ಸಾರ್ವಜನಿಕರೊಂದಿಗೆ ಪೊಲೀಸರ ಸಾಮರಸ್ಯ ಅಗತ್ಯ
ಮೈಸೂರು

ಸಾರ್ವಜನಿಕರೊಂದಿಗೆ ಪೊಲೀಸರ ಸಾಮರಸ್ಯ ಅಗತ್ಯ

October 10, 2018

ಹುಣಸೂರು:  ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಗಳ ನಡುವೆ ಹೊಂದಾಣಿಕೆ ಇಲ್ಲದ ಕಾರಣ ಸಾರ್ವಜನಿಕ ರೊಂದಿಗಿನ ಸಾಮರಸ್ಯದ ಕೊರತೆಯಿಂದಾಗಿ ಠಾಣೆಗಳಲ್ಲಿ ಜಾತಿ ವಿಂಗಡಣೆ ಕೆಲಸ ನಡೆಯುತ್ತಿದೆ ಎಂದು ಜಿಲ್ಲಾ ದಸಂಸ ಸಂಚಾ ಲಕ ನಿಂಗರಾಜ್ ಮಲ್ಲಾಡಿ ದೂರಿದರು.

ನಗರದ ಪೊಲೀಸ್ ಠಾಣೆಯಲ್ಲಿ ಏರ್ಪ ಡಿಸಿದ್ದ ಎಸ್‍ಸಿ, ಎಸ್‍ಟಿ ಹಿತರಕ್ಷಣಾ ಸಭೆ ಯಲ್ಲಿ ಮಾತನಾಡಿದ ಅವರು, ಕಷ್ಟ, ನೋವು, ದೌರ್ಜನ್ಯಗಳಂತಹ ಘಟನೆ ಯಿಂದ ನೊಂದು ನ್ಯಾಯಕ್ಕಾಗಿ ಬರುವ ಅಸಹಾಯಕರಿಗೆ ಠಾಣೆಗಳನ್ನು ಜಾತಿ ವೈಷಮ್ಯ ಬಿತ್ತಲಾಗುತ್ತಿದೆ. ಇದರಿಂದ ಸಾರ್ವ ಜನಿಕರಲ್ಲಿ ಪೊಲೀಸರ ಬಗ್ಗೆ ನಂಬಿಕೆಗಳು ಕಡಿಮೆಯಾಗುತ್ತಿವೆ ಎಂದರು.

ತಾಲೂಕು ಅದಿ ಜಾಂಬವ ಸಮಾಜದ ಅಧ್ಯಕ್ಷ ಶಿವಣ್ಣ ಮಾತನಾಡಿ, ರಾಷ್ಟ್ರ ನಾಯಕ ಬಾಬು ಜಗಜೀವನ್‍ರಾಮ್ ಅವರ ಭವನದ ಮುಂದೆಯೇ ವೈನ್‍ಸ್ಟೋರ್ ಇದ್ದು, ಇದರ ತೆರವಿಗೆ ಸಾಕಷ್ಟು ಬಾರಿ ಒತ್ತಾಯಿ ಸಿದರೂ. ಈ ಬಗ್ಗೆ ಕ್ರಮಕೈಗೊಂಡಿಲ್ಲ ಎಂದು ದೂರಿದರು.

ಅಲ್ಲದೆ ನಗರದ ಸೇತುವೆ ಬಳಿಯಲ್ಲಿ ರುವ ಲಿಕ್ಕರ್ ಶಾಪ್ ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 11ರವರೆಗೆ ವೈನ್ಸ್ ವ್ಯವಹಾರ ಮಾಡುತ್ತಿದೆ. ಇದರಿಂದ ಪಕ್ಕದಲ್ಲೇ ಇರುವ ಪ.ಜಾತಿಯ ಸಮುದಾಯದವರ ಬಡಾ ವಣೆಯ ಮುಗ್ಧ ಜನರು ಇದಕ್ಕೆ ಮಾರು ಹೋಗುತ್ತಿದ್ದಾರೆ. ಇದರಿಂದ ಸಮು ದಾಯದ ಜನರು ಕುಡಿತಕ್ಕೆ ಒಳಗಾಗಿ ಅವರ ಜೀವನ ದುಸ್ಥಿತಿಯಾಗಿದೆ ಎಂದರು.
ನಗರದಾದ್ಯಂತ ಮುಖ್ಯ ವಾಣಿಜ್ಯ ರಸ್ತೆಗಳು ಮತ್ತು ಪ್ರಮುಖ ರಸ್ತೆಗಳ ಫುಟ್ ಪಾತ್ ವ್ಯಾಪಾರಿಗಳಿಂದ ಅವರಿಸಿದ್ದು, ಜನರ ಮತ್ತು ವಾಹನಗಳ ತಿರುಗಾಟಕ್ಕೆ ತೊಂದರೆಯಾಗಿದೆ. ಪೊಲೀಸರು ಕ್ರಮ ವಹಿಸಿದರೆ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬಹುದು ಎಂದರು.

