ಮೈಸೂರು: ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯಲ್ಲಿ ಶುಕ್ರವಾರ 2 ಹುಲಿ ಹಾಗೂ ಒಂದು ಆನೆ ಕಳೇಬರ ಪತ್ತೆಯಾಗಿವೆ. ಗುಂಡ್ಲುಪೇಟೆ ವರದಿ: ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹಿಮವದ್ ಗೋಪಾಲ ಸ್ವಾಮಿ ಬೆಟ್ಟ ಅರಣ್ಯವಲಯದಲ್ಲಿ ಗಂಡು ಹುಲಿಯೊಂದು ಸಾವನ್ನಪ್ಪಿದೆ. ಕಳೆದ 3 ದಿನಗಳಿಂದ ಕಾಡಂಚಿನ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ 12 ವರ್ಷ ಪ್ರಾಯದ ಈ ಗಂಡು ಹುಲಿಯು ಆಹಾರವಿಲ್ಲದೆ ನರಳಿ ಸತ್ತಿದೆ ಎಂದು ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ. ತಾಲೂಕಿನ ಹಂಗಳ ಸಮೀಪದ ಹಿರೀಕೆರೆ ಬಳಿ…
ಶುದ್ಧ ಕುಡಿಯುವ ನೀರಿನ ಘಟಕ ಕಾಮಗಾರಿ ಕಳಪೆ
November 18, 2018ಹುಣಸೂರು: ತಾಲೂಕಿನ ದ್ಯಾಂತ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಕಳಪೆ ಕಾಮಗಾರಿಯಿಂದ ಕೂಡಿದ್ದು, ಕಾಮಗಾರಿ ಗುತ್ತಿಗೆ ಪಡೆದ ಏಜನ್ಸಿ ಯನ್ನು ಕಪ್ಪುಪಟ್ಟಿಗೆ ಸೇರಿಸಿ, ತನಿಖೆಗೆ ಒಳಪಡಿಸುವಂತೆ ತಾಪಂ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಇಂದು ಪಟ್ಟಣದ ತಾಪಂ ಸಭಾಂಗಣ ದಲ್ಲಿ ಅಧ್ಯಕ್ಷೆ ಪದ್ಮಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ತಾಲೂಕಿನಾದ್ಯಂತ ಏಜೆನ್ಸಿಯೊಂದರಿಂದ ನಿರ್ಮಾಣವಾಗಿ ರುವ ಶುದ್ಧ ಕುಡಿಯುವ ನೀರಿನ ಘಟಕಗಳು ತೀರ ಕಳಪೆ ಕಾಮಗಾರಿಯಿಂದ ಕೂಡಿದ್ದು, ಜನರಿಗೆ ಕುಡಿಯುವ ನೀರು ನೀಡಲು ವಿಫಲ ವಾಗಿವೆ. ಕೂಡಲೇ ಏಜೆನ್ಸಿಯನ್ನು…
ಟಿಪ್ಪು ಸುಲ್ತಾನ್ ರೈತ ಪರ ಆಡಳಿತಗಾರ
November 11, 2018ಹುಣಸೂರು: ತಮ್ಮ ಆಡಳಿತ ವ್ಯವಸ್ಥೆಯಲ್ಲಿ ಕಂದಾಯ ಇಲಾಖೆ ಯನ್ನು ಸೃಷ್ಟಿ ಮಾಡಿದ್ದೇ ಟಿಪ್ಪು. ರೈತರ ಬಗ್ಗೆ ಕಾಳಜಿಯಿಂದ ಭೂಮಿ ಒಡೆತನ, ಆರ್‍ಟಿಸಿ ವಿಧಾನ ಜಾರಿಗೆ ತಂದ ಮಹಾನ್ ರಾಷ್ಟ್ರನಾಯಕ ಎಂದು ಶಾಸಕ ಎ.ಎಚ್.