ಹವಾಲಾ ಹಣ ದೋಚಲು ಹೊಂಚು ಹಾಕುತ್ತಿದ್ದ ಕೇರಳದ 9 ಮಂದಿ ಡಕಾಯಿತರ ಬಂಧನ
ಮೈಸೂರು

ಹವಾಲಾ ಹಣ ದೋಚಲು ಹೊಂಚು ಹಾಕುತ್ತಿದ್ದ ಕೇರಳದ 9 ಮಂದಿ ಡಕಾಯಿತರ ಬಂಧನ

October 31, 2018

ಹುಣಸೂರು: ಕೇರಳದಿಂದ ಬೆಂಗಳೂರಿಗೆ ಹವಾಲಾ ಹಣ ಸಾಗಿ ಸುವವರನ್ನು ದರೋಡೆ ನಡೆಸಲು ಮೂರು ತಂಡಗಳು ಹೊಂಚು ಹಾಕುತ್ತಿರು ವುದನ್ನು ಪತ್ತೆ ಹಚ್ಚಿದ ಹುಣಸೂರು ಪೊಲೀಸರು ಎರಡು ತಂಡಗಳ 9 ಡಕಾಯಿ ತರನ್ನು ಬಂಧಿಸಿ 3 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ಕೇರಳದ ತ್ರಿಶೂರು ಜಿಲ್ಲೆ ನೆಡಪುಲ್ಲಾ ಗ್ರಾಮದ ಚೌಡಲ್ಲಿ ಹೌಸ್ ನಿವಾಸಿ ರೈಗನ್ (38), ಪಡಿಕ್ಕಪರಂಬ ಮುಪ್ಪಿಲಿಯಂ ನಿವಾಸಿ ವಿನೇಶ್ ಕುಮಾರ್(39), ವೈನಾಡ್ ಜಿಲ್ಲೆಯ ಸುಲ್ತಾನ್ ತೇಕಂ ಬೆಟ್ಟ ಗ್ರಾಮದ ಮೋಹನ್ ದಾಸ್(42), ಪುತೇಚನಂ ಗ್ರಾಮದ ಸತೀಶ್ ಕುಮಾರ್(39) ಅವರುಗಳು ಸೋಮವಾರ ರಾತ್ರಿ 11.30ರಲ್ಲಿ ಬಂಧಿಸಲ್ಪಟ್ಟ ಮೊದಲ ಡಕಾಯಿತಿ ತಂಡದವರಾದರೆ, ಮಧ್ಯರಾತ್ರಿ 1.30ರ ಸುಮಾರಿನಲ್ಲಿ ಮತ್ತೊಂದು ತಂಡದ ಕೇರಳದ ನೀಲಮಣಿಕರ ಪೆರಂಬಳ್ಳಿ ಗ್ರಾಮದ ನಿಖಿಲ್(30), ಕಣ್ಣೂರು ಜಿಲ್ಲೆಯ ತಾಲೀ ಪರಂಬ ಸಯ್ಯದ್ ನಗರದ ನಯಾಸ್(39), ಎರಟ್ಟಿ ತಾಲೂಕು ಪೋಯಲ್ ಚರ್ಚ್ ಕ್ಯಾಂಪ್ ನಿವಾಸಿ ಸಾಜಿ ಜೋಷ್(47), ಮುಂಡಾಯಂ ಪರಂಬ ಗ್ರಾಮದ ಅನೀಷ್ ಥಾಮಸ್(37), ಮುಪ್ಪಿಲಂ ಗ್ರಾಮದ ರಿತೀಶ್(36) ಬಂಧಿತ ಡಕಾಯಿತರಾಗಿದ್ದಾರೆ.

ಎರಡನೇ ತಂಡವನ್ನು ಪೊಲೀಸರು ಬಂಧಿಸಿದ ವೇಳೆ ಜಾಗೃತಗೊಂಡ ಮೂರನೇ ತಂಡದ ಡಕಾಯಿತರಾದ ಕೇರಳದ ಸುಖೀಸ್, ರಜಾಕ್ ಮತ್ತು ಕ್ರಷ್ ಎಂಬುವರು ತಮ್ಮ ಕಾರನ್ನು ಅಲ್ಲೇ ಬಿಟ್ಟು ಅರಣ್ಯದೊಳಗೆ ನುಗ್ಗಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮೂರೂ ತಂಡಗಳಿಗೂ ಸುಬ್ಬು ಎಂಬಾತನೇ ನಾಯಕನಾಗಿದ್ದು, ಹವಾಲಾ ಹಣವನ್ನು ದರೋಡೆ ಮಾಡಲು ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಿವರ: ಹುಣಸೂರು ಹೆದ್ದಾರಿ ಗಸ್ತು ಪೊಲೀಸರು ಸೋಮವಾರ ರಾತ್ರಿ 11.30ರ ಸುಮಾರಿನಲ್ಲಿ ಕುಪ್ಪೆ ಕೊಳಗಟ್ಟ ಬಳಿ ಇನ್ನೋವಾ ಕಾರು (ಕೆಎಲ್ 64 ಎಫ್ 8569) ಅನುಮಾನಾಸ್ಪದವಾಗಿ ನಿಂತಿದ್ದನ್ನು ಕಂಡು ಅದರಲ್ಲಿ ನಾಲ್ವರನ್ನು ಹಿಡಿದು ವಿಚಾರಣೆಗೊಳ ಪಡಿಸಿದಾಗ ಇವರುಗಳು ಸುಬ್ಬು ಎಂಬಾತನ ನೇತೃತ್ವದ ಡಕಾಯಿತಿ ತಂಡದವರು ಎಂದು ತಿಳಿದು ಬಂದಿದೆ. ಇಲವಾಲದಿಂದ ತಿತಿಮತಿವರೆಗಿನ ರಸ್ತೆಯಲ್ಲಿ ಒಟ್ಟು ಮೂರು ತಂಡಗಳು ಕೇರಳಾದಿಂದ ಬೆಂಗಳೂರಿಗೆ ಸಾಗಿಸುವ ಹವಾಲಾ ಹಣವನ್ನು ದರೋಡೆ ಮಾಡಲು ಹೊಂಚು ಹಾಕುತ್ತಿದೆ ಎಂಬುದು ವಿಚಾರಣೆ ವೇಳೆ ತಿಳಿದಿದೆ.