ಸಮಾಜವಾದಿ ಪಕ್ಷದ ತಾಲೂಕು ಅಧ್ಯಕ್ಷ ಹಾಗೂ ಪುರಸಭಾ ಮಾಜಿ ಸದಸ್ಯ ಹೆಚ್.ಎಸ್. ವರದರಾಜು ಮಾತನಾಡಿ, ನಗರದ ಮಧ್ಯ ಭಾಗದಲ್ಲಿರುವ ಸಂತ-ಜೋಸೆಫರ ಶಾಲೆಗೆ ಸಾವಿರಾರು ಮಕ್ಕಳು ಹೋಗುತ್ತಾರೆ. ಈ ಶಾಲೆಗೆ ಸರಿಯಾದ ರಸ್ತೆಯಿಲ್ಲ. ವಕ್ಫ್ ಕಮಿಟಿಯವರು ಜಾಗ ನಮ್ಮದೆಂದು ತಿರುಗಾಡುವ ರಸ್ತೆಗೆ ಬೇಲಿ ಹಾಕಿಕೊಂಡಿದ್ದಾರೆ. ತಾಲೂಕು ಅಡಳಿತ ವಾಗಲಿ. ಉಪವಿಭಾಗದ ಸಹಾಯಕ ಅಯುಕ್ತರಾಗಲಿ ಮಕ್ಕಳಿಗೆ ಬೇಕಾಗುವ ರಸ್ತೆಯನ್ನು ಬಿಡಿಸಿ ಕೊಡುವ ಪ್ರಯತ್ನ ಮಾಡಿಲ್ಲ ಎಂದು ಅಪಾದಿಸಿದರು.

ಡಿ.ಕುಮಾರ್ ಮಾತನಾಡಿ, ನಗರದ ಶಾಲಾ ಕಾಲೇಜಿನ ಬಳಿ ಯುವಕರ ಮೋಟಾರ್ ಬೈಕ್‍ಗಳು ಅತಿ ವೇಗವಾಗಿ ಮತ್ತು ಹೆಚ್ಚು ಶಬ್ಧದಿಂದ ತಿರುಗಾಡುವ ಮೂಲಕ ಹೆಣ್ಣು ಮಕ್ಕಳಿಗೆ ತೊಂದರೆ ನೀಡುತ್ತಿದ್ದಾರೆ. ಇದರ ಬಗ್ಗೆ ಪೊಲೀಸರು ಹೆಚ್ಚು ಗಮನಹರಿಸುತ್ತಿಲ್ಲ ಎಂದು ದೂರಿದರು. ನಗರ ವ್ಯಾಪ್ತಿಯಲ್ಲಿ ಈ ಹಿಂದೆ ಅಳವಡಿಸಿದ್ದ ಸಿ.ಸಿ.ಕ್ಯಾಮರಾಗಳು ಹಾಳಾಗಿದ್ದು, ಅಳವಡಿಸಿದ ಏಜೆನ್ಸಿಯವರನ್ನು ಕೇಳಿದರೆ ಅವಧಿ ಮುಗಿದಿದೆ. ನೀವೆ ದುರಸ್ಥಿ ಮಾಡಿಸಿಕೊಳ್ಳಿ ಎಂದು ಹೇಳುತ್ತಿದ್ದಾರೆ. ನಗರ ಸಭೆಯ ನೂತನ ಅಧ್ಯಕ್ಷರು ಇಲ್ಲೆ ಇದಿರಾ, ನಿಮ್ಮ ನಗರಸಭೆಯಿಂದಲಾದರೂ ದುರಸ್ಥಿ ಮಾಡಿಸಿಕೊಡಿ ಎಂದು ವೃತ ನೀರಿಕ್ಷಕ ಪೂವಯ್ಯ ಮನವಿ ಮಾಡಿಕೊಂಡರು. ಸಭೆಯಲ್ಲಿ ಬಲ್ಲೇನಹಳ್ಳಿ ಕೆಂಪರಾಜು, ವಕೀಲ ಪುಟ್ಟರಾಜು, ಗಜೇಂದ್ರ. ದೇವೇಂದ್ರ, ಮಹದೇವು, ರತ್ನಪುರಿ ಪುಟ್ಟಸ್ವಾಮಿ ಇನ್ನು ಅನೇಕ ದಲಿತ ಮುಖಂಡರು ಭಾಗ ವಹಿಸಿದ್ದರು.

Translate »