ರಸ್ತೆ ಸುರಕ್ಷತೆಗಾಗಿ ಎನ್.ಆರ್.  ಸಂಚಾರ ಪೊಲೀಸರಿಂದ ಬೈಕ್ ರ್ಯಾಲಿ
ಮೈಸೂರು

ರಸ್ತೆ ಸುರಕ್ಷತೆಗಾಗಿ ಎನ್.ಆರ್. ಸಂಚಾರ ಪೊಲೀಸರಿಂದ ಬೈಕ್ ರ್ಯಾಲಿ

February 16, 2021

ಮೈಸೂರು, ಫೆ. 15(ಆರ್‍ಕೆ)- 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸದ ಅಂಗವಾಗಿ ಎನ್.ಆರ್. ಸಂಚಾರ ಠಾಣೆ ಪೊಲೀಸರು ಭಾನುವಾರ ಮೈಸೂರಿನಲ್ಲಿ ಬೈಕ್ ರ್ಯಾಲಿ ಮೂಲಕ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಿದರು.

ಮೈಸೂರಿನ ಸೆಂಟ್ ಫಿಲೋಮಿನಾ ಚರ್ಚ್ ಆವರಣದಲ್ಲಿ ಆರಂಭವಾದ ಬೈಕ್ ರ್ಯಾಲಿಗೆ ಸಂಚಾರ ವಿಭಾಗದ ಎಸಿಪಿ ಸಂದೇಶ್‍ಕುಮಾರ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಮೈಸೂರು ಬೈಕ್ ರೈಡರ್ಸ್ ಅಸೋಸಿಯೇಷನ್ ಸಹಯೋಗದಲ್ಲಿ ನಡೆದ ರ್ಯಾಲಿಯು, ಅಶೋಕ ರಸ್ತೆ, ನೆಹರು ಸರ್ಕಲ್, ಇರ್ವಿನ್ ರಸ್ತೆ, ಸರ್ಕಾರಿ ಆಯುರ್ವೇದ ಕಾಲೇಜು ಸರ್ಕಲ್, ಸಯ್ಯಾಜಿರಾವ್ ರಸ್ತೆ, ಹೈವೇ ಸರ್ಕಲ್, ಎಲ್‍ಐಸಿ ಸರ್ಕಲ್, ಫೌಂಟನ್ ಸರ್ಕಲ್ ಮೂಲಕ ಅಶೋಕ ರಸ್ತೆಯಲ್ಲಿ ಸಾಗಿ ಮರಳಿ ಸೆಂಟ್ ಫಿಲೋಮಿನಾ ಚರ್ಚ್ ಬಳಿ ಅಂತ್ಯಗೊಂಡಿತು. ಮಾರ್ಗದುದ್ದಕ್ಕೂ ಸಂಚಾರ ನಿಯಮಗಳನ್ನು ಪಾಲಿಸಿ ಅಪಘಾತಗಳನ್ನು ತಪ್ಪಿಸುವ ಮೂಲಕ ರಸ್ತೆ ಸುರಕ್ಷತೆಗೆ ಸಹಕರಿಸಬೇಕೆಂದು ಅರಿವು ಮೂಡಿಸುವ ಹ್ಯಾಂಡ್ ಬಿಲ್‍ಗಳನ್ನು ರ್ಯಾಲಿ ನಿರತ ಬೈಕ್ ಸವಾರರು ಸಾರ್ವಜನಿಕರಿಗೆ ಹಂಚಿದರು. ರ್ಯಾಲಿಯಲ್ಲಿ ಸಂಚಾರ ಪೊಲೀ ಸರೂ ಸೇರಿ ನೂರಾರು ಮಂದಿ ಪಾಲ್ಗೊಂಡಿದ್ದರು. ಎನ್.ಆರ್. ಸಂಚಾರ ಠಾಣೆ ಇನ್‍ಸ್ಪೆಕ್ಟರ್ ಪ್ರಸನ್ನಕುಮಾರ್, ಸಬ್‍ಇನ್‍ಸ್ಪೆಕ್ಟರ್ ರಘು, ಎಎಸ್‍ಐಗಳಾದ ಪುರುಷೋತ್ತಮ್, ಶಿವ ರಾಮಚಂದ್ರ, ರಾಜು ಹಾಗೂ ಸಿಬ್ಬಂದಿಗಳೂ ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ್ದರು.

 

Translate »