ಪರಿಷ್ಕøತ ವೇತನಕ್ಕಾಗಿ ಸರ್ಕಾರಿ ಆಸ್ಪತ್ರೆ ಹೊರ ಗುತ್ತಿಗೆ ನೌಕರರ ಪ್ರತಿಭಟನೆ
ಮೈಸೂರು

ಪರಿಷ್ಕøತ ವೇತನಕ್ಕಾಗಿ ಸರ್ಕಾರಿ ಆಸ್ಪತ್ರೆ ಹೊರ ಗುತ್ತಿಗೆ ನೌಕರರ ಪ್ರತಿಭಟನೆ

December 8, 2018

ಮೈಸೂರು: ಮೈಸೂರು ಜಿಲ್ಲೆಯಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನಾನ್ ಕ್ಲಿನಿಕಲ್ ಹಾಗೂ ಡಿ ಗ್ರೂಪ್ ನೌಕರ ರಿಗೆ ಪರಿಷ್ಕøತ ವೇತನ ಜಾರಿಗೊಳಿಸು ವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಹೊರ ಗುತ್ತಿಗೆ ಕಾರ್ಮಿಕರ ಸಂಘದ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿದರು.

ನಜರ್‍ಬಾದ್‍ನಲ್ಲಿರುವ ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದ ನಾನ್ ಕ್ಲಿನಿಕಲ್ ಹಾಗೂ ಡಿ ಗ್ರೂಪ್ ನೌಕ ರರು, ಕೂಡಲೆ ಹೊರಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಬೇಕು. ಸರ್ಕಾರಿ ಆಸ್ಪತ್ರೆಗಳ ನಾನ್ ಕ್ಲಿನಿಕಲ್ ಹಾಗೂ ಡಿ ದರ್ಜೆ ನೌಕರರ ವೇತನ ಪರಿಷ್ಕರಿಸುವಂತೆ ರಾಜ್ಯ ಕಾರ್ಮಿಕ ಇಲಾಖೆ 2 ವರ್ಷದ ಹಿಂದೆಯೇ ಆದೇಶ ಹೊರಡಿ ಸಿದೆ. ಆದರೂ ಪರಿಷ್ಕøತ ವೇತನ ವ್ಯವಸ್ಥೆ ಯನ್ನು ಜಾರಿಗೆ ತಂದಿಲ್ಲ. ಈ ಕುರಿತು ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರಿ ಆಸ್ಪತ್ರೆಗಳ ಹೊರ ಗುತ್ತಿಗೆ ನೌಕರರಿಗೆ ಕಳೆದ 3 ತಿಂಗಳಿನಿಂದ ಗುತ್ತಿಗೆದಾರರು ವೇತನ ನೀಡಿಲ್ಲ. ಇದರಿಂದ ಜೀವನ ಸಾಗಿಸುವುದಕ್ಕೆ ತೊಂದರೆಯಾಗು ತ್ತಿದೆ. ವೇತನ ಕೇಳಿದರೆ ಗುತ್ತಿಗೆ ನೌಕರರ ಮೇಲೆ ಏಜೆನ್ಸಿಗಳು ದೌರ್ಜನ್ಯ ನಡೆಸುತ್ತಿವೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿಗಳು, ಬಾಕಿಯಿರುವ ವೇತನ ಮಂಜೂರು ಮಾಡುವಂತೆ ಆದೇಶಿಸಬೇಕು. ಅಲ್ಲದೆ, ಪರಿಷ್ಕøತ ವೇತನ ಜಾರಿಗೊಳಿಸಲು ಕ್ರಮ ವಹಿಸಬೇಕು. ಇಲ್ಲದಿದ್ದರೆ ಆಯಾ ತಾಲೂಕುಗಳಲ್ಲಿ ಅನಿರ್ದಿಷ್ಟಾ ವಧಿ ಮುಷ್ಕರ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಗುತ್ತಿಗೆ ನೌಕರರ ಸಂಘದ ಖಜಾಂಚಿ ಎಂ.ಚಿನ್ನರಾಜು ಇನ್ನಿತರರಿದ್ದರು.

Translate »