ಹೊಳೆನರಸೀಪುರದಲ್ಲಿ ಇಂದಿರಾ ಕ್ಯಾಂಟೀನ್‍ಗೆ ಸಚಿವ ರೇವಣ್ಣ ಚಾಲನೆ
ಹಾಸನ

ಹೊಳೆನರಸೀಪುರದಲ್ಲಿ ಇಂದಿರಾ ಕ್ಯಾಂಟೀನ್‍ಗೆ ಸಚಿವ ರೇವಣ್ಣ ಚಾಲನೆ

October 12, 2018

ಹೊಳೆನರಸೀಪುರ: ಹಸಿದು ಬಂದ ವರಿಗೆಲ್ಲ ಊಟ-ತಿಂಡಿ ವಿತರಿಸಲು ‘ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲಾಗಿದ್ದು, ಸಾರ್ವಜನರಿಕರು ಇದರ ಸದ್ಬಳಕೆ ಮಾಡಿ ಕೊಳ್ಳಬೇಕು ಎಂದು ಲೋಕೋ ಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಸಲಹೆ ನೀಡಿದರು.

ಪಟ್ಟಣದ ಹಾಸನ-ಮೈಸೂರು ರಸ್ತೆಯಲ್ಲಿ ರುವ ಪಶು ಆಸ್ಪತ್ರೆ ಸಮೀಪ ನಿರ್ಮಾಣ ವಾಗಿರುವ ಇಂದಿರಾ ಕ್ಯಾಂಟೀನ್‍ಗೆ ಚಾಲನೆ ನೀಡಿ ಅವರು ಮಾತನಾಡಿದರು.ಹೊಳೆನರಸೀಪುರ ಜನತೆಯ ಬಹುದಿನಗಳ ಬೇಡಿಕೆ ಹಾಗೂ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾ ಕಾಂಕ್ಷೆಯ ಯೋಜನೆ `ಇಂದಿರಾ ಕ್ಯಾಂಟೀನ್’ ಗೆ ಚಾಲನೆ ನೀಡಲಾಗಿದೆ. ಕ್ಯಾಂಟೀನ್ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ವಾರದ ಪ್ರತಿದಿನವು ತೆರೆದು ಹಸಿದು ಬಂದವರಿಗೆ ಗುಣಮಟ್ಟದ ಆಹಾರ ನೀಡ ಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಇಂದಿರಾ ಕ್ಯಾಂಟೀನ್ ಯೋಜನೆಯಿಂದ ಸಾರ್ವಜನಿಕರಿಗೆ ಕೇವಲ 5 ರೂ.ಗೆ ತಿಂಡಿ, 10 ರೂ.ಗೆ ಮಿನಿ ಊಟ ದೊರೆಯಲಿದೆ. ಇದರಿಂದ ಸಾಮಾನ್ಯ ಜನರು, ಬಡವರು, ಕೂಲಿ ಕಾರ್ಮಿಕರು ಹಾಗೂ ಆರ್ಥಿಕ ವಾಗಿ ಹಿಂದುಳಿದವರ ಹಸಿವನ್ನು ನೀಗಿ ಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ತಿಳಿಸಿದರು.

ಕ್ಯಾಂಟೀನ್‍ನಲ್ಲಿ 400 ಜನರಿಗೆ ಮಾತ್ರ ಆಹಾರ ವಿತರಿಸಲಾಗುವುದು ಎಂಬ ಮಿತಿಯನ್ನು ಅಧಿಕಾರಿಗಳು ಇಟ್ಟುಕೊಳ್ಳಬಾರದು. ಕ್ಯಾಂಟೀನ್‍ಗೆ ಬಂದವರಿಗೆಲ್ಲರಿಗೂ ತಿಂಡಿ- ಊಟ ನೀಡಬೇಕು. ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಳ್ಳುವ ಜೊತೆಗೆ, ಕ್ಯಾಂಟೀನ್‍ನ ಸ್ವಚ್ಛತೆಯನ್ನು ಕಾಪಾಡಬೇಕು ಎಂದರು. ಆಹಾರ ಸೇವಿಸಿದ ಎಲೆ, ಲೋಟ, ತಟ್ಟೆ, ಎಲ್ಲೆಂದರಲ್ಲಿ ಬಿಸಾಡದೆ ನಿಗದಿಪಡಿ ಸಿರುವ ಸ್ಥಳದಲ್ಲೆ ಹಾಕಬೇಕು. ಕ್ಯಾಂಟೀನ್ ನಡೆಸುವ ಸಿಬ್ಬಂದಿಗಳು ಅಡುಗೆ ಸಲಕರಣಿಗಳನ್ನು ಬಿಸಿನೀರಿನ ಮೂಲಕ ಸ್ವಚ್ಛಗೊಳಿಸಬೇಕು. ಮುಂದಿನ ದಿನಗಳಲ್ಲಿ ಕ್ಯಾಂಟೀನ್ ಅನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಪಡಿಸುವ ಉದ್ದೇಶವಿದ್ದು, ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪುರಸಭೆಯ ಸದಸ್ಯರು, ಅಧಿಕಾರಿಗಳಾದ ರಮೇಶ್, ಪಂಕಜಾ, ಅಂಬಿಕಾ, ಹಿರಿಯ ಆರೋಗ್ಯ ನಿರೀಕ್ಷಕ ವಸಂತ್, ವೆಂಕಟೇಶ್ ಹಾಜರಿದ್ದರು.

Translate »