ವಿವಿಧ ವಿನ್ಯಾಸದ ಗಣೇಶ ಮಹೋತ್ಸವ
ಮೈಸೂರು

ವಿವಿಧ ವಿನ್ಯಾಸದ ಗಣೇಶ ಮಹೋತ್ಸವ

October 9, 2018

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಸಂದರ್ಭದಲ್ಲಿ ಕೃಷ್ಣರಾಜ ಕ್ಷೇತ್ರ, ವಾರ್ಡ್ ನಂ.51ರ ಕೆಂಪನಂಜಾಂಬ ಅಗ್ರ ಹಾರದ(ಲಕ್ಷ್ಮಿ ಟಾಕೀಸ್ ಎದುರು ರಸ್ತೆ) ಕೆ.ಆರ್.ಮೊಹಲ್ಲಾ, ಮೈಸೂರು. ಇಲ್ಲಿ ಶ್ರೀ ವಿನಾಯಕ ಯುವಕರ ಭಕ್ತ ಮಂಡಳಿ ವತಿ ಯಿಂದ ಕಳೆದ 34 ವರ್ಷಗಳಿಂದಲೂ ಅದ್ಧೂರಿಯಾಗಿ ವಿವಿಧ ವಿನ್ಯಾಸದ ಗಣೇಶ ಮಹೋತ್ಸವವನ್ನು ಆಚರಿಸಲಾಗುತ್ತಿದೆ.

ಈ ವರ್ಷವೂ ಕೂಡ ಕೈಲಾಸ ಪರ್ವತ ವನ್ನು ಹೋಲುವ ರೀತಿಯಲ್ಲಿ ಎಲ್ಲಾ ದೇವಾನು ದೇವತೆಗಳಾದ ಶಿವ, ಪಾರ್ವತಿ, ಆಂಜನೇಯ, ಅನಂತಪದ್ಮನಾಭ, ಗರುಡ ಮತ್ತು ನಾಡ ದೇವತೆ ಶ್ರೀ ಚಾಮುಂಡೇಶ್ವರಿ ವಿಗ್ರಹವನ್ನು ನಿರ್ಮಿಸಿ ಅವುಗಳೊಂದಿಗೆ ವಿಶೇಷ ಹೂವಿನ ಅಲಂಕಾರ ಮಾಡುವುದರೊಂದಿಗೆ ಗಣೇಶ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಇದೇ ರೀತಿ ವಿವಿಧ ಅಲಂಕಾರಗಳೊಂದಿಗೆ ಅ.7ರಿಂದ 13ರವರೆಗೆ ಗಣೇಶ ಮಹೋತ್ಸವ ಆಚರಿಸ ಲಾಗುತ್ತದೆ. ಅ.12ರಂದು ಅನ್ನಸಂತರ್ಪಣಾ ಕಾರ್ಯಕ್ರಮವನ್ನು ದೇವಾಂಬ ಅಗ್ರಹಾರದ ಸೀತಾಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳ ಲಾಗಿದ್ದು, ಅಂದು 2 ಸಾವಿರಕ್ಕೂ ಹೆಚ್ಚು ಮಂದಿಗೆ ಅನ್ನದಾನ ಮಾಡಲಾಗುವುದು. ಅನಂತರ ಅ.13ರಂದು ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಲ್ಲಿ ಅದ್ಧೂರಿ ಮೆರವಣಿಗೆ ಯೊಂದಿಗೆ ವಿಸರ್ಜಿಸಲಾಗುವುದು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶಾಸಕ ಎಸ್.ಎ.ರಾಮದಾಸ್ ಮತ್ತು ವಾರ್ಡ್ ನಂ. 51ರ ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ಮೊಹಲ್ಲಾ ನಿವಾಸಿಗಳು ಅ.9ರಂದು ಸಂಜೆ 7.30ಕ್ಕೆ ಆಗಮಿಸಲಿದ್ದಾರೆ.

ಈ ಸಂದರ್ಭ ದಲ್ಲಿ ಶ್ರೀ ವಿನಾಯಕ ಯುವಕರ ಭಕ್ತ ಮಂಡಳಿ ಸದಸ್ಯರಾದ ಹರೀಶ್, ರವಿ, ಮಹೇಶ್, ಪ್ರಕಾಶ್, ವೆಂಕಟೇಶ್ ಕಾಮತ್ ಹಾಜರಿರುತ್ತಾರೆ.

Translate »