ತಕ್ಷಣವೇ ಕಾರ್ಯ ಪ್ರವೃತ್ತರಾದ ಪೊಲೀಸರು, ಇನ್ನುಳಿದ ಎರಡೂ ತಂಡಗಳನ್ನು ಬಂಧಿಸಲು ವ್ಯೂಹ ರಚನೆ ಮಾಡುವಷ್ಟರಲ್ಲಿ ಅನುಮಾನಗೊಂಡ ಮತ್ತೆರಡು ಡಕಾಯಿತಿ ತಂಡಗಳ ಸದಸ್ಯರು, ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಡಕಾಯಿತರ ಮೊಬೈಲ್ ಸಂಪರ್ಕದಿಂದ ಕಡಿತಗೊಂಡಿದ್ದಾರೆ. ಇವರುಗಳು ಅವರಿಗೆ ಕರೆ ಮಾಡಿದರೂ ಸಂಪರ್ಕಕ್ಕೆ ಸಿಗದಂತೆ ಮೊಬೈಲ್‍ನಲ್ಲಿ ಸೆಟ್ಟಿಂಗ್ ಮಾಡಿಕೊಂಡಿದ್ದಾರೆ.

ಆದರೆ ಪೊಲೀಸರು ಇಲವಾಲದಿಂದ ತಿತಿಮತಿವರೆಗಿನ ರಸ್ತೆಯಲ್ಲಿ ಸಂಚರಿಸಿ ಪರಿಶೀಲನೆ ನಡೆಸುತ್ತಿದ್ದ ವೇಳೆ ರಸ್ತೆಯಿಂದ ಸುಮಾರು 50 ಮೀಟರ್ ಅರಣ್ಯದೊಳಗೆ ಮತ್ತೊಂದು ಇನ್ನೋವಾ ಕಾರು (ಕೆಎಲ್ 63 ಬಿ 1583) ನಿಂತಿರುವುದು ಗೋಚರಿಸಿದೆ. ತಕ್ಷಣವೇ ಅದನ್ನು ಸುತ್ತುವರಿದ ಪೊಲೀಸರು, ಎರಡನೇ ಡಕಾಯಿತಿ ತಂಡವನ್ನು ಸೆರೆ ಹಿಡಿದಿದ್ದಾರೆ. ಅಲ್ಲಿಂದ ಅನತಿ ದೂರದಲ್ಲೇ ಮತ್ತೊಂದು ಕಾರು (ಕೆಎಲ್ 08 ಎವೈ 1794) ನಿಂತಿರುವುದು ಕಂಡು ಬಂದಿದೆ. ಆದರೆ ಅದರಲ್ಲಿದ್ದ ಡಕಾಯಿತರು ಅರಣ್ಯದೊಳಗೆ ನುಸುಳಿ ಪರಾರಿಯಾಗಿ ದ್ದಾರೆ. ಬಂಧಿಸಲ್ಪಟ್ಟ ಡಕಾಯಿತರಿಂದ ವಶಪಡಿಸಿಕೊಂಡ ಕಾರುಗಳಲ್ಲಿ ಕಬ್ಬಿಣದ ರಾಡುಗಳು ಮತ್ತು ದೊಣ್ಣೆಗಳು ಪತ್ತೆಯಾಗಿವೆ. ಬಂಧಿತ ಡಕಾಯಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿ ಎಲ್ಲರನ್ನೂ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಹುಣಸೂರು ಸರ್ಕಲ್ ಇನ್ಸ್‍ಪೆಕ್ಟರ್ ಪೂವಯ್ಯ, ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಶಿವಪ್ರಕಾಶ್, ಸಿಬ್ಬಂದಿಗಳಾದ ರವಿಸ್ವಾಮಿ, ದೊಡ್ಡಯ್ಯ, ಶ್ರೀನಿವಾಸ, ಲಿಂಗರಾಜಪ್ಪ, ದಿನೇಶ್, ಶಿವಪ್ರಕಾಶ್, ಅಲೀಂ, ಸುರೇಶ್, ಕುಮಾರ, ಮಂಜು, ಮನೋಹರ, ಅನಿಲ್ ಅವರುಗಳು ಭಾಗವಹಿಸಿದ್ದರು.

Translate »