ಮೈಸೂರು: ಅನುದಾನಿತ ಸಂಸ್ಥೆಗಳ ನೌಕರರಿಗೆ ಹಳೆಯ ಪಿಂಚಣಿ ಜಾರಿಗಾಗಿ ಸರ್ಕಾರದ ಗಮನ ಸೆಳೆಯಲು ಈ ಬಾರಿಯ ಬೆಳಗಾವಿ ಅಧಿವೇಶನ ವೇಳೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳು ಪಿಂಚಣಿ ವಂಚಿತ ನೌಕರರ ಸಂಘದ ಅಧ್ಯಕ್ಷ ಸಿಂಡನಹಳ್ಳಿ ಡಾ.ಎಸ್.ಎಂ.ಶರತ್‍ಕುಮಾರ್ ತಿಳಿಸಿದರು. ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಈ ಹಿಂದೆ ಇದ್ದ ಸಮಾನ ಪಿಂಚಣಿಯ ಹಳೆಯ ವ್ಯವಸ್ಥೆ ಕೈಬಿಟ್ಟು ಎನ್‍ಪಿಎಸ್ ಜಾರಿಗೆ ತಂದ ನಂತರ ಖಾಸಗಿ ಅನುದಾನಿತ ನೌಕರರನ್ನು ಕೈಬಿಡಲಾಗಿದೆ. ರಾಜ್ಯ ಅನುದಾನಿತ…
ಕೆಂಚಲಗೂಡು ಸುತ್ತ ವಿದ್ಯುತ್ ಅಕ್ರಮ ಸಂಪರ್ಕ: ಕ್ರಮಕ್ಕೆ ಆಗ್ರಹಿಸಿ ರೈತ ಸಂಘ ಪ್ರತಿಭಟನೆ
December 8, 2018ಮೈಸೂರು: ಮೈಸೂರು ತಾಲೂಕಿನ ಜಯಪುರ ಹೋಬಳಿಯ ಕೆಂಚಲಗೂಡು ಗ್ರಾಮದ ಸುತ್ತಮುತ್ತ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿರುವವರ ವಿರುದ್ಧ ಹಾಗೂ ಅಕ್ರಮಗಳಿಗೆ ಸಾಥ್ ನೀಡುತ್ತಿರುವ ಲೈನ್‍ಮನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಶುಕ್ರವಾರ ವಿಜಯನಗರ ಒಂದನೇ ಹಂತದಲ್ಲಿ ರುವ ಸೆಸ್ಕ್ ಕಚೇರಿ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಕೆಂಚಲಗೂಡು ಗ್ರಾಮದ ಸರ್ಕಾರಿ ಭೂಮಿ ಸ.ನಂ.14ರ ಒತ್ತು ವರಿದಾರರು ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡಿ ದ್ದಾರೆ. ಅವರ ವಿರುದ್ಧ…
ರಾಜ್ಯ ಉಪ್ಪಾರ ಮೀಸಲಾತಿ ಹೋರಾಟ ಸಮಿತಿಯಿಂದ ಪ್ರತಿಭಟನೆ
November 23, 2018ಚಾಮರಾಜನಗರ: ನಂಜನಗೂಡು ತಾಲೂಕಿನ ಚಾಮಲಾಪುರಹುಂಡಿಯಲ್ಲಿ ಅಪ್ರಾಪ್ತೆಯ ಕೊಲೆ ಮಾಡಿರುವ ಆರೋಪಿಗಳನ್ನು ಗಲ್ಲುಶಿಕ್ಷೆಗೆ ಗುರಿಪಡಿಸ ಬೇಕು ಎಂದು ಒತ್ತಾಯಿಸಿ ನಗರದಲ್ಲಿ ಗುರುವಾರ ಕರ್ನಾಟಕ ರಾಜ್ಯ ಉಪ್ಪಾರ ಮೀಸಲಾತಿ ಹೋರಾಟ ಸಮಿತಿ ಕಾರ್ಯ ಕರ್ತರು ಪ್ರತಿಭಟನೆ ನಡೆಸಿದರು. ಚಾಮರಾಜೇಶ್ವರ ದೇವಾಲಯದ ಆವರಣದಲ್ಲಿ ಕರ್ನಾಟಕ ರಾಜ್ಯ ಉಪ್ಪಾರ ಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಬಾಗಳಿರೇವಣ್ಣ ಅವರ ನೇತೃತ್ವದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಅಲ್ಲಿಂದ ಮೆರವÀಣಿಗೆ ಹೊರಟು ಭುವನೇಶ್ವರಿ ವೃತ್ತ ಹಾದು ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿ…
