ನಾಯಿಗೆ ಲೈಂಗಿಕ ಕಿರುಕುಳ: ವಿಕೃತ ಕಾಮುಕನ ವಿರುದ್ಧ ಪ್ರಕರಣ ದಾಖಲು
ಮೈಸೂರು

ನಾಯಿಗೆ ಲೈಂಗಿಕ ಕಿರುಕುಳ: ವಿಕೃತ ಕಾಮುಕನ ವಿರುದ್ಧ ಪ್ರಕರಣ ದಾಖಲು

February 16, 2021

ಮೈಸೂರು, ಫೆ.15- ವಿಕೃತ ಕಾಮುಕನೊಬ್ಬ ಬೀದಿ ನಾಯಿಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಮೈಸೂರಿನ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೀಪಲ್ ಫಾರ್ ಅನಿಮಲ್ಸ್(ಪಿಎಫ್‍ಎ) ಸಂಸ್ಥೆಯ ಪ್ರಾಣಿ ಕ್ಷೇಮಾಭಿವೃದ್ಧಿ ಅಧಿಕಾರಿ ಕೆ.ಬಿ.ಹರೀಶ್ ಅವರು ಸೋಮವಾರ ದೂರು ನೀಡಿದ ಮೇರೆಗೆ, ದುಷ್ಕøತ್ಯವೆಸಗಿರುವ ವಿಕೃತ ಕಾಮುಕನ ವಿರುದ್ಧ ಐಪಿಸಿ 1860(ಯು/ಎಸ್-377); prevention of cruelty to animals act (ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವುದು) 1960(ಯು/ಎಸ್-11(1)(ಎ))ರಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಡಿಯೋ ವೈರಲ್: ಗೋಕುಲಂ 3ನೇ ಹಂತ ಗಣಪತಿ ದೇವಸ್ಥಾನದ ಮುಖ್ಯರಸ್ತೆ ಬಳಿ ಫೆ.11ರ ರಾತ್ರಿ 9.45ರ ಸಮಯದಲ್ಲಿ ವ್ಯಕ್ತಿಯೊಬ್ಬ ನಾಯಿಗೆ ಲೈಂಗಿಕ ಕಿರುಕುಳ ನೀಡುವುದನ್ನು ದಾರಿಹೋಕರೊಬ್ಬರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದರು. ಆ ದುಷ್ಕøತ್ಯದ ವಿಡಿಯೋ ವೈರಲ್ ಆಗಿ, ಪಿಎಫ್‍ಎ ಅಧಿಕಾರಿ ಕೆ.ಬಿ.ಹರೀಶ್ ಅವರಿಗೂ ಕಳುಹಿಸಿದ್ದರು. ಇಂದು ಆಧಾರ ಸಹಿತ ಪೊಲೀಸರಿಗೆ ದೂರು ನೀಡಿದ್ದಾರೆ. ವಿಡಿಯೋ ಆಧರಿಸಿ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಆದರೂ ಪೊಲೀಸರ ತನಿಖೆಯ ನಂತರವಷ್ಟೇ ನಾಯಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಕಾಮುಕ ಯಾರೆಂಬುದು ತಿಳಿಯಲಿದೆ.

ಎಚ್ಚರ, ಎಚ್ಚರ: ವಾಹನಗಳ ಸಂಚಾರವಿರುವಾಗಲೇ ರಸ್ತೆ ಬದಿಯೇ ಮೂಕಪ್ರಾಣಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ. ತಮ್ಮ ಲೈಂಗಿಕ ತೃಷೆಗಾಗಿ ಪ್ರಾಣಿಗಳನ್ನೂ ಬಳಸಿಕೊಳ್ಳುವ ಇಂತಹ ಕಾಮುಕರು, ಒಂಟಿಯಾಗಿ ಓಡಾಡುವ ಮಹಿಳೆಯರು, ಮಕ್ಕಳನ್ನು ಸುಮ್ಮನೆ ಬಿಡುವರೇ ಎಂಬ ಆತಂಕ ಕಾಡುತ್ತಿದೆ. ಇಂತಹ ಪಾಪಿಗಳನ್ನು ಹಿಡಿದು, ಕಠಿಣ ಶಿಕ್ಷೆ ನೀಡದಿದ್ದರೆ ಯಾರೂ ನಿರ್ಭಯವಾಗಿ ಓಡಾಡಲು ಸಾಧ್ಯವಿಲ್ಲ. ಈ ಬಗ್ಗೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ವಹಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Translate »