ಮೈಸೂರು ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಶ್ರೀದೇವಿ ನವರಾತ್ರಿ ಕಾರ್ಯಕ್ರಮ
ಮೈಸೂರು

ಮೈಸೂರು ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಶ್ರೀದೇವಿ ನವರಾತ್ರಿ ಕಾರ್ಯಕ್ರಮ

October 9, 2018

ಮೈಸೂರು: ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿರುವ ನಾದ ಮಂಟಪ ದಲ್ಲಿ ಶ್ರೀದೇವಿ ನವರಾತ್ರಿ ಉತ್ಸವಗಳು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮತ್ತು ದತ್ತ ವಿಜಯಾ ನಂದ ತೀರ್ಥ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಅ.10ರಿಂದ 20ರವರೆಗೆ ಹಮ್ಮಿಕೊಳ್ಳಲಾಗಿದೆ. ಅ.10 ರಿಂದ 20ರವರೆಗೆ ಪ್ರತಿನಿತ್ಯ ಬೆಳಿಗ್ಗೆ 9 ಗಂಟೆಗೆ ಶ್ರೀದೇವಿ ಪಲ್ಲಕ್ಕಿ ಉತ್ಸವ, ಕುಮಾರಿ ಪೂಜೆ, ಶ್ರೀಚಕ್ರ ಪೂಜೆ, ನವಾವರಣ ಪೂಜೆ, ಸಂಗೀತ/ಭಜನೆ, ಮಧ್ಯಾಹ್ನ 12 ಗಂಟೆಗೆ ಅನ್ನಾರ್ಚನೆ, ದೇವಿ ಪೂಜೆ, ಹೋಮ ಪೂರ್ಣಾಹುತಿ, ಸಾಯಂಕಾಲ 4 ಗಂಟೆಗೆ ಮಹಾ ಮಂಗಳಾರತಿ, ಡೋಲೋತ್ಸವ, ಸುವಾಸಿನಿ ಪೂಜೆ, ಸಂಜೆ 6 ಗಂಟೆಗೆ ಪೂಜ್ಯ ಶ್ರೀ ಸ್ವಾಮೀಜಿಯವರಿಂದ ದೇವಿ ಭಜನೆ ಮತ್ತು ಪ್ರವಚನ. ಅ.10ರಿಂದ 19ರವರೆಗೆ ಪ್ರತಿ ದಿನ ಬೆಳಿಗ್ಗೆ 9 ಗಂಟೆಗೆ ಸಂಗೀತ/ಭಜನೆ ಕಾರ್ಯಕ್ರಮ. ಬೆಳಿಗ್ಗೆ 9 ಗಂಟೆಗೆ ಕರ್ನಾಟಕ ಗಾಯನ-ವಿದುಷಿ ಸುಧಾ, ಮೈಸೂರು, 10.30 ಗಂಟೆಗೆ ಕರ್ನಾಟಕ ಗಾಯನ-ವಿದುಷಿ ಯಾಮಿನಿ ಕೃಷ್ಣ, ಶ್ರೀಕಾಕುಲಂ, ಅ.11ರಂದು ಬೆಳಿಗ್ಗೆ 9 ಗಂಟೆಗೆ ಭಜನೆ, ಅಕಿವೀಡು ಭಜನೆ ಮಂಡಳಿಯವರಿಂದ, 10.30 ಗಂಟೆಗೆ ಭಜನೆ, ಶ್ರೀಕಾಕುಲಂ ಭಜನೆ ಮಂಡಳಿ ಯವರಿಂದ, ಅ.12ರಂದು ಬೆಳಿಗ್ಗೆ 9 ಗಂಟೆಗೆ ಭಜನೆ, ವಿಜಯವಾಡ ಭಜನೆ ಮಂಡಳಿ ಯವರಿಂದ, ಅ.13ಕ್ಕೆ ಭಜನೆ, ಚೆನ್ನೈ ಭಜನೆ ಮಂಡಳಿಯವರಿಂದ, ಅ.14ಕ್ಕೆ ಬೆಳಿಗ್ಗೆ 9 ಗಂಟೆಗೆ ಭಜನೆ, ಬೆಂಗಳೂರು ಭಜನೆ ಮಂಡಳಿಯವರಿಂದ, ಅ.15ಕ್ಕೆ ಭಜನೆ, ರಾಜ ಮಂಡ್ರಿ ಭಜನೆ ಮಂಡಳಿಯವರಿಂದ, ಅ.16ಕ್ಕೆ ಭಜನೆ, ಕೊಚ್ಚಿ ಭಜನೆ ಮಂಡಳಿಯವರಿಂದ, ಅ.17ಕ್ಕೆ ಭಜನೆ, ಹೈದರಾಬಾದ್ ಭಜನೆ ಮಂಡಳಿಯವರಿಂದ, ಅ.18ಕ್ಕೆ ಸಂಗೀತ ಕಾರ್ಯಕ್ರಮ, ಕರ್ನಾಟಕ ಗಾಯನ ವಿದುಷಿ ಸುಷ್ಮಾ ಸೋಮಶೇಖರ್, ವಿದುಷಿ ಸುಧಾ ಅಯ್ಯರ್, ಪಿಟೀಲು, ವಿದ್ವಾನ್ ದೆಹಲಿ ಸಾಯಿರಾಂ, ಮೃದಂಗ, ಅ.19ಕ್ಕೆ ಭಜನೆ, ಮೈಸೂರು ಭಜನೆ ಮಂಡಳಿ ಯವರಿಂದ, ಅ.20ರಂದು ಬೆಳಿಗ್ಗೆ 10 ಗಂಟೆಗೆ ಶಾಂತಿ ಹೋಮ, ನವರಾತ್ರಿ ಮಂಗಳಾಚರಣೆ.

Translate »