ರಾಜ್ಯ ಸರ್ಕಾರದ ವಿರುದ್ಧ ವಿವಿಧ ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆ
November 21, 2018ಮೈಸೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರ್ಕಾರ ದಲಿತ ವಿರೋಧಿ, ರೈತ ವಿರೋಧಿ ಸರ್ಕಾರವಾಗಿದೆ ಎಂದು ಆರೋಪಿಸಿ ದಲಿತ ಸಂಶೋಧಕರ ಸಂಘ, ದಲಿತ ವಿದ್ಯಾರ್ಥಿ ಒಕ್ಕೂಟ, ಎಸ್‍ಎಫ್‍ಐ, ಪ್ರಗತಿಪರ ಚಿಂತಕರ ಸಂಘ, ಬಹುಜನ ವಿದ್ಯಾರ್ಥಿ ಸಂಘದ ಜಂಟಿ ಆಶ್ರಯದಲ್ಲಿ ಮಂಗಳವಾರ ಮೈಸೂರಿನ ಮಾನಸಗಂಗೋತ್ರಿ ದೊಡ್ಡ ಗಡಿಯಾರದ ಬಳಿ ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ರಾಜ್ಯ ಸರ್ಕಾರದ ನೀತಿ ನಿಯಮಗಳು ಶೋಷಿತ ಸಮುದಾಯಗಳಿಗೆ ಮರಣ ಶಾಸನವಾಗಿ ಪರಿಣಮಿಸು ತ್ತಿವೆ. ಕೆಪಿಎಸ್‍ಸಿ ವಿಷಯದಲ್ಲಿ ಎಸ್‍ಸಿ, ಎಸ್‍ಟಿ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳು…
ಕೆಪಿಎಸ್‍ಸಿ ನೇರ ನೇಮಕಾತಿಗೂ ಮೀಸಲಾತಿಗೆ ಆಗ್ರಹಿಸಿ ದಸಂಸ ಪ್ರತಿಭಟನೆ
November 18, 2018ಮೈಸೂರು: ಕೆಪಿಎಸ್‍ಸಿ ನೇರ ನೇಮಕಾತಿಯಲ್ಲೂ ಮೀಸಲಾತಿ ನಿಯಮ ಅನುಸರಿಸಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು. ಶನಿವಾರ ಕಾಡಾ ಕಚೇರಿ ಆವರಣ ದಿಂದ ಪುರಭವನದ ಡಾ.ಬಿ.ಆರ್.ಅಂಬೇ ಡ್ಕರ್ ಪ್ರತಿಮೆವರೆಗೆ ಪಂಜಿನ ಮೆರವಣಿಗೆ ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಂವಿಧಾನದಲ್ಲಿ ಉಲ್ಲೇ ಖಿಸಿರುವಂತೆ ಶಿಕ್ಷಣ, ಉದ್ಯೋಗ, ರಾಜ ಕೀಯದಲ್ಲಿ ಮೀಸಲಾತಿ ನೀಡಲೇಬೇಕು. ಎಸ್ಸಿಗಳಿಗೆ ಶೇ.15, ಎಸ್ಟಿ 3, ಪ್ರವರ್ಗ 1ಕ್ಕೆ 4, ಪ್ರವರ್ಗ 2ಎಗೆ ಶೇ.15, ಪ್ರವರ್ಗ 2ಬಿ ಗೆ ಶೇ.4,…
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ: ಗ್ರಾಪಂ ನೌಕರರ ಪ್ರತಿಭಟನೆ
