ಮೈಸೂರು ಮೈಮ್ ಟೀಮ್‍ನಿಂದ ನಾಟಕ `ಒಂದು ಚಿತ್ರಕಥೆ’ ಪ್ರದರ್ಶನ
ಮೈಸೂರು

ಮೈಸೂರು ಮೈಮ್ ಟೀಮ್‍ನಿಂದ ನಾಟಕ `ಒಂದು ಚಿತ್ರಕಥೆ’ ಪ್ರದರ್ಶನ

February 16, 2021

ಮೈಸೂರು,ಫೆ.15(ಆರ್‍ಕೆಬಿ)-ಮೈಸೂರು ಮೈಮ್ ಟೀಮ್ ವತಿಯಿಂದ ಫೆ.21 ರಂದು ಸಂಜೆ 7 ಗಂಟೆಗೆ ಮೈಸೂರಿನ ಕಲಾ ಮಂದಿರದ ಕಿರುರಂಗ ಮಂದಿರದಲ್ಲಿ `ಒಂದು ಚಿತ್ರಕಥೆ’ ನಾಟಕ ಏರ್ಪಡಿಸಲಾಗಿದೆ ಎಂದು ಮೈಸೂರು ಮೈಮ್ ಟೀಮ್‍ನ ನಿರ್ದೇಶಕ ಜಿ.ಪಿ.ಗೌರಮ್ ತಿಳಿಸಿದರು.

ಮೈಮ್ ಮತ್ತು ಆಂಗಿಕಾಭಿನಯ ತರಬೇತಿಯನ್ನು ಹವ್ಯಾಸಿ ರಂಗ ಕಲಾವಿದರಿಗೆ ಉಚಿತವಾಗಿ ನೀಡುತ್ತಿರುವ ಮೈಮ್ ಟೀಮ್, ಈಗಾಗಲೇ ಸಾಕಷ್ಟು ಮೂಕಾ ಭಿನಯದ ಪ್ರಕಾರಗಳನ್ನು ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸಿದೆ. ಸನ್ಮಾನ ಬೇಕಾ, ನನಗ್ಯಾಕೋ ಡೌಟು, ದಿ ಕೋರ್ಟ್ ಮಾರ್ಷಲ್ ನಾಟಕಗಳ ಯಶಸ್ವಿ ಪ್ರದರ್ಶನ ಬಳಿಕ ಇದೀಗ 1954ರಲ್ಲಿ ಪರ್ವತವಾಣಿ ರಚಿಸಿದ `ಒಂದು ಚಿತ್ರಕಥೆ’ ನಾಟಕವನ್ನು 5 ತಿಂಗಳ ನಿರಂತರ ಅಭ್ಯಾಸದೊಂದಿಗೆ ಅಭಿನಯಿಸುತ್ತಿದ್ದೇವೆ. ನಾಟಕವನ್ನು ವಿನಯ್ ನೀನಾಸಂ ನಿರ್ದೇಶಿಸಿದ್ದಾರೆ ಎಂದರು.

Translate »