ಮೈಸೂರಲ್ಲಿ ನಾಳೆ ಸಾವಯವ, ನೈಸರ್ಗಿಕ ಕೃಷಿಕರ ಸಂತೆ
ಮೈಸೂರು

ಮೈಸೂರಲ್ಲಿ ನಾಳೆ ಸಾವಯವ, ನೈಸರ್ಗಿಕ ಕೃಷಿಕರ ಸಂತೆ

December 8, 2018

ಮೈಸೂರು: ರೈತರು ಬೆಳೆದ ಸಾವಯವ ತರಕಾರಿ, ಹಣ್ಣುಗಳನ್ನು ನೇರವಾಗಿ ನಾಗರಿಕರಿಗೆ ತಲುಪಿಸಲು ಸ್ವದೇಶಿ ಜಾಗರಣ್ ಮಂಚ್ ಮತ್ತು ಜನಚೇತನ ಟ್ರಸ್ಟ್ ವತಿಯಿಂದ ಡಿ.9ರಂದು ಬೆಳಿಗ್ಗೆ 6ರಿಂದ ರಾತ್ರಿ 11ರವರೆಗೆ ಮೈಸೂರಿನ ಜೆ.ಪಿ.ನಗರ ಪುಟ್ಟರಾಜ ಗವಾಯಿ ಕ್ರೀಡಾಂಗಣದಲ್ಲಿ ಸಾವಯವ ಹಾಗೂ ನೈಸರ್ಗಿಕ ಕೃಷಿಕರ ಸಂತೆ ನಡೆಯಲಿದೆ.

ಸ್ವದೇಶಿ ಜಾಗರಣ್ ಮಂಚ್‍ನ ರಾಜ್ಯ ಸಂಯೋಜಕ ಎನ್.ಆರ್. ಮಂಜುನಾಥ್ ಅವರು ಶುಕ್ರವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ವಿಷಮುಕ್ತ ಆಹಾರ ಸೇವನೆಯ ಲಾಭಗಳ ಕುರಿತು ಜನ ಜಾಗೃತಿ ಸಲುವಾಗಿ ಈ ಸಾವಯವ ತರಕಾರಿ, ಹಣ್ಣು, ಆಹಾರ ಪದಾರ್ಥಗಳು, ಸೊಪ್ಪು, ತಿಂಡಿ ತಿನಿಸುಗಳ ಸಾವಯವ ಹಾಗೂ ನೈಸರ್ಗಿಕ ಕೃಷಿಕರ ಸಂತೆ ಆಯೋಜಿಸಿರುವುದಾಗಿ ತಿಳಿಸಿದರು.

ಸಾವಯವ ಕೃಷಿಯಲ್ಲಿ ಬೆಳೆದ ಏಲಕ್ಕಿ ಬಾಳೆ, ಪಚ್ಚಬಾಳೆ, ಎಲ್ಲಾ ರೀತಿಯ ಸೊಪ್ಪು, ಸಾವಯವ ಕಬ್ಬಿನ ಹಾಲು, ಸಾವಯನ ಬೆಲ್ಲ, ಮೆಣಸಿನ ಕಾಯಿ, ಎಲ್ಲಾ ರೀತಿಯ ತರಕಾರಿ ಹಾಗೂ ಹಣ್ಣು ಗಳು, ಸಿರಿಧಾನ್ಯದ ಬಿತ್ತನೆ ಬೀಜ, ತರಕಾರಿ ಸೊಪ್ಪಿನ ದೇಶಿ ಬಿತ್ತನೆ ಬೀಜ, ದೇಶೀ ಹಸುಗಳ ಹಾಲು, ಬೆಣ್ಣೆ, ತುಪ್ಪ, ಎಮ್ಮೆ ಬೆಣ್ಣೆ ಮತ್ತು ತುಪ್ಪ, ರಾಜಮುಡಿ ಅಕ್ಕಿ, ಸೋನಾ ಮಸೂರಿ ಅಕ್ಕಿ, ಸಣ್ಣ ಅಕ್ಕಿ, ಎಳ್ಳು, ಮೆಣಸು ಎಲ್ಲಾ ರೀತಿಯ ಕಾಳುಗಳು, ನವಣೆ ಬಿಸಿ ಬೇಳೆ ಬಾತ್, ದೋಸೆ, ಮೊಸರನ್ನ, ಹುರಳಿಕಾಳಿನ ಚಟ್ನಿ, ಹುಣಸೆ ಹಣ್ಣಿನ ಜ್ಯೂಸ್, ಕೊರಲೆ ಪಾಯಸ, ವಾಂಗೀಬಾತ್, ಪುಳಿಯೋಗರೆ, ಕಜ್ಜಾಯ, ಉಪ್ಪಿನಕಾಯಿ, ಹಪ್ಪಳ ಸೇರಿದಂತೆ ವಿವಿಧ ತಿನಿಸುಗಳು ಸಂತೆಯಲ್ಲಿ ದೊರೆ ಯಲಿದೆ ಎಂದರು.

ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರಲ್ಲಿ ಜಾಗೃತಿ ಮೂಡಿಸಿ ಆತ್ಮಹತ್ಯೆ ತಡೆಗೆ ಹಾಗೂ ರೈತರ ಬೆಳೆಗಳಿಗೆ ಉತ್ತಮ ಬೆಲೆ ದೊರಕುವಂತೆ ಮಾಡುವಲ್ಲಿ ಸ್ವದೇಶಿ ಜಾಗರಣ್ ಮಂಚ್ ಇತರೆ ಸ್ಥಳೀಯ ಸಂಘಟನೆಗಳೊಂದಿಗೆ ಕೈಜೋಡಿಸಿ 3-4 ವರ್ಷಗಳಿಂದ ಹಾಸನ, ಮಂಡ್ಯ, ತಿಪ ಟೂರು, ತುಮಕೂರು ಇನ್ನಿತರ ಕಡೆಗಳಲ್ಲಿ ನಿಯಮಿತವಾಗಿ ರೈತರ ಸಂತೆಗಳನ್ನು ಆಯೋಜಿಸುತ್ತಾ ಬಂದಿದೆ.

ಈ ಸಂತೆಗಳು ಯಶಸ್ವಿಯಾಗಿ ನಡೆದು ರೈತರಿಗೆ ಲಾಭ ದೊರೆಯುತ್ತಿದೆ. ರೈತರು ತಾವು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೇ ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ. ಸ್ವದೇಶಿ ಜಾಗರಣ್ ಮಂಚ್ ರೈತರ ಆತ್ಮಹತ್ಯೆ ನಿಲುಗಡೆ ಹಾಗೂ ಅವರ ಬೆಳೆಗಳಿಗೆ ಉತ್ತಮ ಬೆಲೆ ದೊರಕುವಂತೆ ಸ್ಥಳೀಯ ಸಂಘಟನೆಗಳೊಂದಿಗೆ ಕೈಜೋಡಿಸಿ ಮೂರು ನಾಲ್ಕು ವರ್ಷ ಗಳಿಂದ ಹಾಸನ, ಮಂಡ್ಯ, ತಿಪಟೂರು, ತುಮಕೂರು, ಮೊದ ಲಾದ ಸ್ಥಳಗಳಲ್ಲಿ ನಿಯಮಿತವಾಗಿ ರೈತಸಂತೆಗಳನ್ನು ಆಯೋ ಜಿಸುತ್ತಿದೆ. ಈ ಸಂತೆಗಳು ಯಶಸ್ವಿಯಾಗಿ ರೈತರಿಗೆ ಲಾಭ ಸಿಗುತ್ತಿದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜನ ಚೇತನ ಟ್ರಸ್ಟ್ ಅಧ್ಯಕ್ಷ ಪ್ರಸನ್ನಗೌಡ, ನಟರಾಜ್, ಶಿವ ಕುಮಾರ್, ಮಹದೇವಸ್ವಾಮಿ ಉಪಸ್ಥಿತರಿದ್ದರು.

Translate »