November 17, 2018ಮೈಸೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ (ಸಿಐಟಿಯು ಸಂಯೋ ಜಿತ) ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರು ತಾಲೂಕು ಕಚೇರಿ ಎದುರು ಜಮಾಯಿಸಿದ ಪ್ರತಿ ಭಟನಾಕಾರರು, 18 ಸಾವಿರ ನೌಕರರನ್ನು ಎಲೆಕ್ಟ್ರಾನಿಕ್ ಫಂಡ್ಸ್ ಮ್ಯಾನೇಜ್‍ಮೆಂಟ್‍ಗೆ (ಇಎಫ್‍ಎಂಎಸ್) ಸೇರಿಸಿಲ್ಲ. ಈ ಸಂಬಂಧ ನೌಕರರ ವಿವರಗಳನ್ನು ಪಿಡಿಓ ಹಾಗೂ ಇಓಗಳು ಕೂಡಲೇ ಸರ್ಕಾರಕ್ಕೆ ಕಳುಹಿ ಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿ ಸಿದರು. ಗ್ರಾಮ ಪಂಚಾಯಿತಿಗಳು ಬಾಕಿ ಉಳಿಸಿಕೊಂಡಿರುವ ನೌಕರರ ವೇತನ…
ಕೆಪಿಎಸ್‍ಸಿ 2015ರ ನೇಮಕಾತಿ ಅವೈಜ್ಞಾನಿಕ ಆದೇಶ: ಕರಾದಸಂಸ ಖಂಡನೆ-ಪ್ರತಿಭಟನೆ
November 17, 2018ಮೈಸೂರು: ಕೆಪಿಎಸ್‍ಸಿ 2015ರ ನೇಮಕಾತಿಗೆ ಸಂಬಂಧಿಸಿದಂತೆ ಎಸ್‍ಸಿ-ಎಸ್‍ಟಿ ಹಾಗೂ ಓಬಿಸಿ ಅಭ್ಯರ್ಥಿಗಳು ಮೆರಿಟ್ ಗಳಿಸಿದ್ದರೂ ಅವರನ್ನು ಸಾಮಾನ್ಯ ವರ್ಗದಲ್ಲಿ ಪರಿಗಣಿಸದೇ ಆಯಾಯ ಜಾತಿ ಮೀಸಲಾತಿಯಡಿ ಪರಿಗಣಿಸಬೇಕೆಂಬ ಸರ್ಕಾರದ ಆದೇಶ ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ದಸಂಸ) ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ಪುರಭವನದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಎಸ್‍ಸಿ-ಎಸ್‍ಟಿ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳ ಮೆರಿಟ್ ನಿರಾಕರಿಸಿ ಅವರ ಹಕ್ಕು ಕಸಿಯುವ ಆದೇಶವನ್ನು ಸರ್ಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದರು….
ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಪ್ರತಿಭಟನಾ ಮೆರವಣಿಗೆ
October 26, 2018ಮೈಸೂರು: ಗುತ್ತಿಗೆ ನೌಕರರಿಗೆ ಸಮಾನವೇತನ ಹಾಗೂ ಸೇವಾ ಭದ್ರತೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರ ವೇದಿಕೆ ಆಶ್ರಯದಲ್ಲಿ ನೂರಾರು ಗುತ್ತಿಗೆ ನೌಕರರು ಗುರುವಾರ ಮೈಸೂರಿನಲ್ಲಿ ಪ್ರತಿ ಭಟನಾ ಮೆರವಣಿಗೆ ನಡೆಸಿದರು. ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಜಮಾಯಿಸಿದ ಅವರು ಸಾರ್ವಜನಿಕ ಆರೋಗ್ಯ ಇಲಾಖೆ ಬಲಗೊಳ್ಳಬೇಕು, ಗುತ್ತಿಗೆ ನೌಕರರಿಗೆ ಸಮಾನ ವೇತನ, ಸೇವಾ ಭದ್ರತೆ ಸಿಗ ಬೇಕು ಎಂಬಿತ್ಯಾದಿ ಘೋಷಣೆಗಳುಳ್ಳ ಭಿತ್ತಿಪತ್ರಗಳನ್ನು ಹಿಡಿದು ಅಲ್ಲಿಂದ ದೊಡ್ಡ ಗಡಿಯಾರ, ಗಾಂಧಿ ವೃತ್ತ, ವಿನೋಬಾ ರಸ್ತೆ,…
ನಾಳೆ ಆರೋಗ್ಯ ಇಲಾಖೆ ಗುತ್ತಿಗೆ ನೌಕರರಿಂದ ಪ್ರತಿಭಟನೆ
October 24, 2018ಚಾಮರಾಜನಗರ: ಸಮಾನ ವೇತನ ಹಾಗೂ ಸೇವಾ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿ ನಗರದಲ್ಲಿ ಅ.25ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖಾ ಗುತ್ತಿಗೆ ನೌಕ ರರ ಸಂಘ ಪ್ರತಿಭಟನೆ ಹಮ್ಮಿಕೊಂಡಿದೆ. ನಗರದ ಜಿಲ್ಲಾ ಕಾರ್ಯನಿರತ ಪತ್ರ ಕರ್ತರ ಭವನದಲ್ಲಿ ಮಂಗಳವಾರ ಆಯೋ ಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸಂಘದ ಮುಖಂಡ ಹೇಮಂತ್‍ಕುಮಾರ್ ಈ ವಿಷಯ ತಿಳಿಸಿದರು. ಸಾರ್ವಜನಿಕ ಆರೋಗ್ಯ ಇಲಾಖೆ ಬಲ ಗೊಳ್ಳಬೇಕು. ಗುತ್ತಿಗೆ ನೌಕರರಿಗೆ ಸಮಾನ ವೇತನ ಹಾಗೂ ಸೇವಾ ಭದ್ರತೆ ಸಿಗಬೇಕು ಎಂಬ ಹಕ್ಕೊತ್ತಾಯ ಮುಂದಿಟ್ಟುಕೊಂಡು ರಾಜ್ಯದ…
ಎಸ್ಸಿ, ಎಸ್ಟಿ ನೌಕರರ ಬಡ್ತಿ ಮೀಸಲಾತಿ ಕಾಯ್ದೆ ಜಾರಿಗೊಳಿಸದಂತೆ ಅಹಿಂಸಾ ವೇದಿಕೆ ಕಾರ್ಯಕರ್ತರ ಪ್ರತಿಭಟನೆ
October 12, 2018ಮೈಸೂರು: ಬಡ್ತಿ ಮೀಸಲಾತಿ ಕಾಯ್ದೆ-2018ನ್ನು ಜಾರಿ ಗೊಳಿಸದಂತೆ ಮತ್ತು ಬಿ.ಕೆ.ಪವಿತ್ರ ಪ್ರಕರಣ ದಲ್ಲಿ ಸುಪ್ರೀಂಕೋರ್ಟ್ ಆದೇಶವನ್ನು ಯಥಾಸ್ಥಿತಿಯಲ್ಲಿ ಜಾರಿಗೊಳಿಸಲು ಆಗ್ರಹಿಸಿ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ಸಾಮಾನ್ಯ ನೌಕರರ (ಅಹಿಂಸಾ) ವೇದಿಕೆ ಮೈಸೂರು ಘಟಕದ ಆಶ್ರಯದಲ್ಲಿ ಗುರುವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು. ಯಾವುದೇ ಕಾರಣಕ್ಕೂ ಕಾಯ್ದೆಯನ್ನು ಜಾರಿಗೊಳಿಸಬಾರದು ಎಂದು ಒತ್ತಾಯಿ ಸಿದ ಪ್ರತಿಭಟನಾಕಾರರು ಕೇವಲ ಶೇ.18 ವರ್ಗದವರ ರಕ್ಷಣೆಗೆ ಮಾತ್ರ ಮುಂದಾ ಗುವುದು ತಪ್ಪು. ಈ ಸರ್ಕಾರದಲ್ಲಿ ಶೇ.82 ವರ್ಗದ ನೌಕರರು ಬಡ್ತಿ ಇಲ್ಲದೆ…