ಗ್ರಾಮೀಣ ದಸರಾ ಮೂಲಕ ಸಂಸ್ಕೃತಿ, ಕಲೆ ಉಳಿವು ಸಾಧ್ಯ-ಶಾಸಕ ಹೆಚ್.ವಿಶ್ವನಾಥ್
ಮೈಸೂರು

ಗ್ರಾಮೀಣ ದಸರಾ ಮೂಲಕ ಸಂಸ್ಕೃತಿ, ಕಲೆ ಉಳಿವು ಸಾಧ್ಯ-ಶಾಸಕ ಹೆಚ್.ವಿಶ್ವನಾಥ್

October 12, 2018

ಹುಣಸೂರು: ನಾಡಿನ ಪಾರಂಪರಿಕ ಗ್ರಾಮೀಣ ಕಲೆಗಳನ್ನು ಗ್ರಾಮೀಣ ದಸರಾ ಕಾರ್ಯಕ್ರಮದಲ್ಲಿ ಪ್ರದರ್ಶಿಸುವ ಮೂಲಕ ಕಲೆಗಳನ್ನು ಉಳಿಸಿಕೊಳ್ಳಬಹುದು ಎಂದು ಶಾಸಕ ಹೆಚ್.ವಿಶ್ವನಾಥ್ ತಿಳಿಸಿದರು.

ತಾಲೂಕಿನ ಬಿಳಿಕೆರೆ ಗ್ರಾಮದಲ್ಲಿ ಗ್ರಾಮೀಣ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾಡಹಬ್ಬಗಳ ಆಚರಣೆ ಮೂಲಕ ಸಾಂಪ್ರದಾಯಿಕ ಗ್ರಾಮೀಣ ಕಲೆಗಳನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕಾಗಿದೆ ಎಂದರು.

ಬಿಳಿಕೆರೆಯ ಕಾಲೇಜು ಮುಂಭಾಗದಿಂದ ಹೊರಟ ಗ್ರಾಮೀಣ ದಸರಾ ಮೆರವಣಿಗೆಯು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ಮಂಗಳವಾದ್ಯದೊಂದಿಗೆ ಕಳಸ ಹೊತ್ತ ಮಹಿಳೆಯರು, ಬೆಳ್ಳಿರಥದಲ್ಲಿ ತಾಯಿ ಚಾಮುಂಡೇಶ್ವರಿ ಮಾತೆಯ ಭಾವಚಿತ್ರವನ್ನು ಇಟ್ಟು ಮೆರವಣಿಗೆ ಸಾಗಿದ್ದು, ನಂದಿ ಕಂಬ ಕುಣಿತ, ಬೆಂಕಿಪುರದ ಕಲಾವಿದರಿಂದ ಮಾರಿಕುಣಿತ, ವೀರಗಾಸೆ ಕುಣಿತ, ಆಶಾ ಕಾರ್ಯಕರ್ತರು, ಶಾಲಾ ಮಕ್ಕಳು ಹಾಗೂ ಮದಕರಿನಾಯಕ ಸ್ತಬ್ದ ಚಿತ್ರ ಮೆರವಣಿಗೆಗೆ ಮೆರಗು ನೀಡಿದವು.

ಮೆರವಣಿಗೆಯಲ್ಲಿ ತಹಸೀಲ್ದಾರ್ ಮೋಹನ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ, ಜಿ.ಪಂ ಸದಸ್ಯೆ ಗೌರಮ್ಮ ಸೋಮಶೇಖರ್, ಮೈಮುಲ್‍ನ ಕೆ.ಎಸ್.ಕುಮಾರ್, ಕಾಳಿದಾಸ ನಾಯಕ, ಅಣ್ಣಯ್ಯನಾಯಕ, ತಾ.ಪಂ ಸದಸ್ಯರಾದ ಕೆಂಗಯ್ಯ, ಶಿವಣ್ಣ, ರಾಜೇಶ್, ಗ್ರಾ.ಪಂ ಅಧ್ಯಕ್ಷೆ ಶಾಂತಮ್ಮ, ಸದಸ್ಯರಾದ ಗೋವಿಂದಸ್ವಾಮಿ, ವೀರೇಶ್, ಕಾಲೇಜಿನ ಪ್ರಾಂಶುಪಾಲ ರವೀಶ್, ಉಪ ಪ್ರಾಂಶುಪಾಲ ಎಂ.ಮಹದೇವ್, ಕೃಷ್ಣಕುಮಾರ್, ಪಿಡಿಓ ಮಹದೇವು, ಎಪಿಎಂಸಿ ನಿರ್ದೇಶಕ ಪುಟ್ಟಸ್ವಾಮಿಗೌಡ, ವಡ್ಡರಳ್ಳಿ ಸ್ವಾಮಿಗೌಡ, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಪ್ರಸನ್ನ, ಮಧು, ಮಂಜು ಮತ್ತಿತರರು ಹಾಜರಿದ್ದರು.

Translate »