ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ  `ಕೋಟಿ ಜನ-ಮನ ಪ್ರಶಸ್ತಿ’ ವಿತರಣೆ
ಮೈಸೂರು

ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ `ಕೋಟಿ ಜನ-ಮನ ಪ್ರಶಸ್ತಿ’ ವಿತರಣೆ

December 8, 2018

ಮೈಸೂರು:  ಪತ್ರಿಕೋದ್ಯಮಿ ರಾಜಶೇಖರ ಕೋಟಿ ಅವರ ಪ್ರಥಮ ಪುಣ್ಯ ಸ್ಮರಣೆ ಅಂಗವಾಗಿ ಮೈಸೂರಿನ ಜನನಿ ಸೇವಾ ಟ್ರಸ್ಟ್ ವತಿಯಿಂದ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಮಾಧ್ಯಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ `ಕೋಟಿ ಜನ-ಮನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಮೊದಲಿಗೆ ರಾಜಶೇಖರ ಕೋಟಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ನಂತರ ವಿವಿಧ ಕ್ಷೇತ್ರದ ಸಾಧಕರಾದ ಅಂಶಿ ಪ್ರಸನ್ನ ಕುಮಾರ್ (ಅತ್ಯುತ್ತಮ ವರದಿಗಾರ), ಪ್ರಗತಿ ಗೋಪಾಲಕೃಷ್ಣ (ಅತ್ಯು ತ್ತಮ ಪತ್ರಿಕಾ ಛಾಯಾಗ್ರಾಹಕ), ಆರ್.ಮಧುಸೂದನ್ (ಮಾಧ್ಯಮ ಛಾಯಾಗ್ರಾಹಕ), ಕೆ.ರಘುರಾಂ ವಾಜಪೇಯಿ (ಧಾರ್ಮಿಕ), ಡಾ. ಯದುಗಿರಿ (ಕಲೆ ಮತ್ತು ಸಂಗೀತ), ಬಿ.ಸಿ.ಅಣ್ಣಯ್ಯ (ಸಮಾಜ ಸೇವೆ), ಶಾಂತಕುಮಾರಿ (ಚುಟುಕು ಕವಯಿತ್ರಿ), ಬೋರಪ್ಪ (ರಾಜಕೀಯ), ಡಾ.ಆರ್.ಕಾಂತಾ (ಸಂಗೀತ), ಸಿದ್ದಲಿಂಗಯ್ಯ (ಸಂಸ್ಕøತಿ ಚಿಂತಕ), ನರಸಿಂಹಣ್ಣ (ಆಟೋ ಚಾಲಕ), ಯಶೋದಾ ಬಾಯಿ (ನೃತ್ಯ) ಅವರಿಗೆ ಕೋಟಿ ಜನ-ಮನ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವಾರ್ತಾ ಇಲಾಖೆ ಸಹಾ ಯಕ ನಿರ್ದೇಶಕ ಆರ್.ರಾಜು, ಸಮಾಜದ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡಿದ್ದ ರಾಜಶೇಖರ ಕೋಟಿ, ತಮ್ಮ ಜೀವನವನ್ನು ಪತ್ರಿಕೋದ್ಯಮಕ್ಕೆ ಮುಡಿಪಾಗಿಟ್ಟಿದ್ದರು ಎಂದು ಹೇಳಿದರು.
ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಮಾತನಾಡಿ, ನಿಷ್ಠೂರ ವಾಗಿರುವ ಪತ್ರಕರ್ತರಿಗೆ ವಿರೋಧಿಗಳು ಹೆಚ್ಚಾಗಿರುತ್ತಾರೆ. ಸಮಾಜ ಮುಖಿಯಾಗಿದ್ದ ಪತ್ರಕರ್ತರು ಸತ್ತ ನಂತರವೂ ಸಮಾಜ ಅವ ರನ್ನು ಗೌರವಿಸುತ್ತದೆ ಎಂಬುದಕ್ಕೆ ರಾಜಶೇಖರ ಕೋಟಿ ಸೇರಿದಂತೆ ಅನೇಕ ಪತ್ರಕರ್ತರು ನಿದರ್ಶನವಾಗಿದ್ದಾರೆ ಎಂದರು. ಮೈಸೂರು ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ಎಂ.ಬಿ.ಸಂತೋಷ್, ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಗೌರವಾಧ್ಯಕ್ಷೆ ಎಸ್.ನಾಗರತ್ನ, ಜನನಿ ಸೇವಾ ಟ್ರಸ್ ಅಧ್ಯಕ್ಷ ಎಂ.ಕೆ.ಅಶೋಕ್, ರೋಟರಿ ಸಂಸ್ಥೆಯ ಗೌತಮ್ ಸಲಾಚ, ಎಸ್.ಎನ್.ರಾಜೇಶ್ವರಿ, ನಂದಿನಿ ಇನ್ನಿತರರಿದ್ದರ

Translate »