ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸದ ಮೋದಿ ಸರ್ಕಾರದ ವಿರುದ್ಧ ವಿನೂತನ ಪ್ರತಿಭಟನೆ
ಮೈಸೂರು

ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸದ ಮೋದಿ ಸರ್ಕಾರದ ವಿರುದ್ಧ ವಿನೂತನ ಪ್ರತಿಭಟನೆ

October 9, 2018

ಮೈಸೂರು:  ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಸಲಾಗುತ್ತಿದ್ದು, ಸಾಮಾನ್ಯ ಜನರ ಬದುಕು ದುಸ್ತರವಾಗಿದೆ ಎಂದು ಆರೋಪಿಸಿ ನರೇಂದ್ರ ಮೋದಿ ಯವರ ಭಾವಚಿತ್ರದ ಎದುರು `ಎಳ್ಳು ನೀರು’ ಬಿಡುವ ಅಣಕು ಪ್ರದರ್ಶನದ ಮೂಲಕ ಕೇಂದ್ರ ಸರ್ಕಾರದ ಆಡಳಿತ ವೈಖರಿಯನ್ನು ಖಂಡಿಸಲಾಯಿತು.

ಮೈಸೂರಿನ ಚಿಕ್ಕಗಡಿಯಾರದ ಆವ ರಣದಲ್ಲಿ ಮೈಸೂರು ರಕ್ಷಣಾ ವೇದಿಕೆಯ ಯುವ ಘಟಕದ ವತಿಯಿಂದ ಸೋಮ ವಾರ ಹಮ್ಮಿಕೊಂಡಿದ್ದ ಅಣಕು ಪ್ರದ ರ್ಶನ ಪ್ರತಿಭಟನೆಯಲ್ಲಿ ಮೋದಿ ಆಡಳಿತದ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ವಾಹನಗಳ ಬೆಲೆ ಏರಿಕೆ ಯಾಗಿದೆ. ಇಂಧನ ಬೆಲೆ ನಿತ್ಯ ಹೆಚ್ಚಳ ವಾಗುತ್ತಲೇ ಸಾಗಿದೆ. ವಾಹನ ವಿಮೆಯ ಶುಲ್ಕದ ಜೊತೆಗೆ 750 ರೂಪಾಯಿಗೂ ಹೆಚ್ಚು ಹಣ ನೀಡಿ ಮತ್ತೊಂದು ವಿಮೆ ಖರೀದಿಸಬೇಕಾದ ಅನಿವಾರ್ಯತೆ ಸೃಷ್ಟಿ ಮಾಡಲಾಗಿದೆ. ಆ ಮೂಲಕ ದೇಶದ ಸಾಮಾನ್ಯ ಜನರನ್ನು ಸುಲಿಗೆ ಮಾಡ ಲಾಗುತ್ತಿದೆ ಎಂದು ಕಿಡಿಕಾರಿದರು.

ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಡಿಎಲ್ ನವೀಕರಣದ ದಂಡದ ಮೊತ್ತವನ್ನು ರೂ. 100ರಿಂದ ಸಾವಿರ ರೂ.ಗೆ ಹೆಚ್ಚಳ ಮಾಡಲಾಗಿದೆ. ವಾಹನದ ಎಫ್‍ಸಿ, ವಾಹನದ ಮಾಲೀಕತ್ವ ಬದಲಾವಣೆ ಸೇರಿದಂತೆ ಹಲವು ಪ್ರಕ್ರಿಯೆಗಳಿಗೆ ತಿಂಗಳಿಗೆ 300ರಿಂದ 500 ರೂ. ದಂಡ ನಿಗದಿ ಮಾಡಲಾಗಿದೆ. ಈ ರೀತಿ ದುಬಾರಿ ಹಣ ಸಂದಾಯ ಮಾಡುತ್ತಿದ್ದರೂ ಮನೆ ಬಾಗಿಲಿಗೇನೂ ಇವರು ಸೇವೆ ಒದಗಿಸುತ್ತಿಲ್ಲ. ಈ ಹಿಂದಿನಂ ತೆಯೇ ಆರ್‍ಟಿಓ ಕಚೇರಿಗೆ ಹತ್ತು ಬಾರಿ ತಿರುಗುವ ಸನ್ನಿವೇಶವಂತೂ ಬದಲಾ ಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂಧನ ದರವೂ ಎಗ್ಗಿಲ್ಲದೆ ಏರಿಕೆ ಯಾಗುತ್ತಲೇ ಇದೆ. ಅಗತ್ಯ ವಸ್ತುಗಳ ವ್ಯಾಪ್ತಿಯಲ್ಲಿರುವ ಔಷಧ ಪದಾರ್ಥಗಳನ್ನು ಜಿಎಸ್‍ಟಿ ವ್ಯಾಪ್ತಿಗೆ ತಂದಿರುವ ಮೋದಿ ಸರ್ಕಾರ, ಇಂಧನವನ್ನು ಮಾತ್ರ ಜಿಎಸ್‍ಟಿಯಿಂದ ಹೊರಗಿಟ್ಟಿದೆ ಎಂದು ಕಿಡಿಕಾರಿದರು.

ದುಬಾರಿ ತೆರಿಗೆ ತೆತ್ತುತ್ತಿದ್ದರೂ ಕೇಂದ್ರ ಸರ್ಕಾರ ರಾಜ್ಯದ ಕೊಡಗು ಜಿಲ್ಲೆಯ ಪ್ರವಾಹ ಸಂತ್ರಸ್ತರಿಗೆ ಯಾವುದೇ ಪರಿ ಹಾರದ ಪ್ಯಾಕೇಜ್ ನೀಡಿಲ್ಲ. ಈ ಎಲ್ಲಾ ಕಾರಣಗಳಿಂದ ಬೇಸತ್ತು ಮಹಾಲಯ ಅಮಾವಾಸ್ಯೆ ದಿನವಾದ ಇಂದು ಮೋದಿ ಯವರ ಮೇಲಿದ್ದ ವಿಶ್ವಾಸಕ್ಕೆ ಎಳ್ಳು ನೀರು ಬಿಡುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಾಲಿಕೆ ಮಾಜಿ ಸದಸ್ಯ ಪ್ರಶಾಂತ ಗೌಡ, ವೇದಿಕೆಯ ಯುವ ಘಟ ಕದ ಅಧ್ಯಕ್ಷ ಗುರುರಾಜ್ ಶೆಟ್ಟಿ, ವೇದಿಕೆ ಕಾರ್ಯಕರ್ತರಾದ ರಾಜೀವ್, ಎಸ್.ಎನ್. ರಾಜೇಶ್, ಹರೀಶ್ ನಾಯ್ಡು, ಶಿವು, ನಿತಿನ್, ಸಂತೋಷ್, ಬಾಲರಾಜ್, ಪ್ರಶಾಂತ್, ತನು, ರವಿ, ಪ್ರಜ್ವಲ್ ಮತ್ತಿತರರು ಪ್ರತಿ ಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »