ಮೈಸೂರಲ್ಲಿ ಸಂತ ಸೇವಾಲಾಲರ ಸ್ಮರಣೆ
ಮೈಸೂರು

ಮೈಸೂರಲ್ಲಿ ಸಂತ ಸೇವಾಲಾಲರ ಸ್ಮರಣೆ

February 16, 2021

ಮೈಸೂರು, ಫೆ.15(ಎಸ್‍ಪಿಎನ್)-ಮೈಸೂರಿನಲ್ಲಿ ಸಂತ ಸೇವಾಲಾಲ್‍ರ 282ನೇ ಜಯಂತ್ಯೋತ್ಸವ ಪ್ರಯುಕ್ತ ಅವರ ಭಾವಚಿತ್ರಕ್ಕೆ ಅಬಕಾರಿ ಇಲಾಖೆ ಉಪ ಆಯುಕ್ತೆ ಡಾ.ಮಹಾದೇವಿ ಬಾಯಿ ಹಾಗೂ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್ ನೇತೃತ್ವದಲ್ಲಿ ಪುಷ್ಪಾರ್ಚನೆ ಮಾಡಲಾಯಿತು.

ಮೈಸೂರು ಅರವಿಂದನಗರದ ಖಾಸಗಿ ಕಲ್ಯಾಣ ಮಂಟಪ ದಲ್ಲಿ ಮೈಸೂರು ಬಂಜಾರ ನೌಕರರ ಬಳಗ ಹಾಗೂ ಗೋರ್ ಸೀಕವಾಡಿ ಕಟಮಾಳೋ ಸಂಯುಕ್ತಾಶ್ರಯದಲ್ಲಿ ನಡೆದ ಸಂತ ಸೇವಾಲಾಲ್ ಜಯಂತಿಯಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್ ಮಾತನಾಡಿ, ಜನಪದ ಚರಿತ್ರೆಯಲ್ಲಿ ಕೆಲ ಪವಾಡ ಪುರುಷರು ಬದುಕಿ, ಮುಂದಿನ ಪೀಳಿಗೆಗೆ ತಮ್ಮ ಸಾಧನೆಯ ಕುರುಹುಗಳನ್ನು ಬಿಟ್ಟು ಹೋಗಿದ್ದಾರೆ. ಆ ಸಾಲಿನಲ್ಲಿ ಸಂತ ಸೇವಾಲಾಲ್ ಮುಂಚೂಣಿ ಯಲ್ಲಿದ್ದಾರೆ. ಸಂತ ಸೇವಾಲಾಲ್‍ರ ಜೀವಿತಾವಧಿಯಲ್ಲಿ ಹಲವು ಪವಾಡಗಳನ್ನು ಮಾಡಿರುವ ಬಗ್ಗೆ ಜನಪದ ಸಾಹಿತ್ಯದಲ್ಲಿ ಉಲ್ಲೇಖವಾಗಿರುವ ಬಗ್ಗೆ ವಿವರಿಸಿದರು.

ಬಂಜಾರ, ಲಂಬಾಣಿ ಸೇರಿದಂತೆ ಇತರೆ ಉಪ ಪಂಗ ಡದ ಯುವಕರು ದೇಶದ ಯಾವುದೇ ಮೂಲೆಯಲ್ಲಿ ನೆಲೆಸಿದ್ದರೂ ಎಲ್ಲರೂ ಒಗ್ಗಟ್ಟಾಗಬೇಕು. ಸರ್ಕಾರಿ ಸಲವತ್ತು ಗಳನ್ನು ಪಡೆದುಕೊಳ್ಳುವ ಬಗ್ಗೆ ಪರಸ್ವರ ಮಾಹಿತಿ ವಿನಿ ಮಯ ಮಾಡಿಕೊಳ್ಳಬೇಕು. ಇತ್ತೀಚೆಗೆ ಸಮಾಜದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ಹಿರಿಯರಿಂದ ಕಾಲಕಾಲಕ್ಕೆ ಸಲಹೆ ಪಡೆದು ಕೊಳ್ಳುವಂತೆ ಕಿವಿಮಾತು ಹೇಳಿದರು.

