ತಾಲೂಕು ಆಡಳಿತದಿಂದ ಅಲೆಮಾರಿ ಕುಟುಂಬಗಳಿಗೆ ನೆಲೆ
ಮೈಸೂರು

ತಾಲೂಕು ಆಡಳಿತದಿಂದ ಅಲೆಮಾರಿ ಕುಟುಂಬಗಳಿಗೆ ನೆಲೆ

October 9, 2018

ಹುಣಸೂರು:  ತಾಲೂಕಿನ ಅರಸು ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಗಳೂರು ಮಾಳ ಗ್ರಾಮದ ಡೋಂಗ್ರಿ ಗೆರಾಸಿಯಾ ಜಾತಿಯ ನಿರ್ಗತಿಕ 28 ಅಲೆಮಾರಿ ಕುಟುಂಬಗಳಿಗೆ ಮನೆಗಳನ್ನು ಕಟ್ಟಿಕೊಡಲು ಕ್ರಮ ಕೈಗೊಳ್ಳ ಲಾಗುವುದು ಎಂದು ಹುಣಸೂರು ತಾಲೂಕು ಪಂಚಾಯಿತಿ ಕಾರ್ಯ ನಿರ್ವ ಹಣಾಧಿಕಾರಿ ಕೃಷ್ಣಕುಮಾರ್ ತಿಳಿಸಿದರು.

ಇತ್ತೀಚೆಗೆ ಮಂಗಳೂರು ಮಾಳ ಗ್ರಾಮಕ್ಕೆ ಭೇಟಿ ನೀಡಿ ನಿರ್ಗತಿಕ ಅಲೆ ಮಾರಿ ಕುಟುಂಬಗಳ ಸ್ಥಿತಿಗತಿಗಳ ಬಗ್ಗೆ ಹುಣಸೂರು ತಾಲೂಕು ದಸಂಸ ಆಯೋ ಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಮಾತ ನಾಡಿದ ಅವರು, ಹುಟ್ಟು ಸಾವುಗಳಿಗೆ ದಾಖಲೆ ಇಲ್ಲದೆ ಪ್ರಾಣಿ – ಪಕ್ಷಿಗಳ ರೀತಿ ವಾಸ ಮಾಡುತ್ತಿದ್ದಾರೆ. ನೆಲೆ ಇಲ್ಲದೆ ಊರೂರು ಅಲೆಯುತ್ತಾ, ಅವಮಾನ ಮತ್ತು ಹಂಗಿನ ಜೀವನವನ್ನು ಸಾಗಿಸುತ್ತಿ ರುವ ಇಂತಹ ನಿರ್ಗತಿಕ ಅಲೆಮಾರಿ ಕುಟುಂಬಗಳಿಗೆ ನೆಲೆ ಕಲ್ಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ದಸಂಸ ಅನೇಕ ವರ್ಷಗಳಿಂದ ಹೋರಾಟ ಮಾಡಿದ ಫಲವಾಗಿ ಸಮಗ್ರ ಗಿರಿಜನ ಉಪಯೋಜನೆಯಡಿ 28 ನಿರ್ಗತಿಕ ಅಲೆಮಾರಿ ಕುಟುಂಬಗಳಿಗೆ ಸರ್ಕಾರ ಮನೆಗಳನ್ನು ಮಂಜೂರು ಮಾಡಿದೆ. ಅದರಂತೆ ಈ ನಿರ್ಗತಿಕ ಅಲೆಮಾರಿ ಕುಟುಂಬಗಳಿಗೆ ಅರಸು ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ದಾಖಲೆಗಳನ್ನು ಪರಿಶೀಲಿಸಿ ಆಶ್ರಯ ಯೋಜನೆಯ ನಿಯಮದಂತೆ ನೋಂದಣಿ ಮಾಡಿಸಿ ಕೊಂಡು ನಿರ್ಮಿತಿ ಕೇಂದ್ರದಿಂದ ಮನೆ ಗಳನ್ನು ಕಟ್ಟಿಕೊಡಲಾಗುವುದು ಎಂದರು.

ದಸಂಸ ಜಿಲ್ಲಾ ಸಂಚಾಲಕ ನಿಂಗರಾಜ್ ಮಲ್ಲಾಡಿ ಮಾತನಾಡಿ, ಇಂತಹ ನಿರ್ಗತಿಕ ಅಲೆಮಾರಿ ಕುಟುಂಬಗಳನ್ನು ಗುರುತಿಸಿ ಅವರ ನೋವು ನಲಿವುಗಳಿಗೆ ಸ್ಪಂದಿಸಿ ಈ ಕುಟುಂಬಗಳಿಗೆ ನೆಲೆ ಕಲ್ಪಿಸಿಕೊಡು ವಂತೆ ಸರ್ಕಾರಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿ, ಹೋರಾಟ ಮಾಡಿದ ಫಲವಾಗಿ ಮನೆ ಮಂಜೂರಾಗಿದೆ ಎಂದರು.

ಗುಣಮಟ್ಟದ ಮನೆಗಳನ್ನು ಕಟ್ಟಿ ಕೊಟ್ಟು ಈ ನಿರ್ಗತಿಕ ಕುಟುಂಬಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವನ್ನು ದಸಂಸ ತಾಲೂಕು ಆಡಳಿತದ ಸಹಯೋಗದಲ್ಲಿ ಮಾಡುತ್ತಿದೆ ಎಂದರು. ತಾಲೂಕು ಗಿರಿಜನ ಕಲ್ಯಾಣಾಧಿಕಾರಿ ಕೆ.ಮಂಜುಳಾ, ಗಿರಿಜನ ಕ್ಷೇತ್ರಾಧಿಕಾರಿ ಶಂಕರ್, ಅರಸು ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಪ್ರದೀಪ್, ಮಹದೇವ, ದಸಂಸ ತಾಲೂಕು ಮುಖಂಡರಾದ ದೇವೇಂದ್ರ, ಗಜೇಂದ್ರ, ಅಲೆಮಾರಿ ಮುಖಂಡರಾದ ಶಂಕರಪ್ಪ, ಶಿವಾಜಿ ಮತ್ತಿತರರು ಹಾಜರಿದ್ದರು.

Translate »