ಎಸ್ಸಿ, ಎಸ್ಟಿ ನೌಕರರ ಬಡ್ತಿ ಮೀಸಲಾತಿ ಕಾಯ್ದೆ ಜಾರಿಗೊಳಿಸದಂತೆ ಅಹಿಂಸಾ ವೇದಿಕೆ ಕಾರ್ಯಕರ್ತರ ಪ್ರತಿಭಟನೆ
ಮೈಸೂರು

ಎಸ್ಸಿ, ಎಸ್ಟಿ ನೌಕರರ ಬಡ್ತಿ ಮೀಸಲಾತಿ ಕಾಯ್ದೆ ಜಾರಿಗೊಳಿಸದಂತೆ ಅಹಿಂಸಾ ವೇದಿಕೆ ಕಾರ್ಯಕರ್ತರ ಪ್ರತಿಭಟನೆ

October 12, 2018

ಮೈಸೂರು: ಬಡ್ತಿ ಮೀಸಲಾತಿ ಕಾಯ್ದೆ-2018ನ್ನು ಜಾರಿ ಗೊಳಿಸದಂತೆ ಮತ್ತು ಬಿ.ಕೆ.ಪವಿತ್ರ ಪ್ರಕರಣ ದಲ್ಲಿ ಸುಪ್ರೀಂಕೋರ್ಟ್ ಆದೇಶವನ್ನು ಯಥಾಸ್ಥಿತಿಯಲ್ಲಿ ಜಾರಿಗೊಳಿಸಲು ಆಗ್ರಹಿಸಿ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ಸಾಮಾನ್ಯ ನೌಕರರ (ಅಹಿಂಸಾ) ವೇದಿಕೆ ಮೈಸೂರು ಘಟಕದ ಆಶ್ರಯದಲ್ಲಿ ಗುರುವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.

ಯಾವುದೇ ಕಾರಣಕ್ಕೂ ಕಾಯ್ದೆಯನ್ನು ಜಾರಿಗೊಳಿಸಬಾರದು ಎಂದು ಒತ್ತಾಯಿ ಸಿದ ಪ್ರತಿಭಟನಾಕಾರರು ಕೇವಲ ಶೇ.18 ವರ್ಗದವರ ರಕ್ಷಣೆಗೆ ಮಾತ್ರ ಮುಂದಾ ಗುವುದು ತಪ್ಪು. ಈ ಸರ್ಕಾರದಲ್ಲಿ ಶೇ.82 ವರ್ಗದ ನೌಕರರು ಬಡ್ತಿ ಇಲ್ಲದೆ ಕಾರ್ಯ ನಿರ್ವಹಿಸುತ್ತಿದ್ದು, 26 ವರ್ಷಗಳಿಂದ ಹೋರಾಟ ನಡೆದಿದೆ. ಲಕ್ಷಾಂತರ ನೌಕರರು ಬಡ್ತಿಯಿಂದ ವಂಚಿತರಾಗಿದ್ದಾರೆ. ಸುಪ್ರೀಂ ಕೋರ್ಟ್‍ನ ಆದೇಶ ಬಂದು 20 ತಿಂಗಳಾ ದರೂ ಸಂಪೂರ್ಣ ಆ ಆದೇಶವನ್ನು ಜಾರಿ ಮಾಡಿಲ್ಲ. ಈ ಕ್ರಮದಿಂದ ಶೇ.82 ವರ್ಗಕ್ಕೆ ಘೋರ ಅನ್ಯಾಯವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಸುಪ್ರೀಂಕೋರ್ಟ್‍ನ ಆದೇಶದಂತೆ ಯಥಾ ಸ್ಥಿತಿ ಕಾಪಾಡಬೇಕು. ಕೆಲವು ಪರಿಶಿಷ್ಟ ಜಾತಿ, ವರ್ಗದ ಸಚಿವರ ಒತ್ತಾಯಕ್ಕೆ ಮಣಿದು ಕಾಯ್ದೆಯನ್ನು ಜಾರಿ ಮಾಡಿದರೆ, ರಾಜ್ಯಾ ದ್ಯಂತ 10 ಲಕ್ಷ ನಿವೃತ್ತ ಹಾಗೂ ಕಾರ್ಯ ನಿರತ ನೌಕರರಿಂದ ಅಸಹಕಾರ ಚಳುವಳಿ ಅನಿವಾರ್ಯವಾಗಬಹುದು ಎಂದು ಪ್ರತಿ ಭಟನಾಕಾರರು ಮೈಸೂರು ಜಿಲ್ಲಾಧಿಕಾರಿ ಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ನೀಡಿ ರುವ ಮನವಿ ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ಅಹಿಂಸಾ ವೇದಿಕೆ ಮೈಸೂರು ಘಟಕದ ಗೌರವಾಧ್ಯಕ್ಷ ಡಾ.ಕೆ.ಎನ್.ಚಂದ್ರಶೇಖರ್, ಅಧ್ಯಕ್ಷ ಎನ್.ಕೆ.ನಂಜಯ್ಯ, ಪದಾಧಿಕಾರಿಗಳಾದ ಕೆ.ಗೋವಿಂದಯ್ಯ, ಪಿ.ಮಲ್ಲಣ್ಣ, ನಿವೃತ್ತ ಡಿಸಿಪಿ ಬಿ.ಪಿ.ಸುರೇಶ್ ಇನ್ನಿತರರು ಭಾಗವಹಿಸಿದ್ದರು.

Translate »