ಅಬಕಾರಿ ಇಲಾಖೆ ಉಪ ಆಯುಕ್ತೆ ಡಾ.ಮಹಾದೇವಿ ಬಾಯಿ ಮಾತನಾಡಿ, ದೇಶದ ನಾನಾ ಭಾಗದಲ್ಲಿ ನೆಲೆಸಿ ರುವ ಬಂಜಾರ ಸಮುದಾಯ ಸಂತ ಸೇವಾಲಾಲ್‍ರ ಅನುಯಾಯಿಗಳಾಗಿದ್ದು, ಅವರ ತತ್ವಾದರ್ಶಗಳನ್ನು ಅಳ ವಡಿಸಿಕೊಂಡು ಮುನ್ನಡೆಯಬೇಕು. ಅಲ್ಲದೆ ಕಲ್ಯಾಣ ಕರ್ನಾಟಕ, ಗುಜರಾತ್, ರಾಜಾಸ್ಥಾನ, ಮಹಾರಾಷ್ಟ, ಆಂಧ್ರಪ್ರದೇಶ, ಹಾಗೂ ತಮಿಳುನಾಡಿನಲ್ಲಿ ಪ್ರಮುಖವಾಗಿ ನೆಲೆ ಕಂಡುಕೊಂಡಿದ್ದಾರೆ. ಬಂಜಾರ ಸಮುದಾಯದ ವೇಷಭೂಷಣ ಭಾರತೀಯ ಶ್ರೀಮಂತ ಕಲಾ ಸಂಸ್ಕøತಿಗೆ ಅಪಾರ ಕೊಡುಗೆ ನೀಡಿದೆ ಎಂದರು.

ಸ್ವಾತಂತ್ರ್ಯ ಬಂದ ನಂತರ ನಮ್ಮ ಆಚಾರ-ವಿಚಾರಗಳನ್ನು ಪರಿಗಣಿಸಿ, ಅನುಸೂಚಿತ ಬುಡಕಟ್ಟು ಜನಾಂಗ ಎಂದು ಪರಿಗಣಿಸಿದೆ. ದೇಶದ ವಿವಿಧೆಡೆ ನಮ್ಮ ಸಮುದಾಯ 7 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿದೆ. ಸಂತ ಸೇವಾಲಾಲ್ ದೇವಸ್ಥಾನ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸೂರುಗೊಂಡನಕೊಪ್ಪದಲ್ಲಿದ್ದು, ಶಿವರಾತ್ರಿ ದಿನದಂದು ದೇಶದ ನಾನಾ ಭಾಗಗಳಿಂದ ಆಗಮಿಸಿ ಸಂತ ಸೇವಾಲಾಲ್ ಕೃಪೆಗೆ ಪಾತ್ರರಾಗಿದ್ದಾರೆ ಎಂದರು.

ಈ ವೇಳೆ ಉದ್ಯಮಿ ಬಾಲಾಜಿ ನಾಯ್ಕ್, ಗೋರ್ ಸೀಕವಾಡಿ ರಾಜ್ಯ ಸಂಚಾಲಕ ಭೋಜರಾಜ್ ನಾಯ್ಕ್, ಸೇವಾಲಾಲ್ ಜಯಂತಿ ಆಚರಣಾ ಸಮಿತಿ ಪದಾ ಧಿಕಾರಿಗಳಾದ ಉಪನ್ಯಾಸಕ ಮಾದಪ್ಪನ್‍ನಾಯ್ಕ್, ರೈಲ್ವೆ ಸಿಬ್ಬಂದಿ ರಾಜೇಶ್ ನಾಯ್ಕ, ಪೊಲೀಸ್ ಸಿಬ್ಬಂದಿ ಮೇಘ ರಾಜ್ ನಾಯ್ಕ್, ಎನ್.ಕೆ.ಪುಟ್ಟಪ್ಪ, ರವಿಕುಮಾರ್, ಪ್ರಾಧ್ಯಾ ಪಕ ಗಣೇಶ್ ಬಿ.ನಾಯ್ಕ್, ಚೇತನಾ ಬಾಂಣ್ಹೊತ್, ತಿಪ್ಪೇರುದ್ರಪ್ಪ, ಶ್ರೀಧರ್ ನಾಯ್ಕ್ ಉಪಸ್ಥಿತರಿದ್ದರು.

Translate »