ಕೆಂಚಲಗೂಡು ಸುತ್ತ ವಿದ್ಯುತ್ ಅಕ್ರಮ ಸಂಪರ್ಕ: ಕ್ರಮಕ್ಕೆ ಆಗ್ರಹಿಸಿ ರೈತ ಸಂಘ ಪ್ರತಿಭಟನೆ
ಮೈಸೂರು

ಕೆಂಚಲಗೂಡು ಸುತ್ತ ವಿದ್ಯುತ್ ಅಕ್ರಮ ಸಂಪರ್ಕ: ಕ್ರಮಕ್ಕೆ ಆಗ್ರಹಿಸಿ ರೈತ ಸಂಘ ಪ್ರತಿಭಟನೆ

December 8, 2018

ಮೈಸೂರು: ಮೈಸೂರು ತಾಲೂಕಿನ ಜಯಪುರ ಹೋಬಳಿಯ ಕೆಂಚಲಗೂಡು ಗ್ರಾಮದ ಸುತ್ತಮುತ್ತ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿರುವವರ ವಿರುದ್ಧ ಹಾಗೂ ಅಕ್ರಮಗಳಿಗೆ ಸಾಥ್ ನೀಡುತ್ತಿರುವ ಲೈನ್‍ಮನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಶುಕ್ರವಾರ ವಿಜಯನಗರ ಒಂದನೇ ಹಂತದಲ್ಲಿ ರುವ ಸೆಸ್ಕ್ ಕಚೇರಿ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಕೆಂಚಲಗೂಡು ಗ್ರಾಮದ ಸರ್ಕಾರಿ ಭೂಮಿ ಸ.ನಂ.14ರ ಒತ್ತು ವರಿದಾರರು ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡಿ ದ್ದಾರೆ. ಅವರ ವಿರುದ್ಧ ಇದುವರೆಗೂ ಕ್ರಮ ಕೈಗೊಂಡಿಲ್ಲ. ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮಗಳಲ್ಲಿ ಅಮಾಯಕರು ವಿದ್ಯುತ್ ಬಿಲ್ ಪಾವತಿಸಲು ಒಂದೆರಡು ದಿನ ತಡವಾದರೆ ಸಂಪರ್ಕ ಕಡಿತ ಮಾಡುವ ಸೆಸ್ಕ್ ಸಿಬ್ಬಂದಿ ಅಕ್ರಮ ವಾಗಿ ವಿದ್ಯುತ್ ಸಂಪರ್ಕ ಪಡೆದಿರುವವರ ವಿರುದ್ಧ ಕ್ರಮ ಕೈಗೊಳ್ಳದೇ ಸುಮ್ಮನಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಕ್ರಮ ಗಳಿಗೆ ಲೈನ್‍ಮನ್‍ವೊಬ್ಬರು ಸಾಥ್ ನೀಡುತ್ತಿದ್ದಾರೆ. ಕೂಡಲೆ ಅಕ್ರಮ ಸಂಪರ್ಕವನ್ನು ಕಡಿತಗೊಳಿಸುವುದರೊಂದಿಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಪಿ.ಮರಂಕಯ್ಯ, ಆನಂ ದೂರು ಪ್ರಭಾಕರ್, ನಾಗನಹಳ್ಳಿ ವಿಜಯೇಂದ್ರ, ಮಂಡಕಳ್ಳಿ ಮಹೇಶ್, ಸರಗೂರು ನಟರಾಜ್, ಲೋಕೇಶ್ ರಾಜ್ ಅರಸ್, ಆನಂದೂರು ದಿನೇಶ್, ನಾಗನಹಳ್ಳಿ ಚಂದ್ರಶೇಖರ್ ಇತರರು ಪಾಲ್ಗೊಂಡಿದ್ದರು.

Translate »