ವಿಶ್ವನಾಥ್ ಬಣ್ಣಿಸಿದರು. ನಗರದ ಅಂಬೇಡ್ಕರ್ ಭವನದಲ್ಲಿ ತಾಲೂಕು ನಾಡ ಹಬ್ಬಗಳ ಆಚರಣಾ ಸಮಿತಿಯಿಂದ ಏರ್ಪಡಿಸಿದ್ದ 269ನೇ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ರಾಷ್ಟ್ರಕ್ಕೆ ಸಕ್ಕರೆ ಮತ್ತು ಪರ್ಶಿಯನ್ ದೇಶದಿಂದ ರೇಷ್ಮೆ ತಂದಿದ್ದು, ಭೂ ಸುಧಾರಣೆ, ದಲಿತರಿಗೆ ಭೂಒಡೆತನ, ಹಿಂದೂ ದೇವಾಲಯ ಗಳ…
ಕಾಡಾನೆಗಳ ದಾಳಿ: ಬೆಳೆ ನಾಶ
November 4, 2018ಹುಣಸೂರು: ತಾಲೂಕಿನ ಹನಗೋಡು ಹೋಬಳಿಯ ಗುರುಪುರ ಭಾಗದಲ್ಲಿ ಕಾಡಾನೆಗಳ ಹಿಂಡು ದಾಳಿಗೆ ಭತ್ತ, ರಾಗಿ ಬೆಳೆ ನಾಶವಾಗಿದೆ. ಗುರುಪುರ ಸಮೀಪದ ಗೌಡನಕಟ್ಟೆಯ ಶ್ರೀನಿವಾಸಶೆಟ್ಟಿ ಹಾಗೂ ಬೀರೇಗೌಡರಿಗೆ ಸೇರಿದ ಭತ್ತದ ಗದ್ದೆಗೆ ಆನೆಗಳ ಹಿಂಡು ಲಗ್ಗೆ ಇಟ್ಟಿದ್ದು, ಭತ್ತದ ಫಸಲನ್ನು ತಿಂದು, ತುಳಿದು ನಾಶಪಡಿಸಿವೆ. ಆನೆಗಳು ಕಾಡಿಗೆ ವಾಪಾಸ್ ಆಗುವ ವೇಳೆ ಗ್ರಾಮದ ನಾಗನಾಯ್ಕ ಅವರಿಗೆ ಸೇರಿದ ಸುಮಾರು ಒಂದು ಎಕರೆಯಷ್ಟು ರಾಗಿ ಬೆಳೆಯನ್ನು ತಿಂದು ಹಾಕಿವೆ. ಒಟ್ಟಾರೇ ಬೆಳೆ ನಾಶದಿಂದ 2 ಲಕ್ಷ ರೂ.ಗಳಿಗೂ ಹೆಚ್ಚು ನಷ್ಟವಾಗಿದೆ….
ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ: ದಸರಾ ಆನೆ ಗೋಪಾಲಸ್ವಾಮಿ ಅಸ್ವಸ್ಥ
October 31, 2018ಹುಣಸೂರು: ಮತ್ತಿಗೋಡು ಶಿಬಿರದ ಆನೆ ರಂಗ ಅಲಿಯಾಸ್ ರೌಡಿ ರಂಗ ಬಸ್ ಡಿಕ್ಕಿ ಹೊಡೆದು ಮೃತಪಟ್ಟ ದುರಂತ ಜನಮಾನಸದಿಂದ ಮಾಸುವ ಮುನ್ನವೇ ದಸರಾ ಆನೆ ಗೋಪಾಲಸ್ವಾಮಿ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿದೆ ಎಂದು ವರದಿಯಾಗಿದೆ. ಗೋಪಾಲಸ್ವಾಮಿಯನ್ನು ಹಾಸನಕ್ಕೆ ಹುಲಿ ಸೆರೆ ಕಾರ್ಯಾಚರಣೆಗಾಗಿ ಸಾಗಿಸುತ್ತಿದ್ದ ವೇಳೆ ಆನೆ ಇದ್ದ ಲಾರಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ತುಂಡಾಗಿ ಆನೆಯ ಮೇಲೆ ಬಿದ್ದು, ವಿದ್ಯುತ್ ತಂತಿ ತಾಗಿ ಗೋಪಾಲಸ್ವಾಮಿ ಅಸ್ವಸ್ಥಗೊಂಡು ಸಾವು- ಬದುಕಿನ ಹೋರಾಟ ನಡೆಸುತ್ತಿದ್ದಾನೆ ಎಂದು…
ಹವಾಲಾ ಹಣ ದೋಚಲು ಹೊಂಚು ಹಾಕುತ್ತಿದ್ದ ಕೇರಳದ 9 ಮಂದಿ ಡಕಾಯಿತರ ಬಂಧನ
October 31, 2018ಹುಣಸೂರು: ಕೇರಳದಿಂದ ಬೆಂಗಳೂರಿಗೆ ಹವಾಲಾ ಹಣ ಸಾಗಿ ಸುವವರನ್ನು ದರೋಡೆ ನಡೆಸಲು ಮೂರು ತಂಡಗಳು ಹೊಂಚು ಹಾಕುತ್ತಿರು ವುದನ್ನು ಪತ್ತೆ ಹಚ್ಚಿದ ಹುಣಸೂರು ಪೊಲೀಸರು ಎರಡು ತಂಡಗಳ 9 ಡಕಾಯಿ ತರನ್ನು ಬಂಧಿಸಿ 3 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಕೇರಳದ ತ್ರಿಶೂರು ಜಿಲ್ಲೆ ನೆಡಪುಲ್ಲಾ ಗ್ರಾಮದ ಚೌಡಲ್ಲಿ ಹೌಸ್ ನಿವಾಸಿ ರೈಗನ್ (38), ಪಡಿಕ್ಕಪರಂಬ ಮುಪ್ಪಿಲಿಯಂ ನಿವಾಸಿ ವಿನೇಶ್ ಕುಮಾರ್(39), ವೈನಾಡ್ ಜಿಲ್ಲೆಯ ಸುಲ್ತಾನ್ ತೇಕಂ ಬೆಟ್ಟ ಗ್ರಾಮದ ಮೋಹನ್ ದಾಸ್(42), ಪುತೇಚನಂ ಗ್ರಾಮದ ಸತೀಶ್ ಕುಮಾರ್(39) ಅವರುಗಳು…
ಸಾರಿಗೆ ಬಸ್-ಟಿಪ್ಪರ್ ಡಿಕ್ಕಿ: ಸ್ಟಾಫ್ ನರ್ಸ್ ಸಾವು
October 30, 2018ಹುಣಸೂರು, ಅ. 29: ಇಂದು ಬೆಳಿಗ್ಗೆ ಸಾರಿಗೆ ಬಸ್ ಮತ್ತು ಜಲ್ಲಿ ತುಂಬಿದ ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿ, ಈ ಭೀಕರ ಅಪಘಾತದಲ್ಲಿ ಸ್ಟಾಫ್ ನರ್ಸ್ ಒಬ್ಬರು ಸಾವನ್ನಪ್ಪಿದ್ದಾರೆ. ಇತರ 20 ಮಂದಿ ಗಾಯಗೊಂಡಿದ್ದು, ಈ ಘಟನೆ ಹುಣಸೂರು ಹೆದ್ದಾರಿಯಲ್ಲಿ ಬಿಳಿಕೆರೆ ಬಳಿ ಸಂಭವಿಸಿದೆ. ಪಿರಿಯಾಪಟ್ಟಣ ತಾಲೂಕು ಭೋಗನಹಳ್ಳಿ ಗ್ರಾಮದ ನಸ್ರುಲ್ಲಾ ಷರೀಫ್ ಪುತ್ರಿ ಸುನೇರ ಬಾನು(28) ಸಾವನ್ನಪ್ಪಿದ ಸ್ಟಾಫ್ ನರ್ಸ್. ಘಟನೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಮಲ್ಲಿಕಾರ್ಜುನ(35), ಕಂಡಕ್ಟರ್ ಸಮಂತ(28), ಬಸ್ ಪ್ರಯಾಣಿಕರಾದ ಹುಣಸೂರು ತಾಲೂಕಿನ…
ದಲಿತರಿಗೆ ಸಾಮಾಜಿಕ ಸಮಾನತೆ ಇನ್ನೂ ಸಿಕ್ಕಿಲ್ಲ: ರಾಜ್ಯ ದಸಂಸ ಮುಖಂಡ ಎನ್.ಮುನಿಸ್ವಾಮಿ ವಿಷಾದ
October 23, 2018ಹುಣಸೂರು: ಸಾವಿರಾರು ವರ್ಷಗಳಿಂದ ಸಾಮಾಜಿಕ ಸಮಾನತೆ ಗಾಗಿ ಅನೇಕ ಮಹಾನ್ ವ್ಯಕ್ತಿಗಳು ಹೋರಾ ಡುತ್ತಾ ಬಂದಿದ್ದರೂ ಅದು ಇನ್ನೂ ಸಿಕ್ಕಿಲ್ಲ ಎಂದು ರಾಜ್ಯ ದಸಂಸ ಮುಖಂಡರಾದ ಎನ್.