ), ಸಾಗರ್(ದ್ವಿತೀಯ) ತೇಜಸ್(ತೃತೀಯ) ಸ್ಥಾನ ಪಡೆದರು. ಬಾಲಕಿಯರ ವಿಭಾಗದಲ್ಲಿ 9ನೇ ತರಗತಿ ರಕ್ಷಿತ(ಪ್ರಥಮ), 7ನೇ ತರಗತಿ ರಕ್ಷಿತ (ದ್ವಿತೀಯ) ಪೂರ್ವಿ(ತೃತೀಯ) ಸ್ಥಾನ ಪಡೆದರು. ವಿಜೇತರಾದ ಮಕ್ಕಳಿಗೆ ಶಾಲಾ ವಾಹನ ಚಾಲಕರು ಹಾಗೂ ಮಹಿಳಾ ಸಿಬ್ಬಂದಿಗಳಿಂದ ಬಹುಮಾನ ಕೊಡಿಸಿದ್ದು ವಿಶೇಷವಾಗಿತ್ತು.

ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಿದ ಸಿಇಓ ಸಿ.ಪಿ.ಶಿವರಾಜು ಮಾತನಾಡಿ, ವಿಶ್ವ ಜನಸಂಖ್ಯಾ ದಿನಾಚರಣೆ, ಸಣ್ಣತಮ್ಮೇಗೌಡ, ಅಂಕಮ್ಮನವರ 26ನೇ ವರ್ಷದ ಪುಣ್ಯ ಸ್ಮರಣೆ ಹಾಗೂ ಮುಂಗಾರು ಮಳೆ ಆಹ್ವಾನಿಸಿ ಶಾಲೆಯಲ್ಲಿ ಮ್ಯಾರಥಾನ್ ಓಟದ ಸ್ಪರ್ಧೆಯನ್ನು ಆಯೋಜಿಸಿದ್ದೇವೆ. ಮಕ್ಕಳು ಮಾನಸಿಕ ಹಾಗೂ ದೈಹಿಕ ವಾಗಿಯೂ ಸದೃಢರಾಗಿರಬೇಕೆನ್ನುವ ಉದ್ದೇಶದಿಂದ ಶಾಲೆಯಲ್ಲಿ ಮ್ಯಾರಥಾನ್ ಓಟದ ಸ್ಪರ್ಧೆ ಆಯೋಜಿಸಿದ್ದೇವೆ ಎಂದರು.

ದೇಶ ಅಭಿವೃದ್ಧಿಗೆ ಯುವ ಶಕ್ತಿಯ ಪಾತ್ರ ಪ್ರಮುಖ. ಯುವ ಜನಾಂಗ ಆರೋಗ್ಯ ವಂತರಾಗಿರಬೇಕಾದರೆ ಮೊದಲು ಅವರು ಮಾನಸಿಕ ಹಾಗೂ ದೈಹಿಕವಾಗಿ ಬಲವರ್ಧನೆಗೊಳ್ಳಬೇಕು. ಆದ್ದರಿಂದ ಮಕ್ಕಳಿಗೆ ಕ್ರೀಡೆ ಅತ್ಯವಶ್ಯಕ. ಆ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಒಂದು ಹೆಜ್ಜೆ ಮುಂದೆ ಹೋಗಿ ಮಕ್ಕಳಿಗೆ ಹಲವು ಸಾಂಸ್ಕøತಿಕ ಹಾಗೂ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಿದೆ ಎಂದರು.
ಈ ಸಂದರ್ಭ ಮುಖ್ಯಶಿಕ್ಷಕಿ ಎಂ.ಎ.ಮಾಚಮ್ಮ, ಆಡಳಿತಾಧಿಕಾರಿ ನಿವೇದಿತಾ ನಾಗೇಶ್ ಸೇರಿದಂತೆ ಶಾಲಾ ಶಿಕ್ಷಕರು ಹಾಜರಿದ್ದರು.

Translate »