ಶೋಕಿಗಾಗಿ ಬೈಕ್ ಕಳ್ಳತನ: ಮೂವರು ಅಪ್ರಾಪ್ತರ ಬಂಧನ
ಮಂಡ್ಯ

ಶೋಕಿಗಾಗಿ ಬೈಕ್ ಕಳ್ಳತನ: ಮೂವರು ಅಪ್ರಾಪ್ತರ ಬಂಧನ

July 9, 2018

ಮಂಡ್ಯ:  ಶೋಕಿಗಾಗಿ ಬೈಕ್ ಕಳ್ಳತನ ಮಾಡುತ್ತಿದ್ದ ಮೂವರು ಅಪ್ರಾಪ್ತ ಬಾಲಕರನ್ನು ಪಾಂಡವಪುರ ಪೊಲೀಸರು ಬಂಧಿಸಿದ್ದು, ಬಂಧಿತರಿಂದ ಸುಮಾರು 10 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಹಲವು ದಿನಗಳಿಂದ ಪಾಂಡವಪುರ ಸೇರಿದಂತೆ ಸುತ್ತಮುತ್ತಲಿನಲ್ಲಿ ಬೈಕ್ ಕಳವು ಮಾಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಎಂ.ಕೆ.ದೀಪಕ್ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು. ಈ ತನಿಖಾ ತಂಡಕ್ಕೆ ಜು.4 ರಂದು ಸಿಕ್ಕಿಬಿದ್ದ ಕಾನೂನು ಸಂಘರ್ಷ ಕ್ಕೊಳಪಡುವ ಮೂವರು ಬಾಲಕರನ್ನು ವಿಚಾರಣೆಗೊಳಪಡಿಸಿದಾಗ ಬೈಕ್ ಕಳವು ಪ್ರಕರಣಗಳು ಬೆಳಕಿಗೆ ಬಂದಿದೆ. ಪಾಂಡವ ಪುರ ಟಿಎಪಿಸಿಎಂಎಸ್ ಕಲ್ಯಾಣ ಮಂಟಪ ಬಳಿ 2, ಬಿಜಿಎಸ್ ಶಾಲೆ ಮುಭಾಗ 2, ಚಿಕ್ಕಾಡೆ ಜಾತ್ರೆಯಲ್ಲಿ 2, ಬೇಬಿ ಬೆಟ್ಟದ ಜಾತ್ರೆಯಲ್ಲಿ 1, ಚಂದ್ರೆ ಗ್ರಾಮದಲ್ಲಿ 1, ಪಾಂಡವಪುರ ಸ್ಟೇಡಿಯಂನಲ್ಲಿ 2 ಸೇರಿದಂತೆ ಸುಮಾರು 10 ಬೈಕ್‍ಗಳನ್ನು ಕಳುವು ಮಾಡಿದ್ದರು ಎಂಬ ಮಾಹಿತಿ ತನಿಖೆ ವೇಳೆ ಬಹಿರಂಗಗೊಂಡಿದೆ.

ಚಾಲಾಕಿ ಕಳ್ಳ ಬಾಲಕರು ಕದ್ದ ಬೈಕ್‍ಗಳನ್ನು ಮಾರಿ ಶೋಕಿ ಮಾಡುತ್ತಿದ್ದರು ಎಂಬ ಮಾಹಿತಿಯೂ ಬಹಿರಂಗವಾಗಿದೆ. ಈ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಬಾಲಕರನ್ನು ಮಂಡ್ಯದ ಬಾಲ ಮಂದಿರದ ವಶಕ್ಕೆ ಒಪ್ಪಿಸಲಾಗಿದೆ.

Translate »