ಮುನಿಸ್ವಾಮಿ ತಿಳಿಸಿದರು. ನಗರದ ಅಂಬೇಡ್ಕರ್ ಭವನದಲ್ಲಿ ತಾಲೂಕು ದಸಂಸ ಏರ್ಪಡಿಸಿದ್ದ ಸಾಮಾ ಜಿಕ ನ್ಯಾಯದ ನಿರಾಕರಣೆ ಮತ್ತು ದಲಿತ ಸಂಘರ್ಷದ ಸವಾಲುಗಳು ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂವಿಧಾನದಲ್ಲಿ ಸರ್ವರಿಗೂ ಸಮಾನತೆ ಕಲ್ಪಿಸುವ ಅವಕಾಶವಿದ್ದರೂ, ಸ್ವಾತಂತ್ರ್ಯ ದೊರೆತು 70 ವರ್ಷ ಕಳೆದರೂ ಈವರೆವಿಗೂ ಸಾಮಾಜಿಕ ಸಮಾನತೆ ಕಲ್ಪಿ…
ನೀತಿ ಸಂಹಿತೆ ಉಲ್ಲಂಘನೆ: ಅರಣ್ಯ ಸಚಿವರ ವಿರುದ್ಧ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
October 20, 2018ಹುಣಸೂರು: ಚುನಾ ವಣೆ ನೀತಿ ಸಂಹಿತೆ ಉಲ್ಲಂಘಿಸಿದ ಸಂಬಂಧ ಅರಣ್ಯ ಸಚಿವ ಶಂಕರ್ ಅವರ ವಿರುದ್ಧ ಕೆ.ಆರ್.ನಗರ ಪೆÇಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಸಂಬಂಧಿಸಿದಂತೆ ನವೆಂ ಬರ್ 3ರ ತನಕ ನೀತಿ ಸಂಹಿತೆ ಜಾರಿ ಯಲಿದ್ದು, 18.10.2018ರ ಗುರುವಾರ ದಂದು ಸಂಜೆ 6.20ರಲ್ಲಿ ಮೈಸೂರು ಕಡೆಯಿಂದ ಕೆ.ಎ-03 ಜಿ.ಎ-2727 ನಂಬರಿನ ಸರ್ಕಾರಿ ವಾಹನದಲ್ಲಿ ಅರಣ್ಯ ಸಚಿವರ ಕಾರು ಕೆ.ಅರ್.ನಗರದ ಕಡೆಗೆ ಚಲಿಸುವಾಗ ದೊಡ್ಡೇಕೊಪ್ಪಲು ಗ್ರಾಮದ ಬಳಿ ಇರುವ ಚುನಾವಣಾ…
ಹುಣಸೂರು ಬಳಿ ರಸ್ತೆ ಅಪಘಾತ: ಬಾಲಿವುಡ್ ಸಾಹಸ ನಿರ್ದೇಶಕ ದುರ್ಮರಣ
October 17, 2018ಹುಣಸೂರು: ಹಿಂದಿ ಚಿತ್ರರಂಗದ ಸ್ಟಂಟ್ ಮಾಸ್ಟರ್‌ಗಳು (ಸಾಹಸ ನಿರ್ದೇಶಕರು) ತೆರಳುತ್ತಿದ್ದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಉರುಳಿ ಬಿದ್ದ ಪರಿಣಾಮ ಮುಂಬೈ ಮೂಲದ ಒಬ್ಬ ಸ್ಟಂಟ್ ಮಾಸ್ಟರ್ ಸಾವನ್ನಪ್ಪಿದರೆ, ಚಾಲಕ ಸೇರಿದಂತೆ ಇಬ್ಬರು ಗಾಯಗೊಂಡಿರುವ ಘಟನೆ ಹುಣಸೂರು ತಾಲೂಕಿನ ಯಶೋಧರಪುರದ ಬಳಿಯಲ್ಲಿ ಮಂಗಳ ವಾರ ಮುಂಜಾನೆ ನಡೆದಿದೆ. ಸ್ಟಂಟ್ ಮಾಸ್ಟರ್ ಸತ್ತಾರ್ ಅಹಮದ್ ಖಾನ್(41) ದುರಂತದಲ್ಲಿ ಮೃತಪಟ್ಟವರು. ಮತ್ತೊಬ್ಬ ಸ್ಟಂಟ್ ಮಾಸ್ಟರ್ ಅರುಣ್‍ಕುಮಾರ್ ತೀವ್ರವಾಗಿ ಗಾಯಗೊಂಡಿದ್ದು, ಮೈಸೂರಿನ ಬೃಂದಾವನ್ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಾಲಕ ಉಮೇಶ್‍ಗೆ…