ಅರಸೀಕೆರೆ: ನಗರದ ವಿವಿಧೆಡೆ ಅನ ಧಿಕೃತವಾಗಿ ನಡೆಯುತ್ತಿದ್ದ ಕಸಾಯಿ ಖಾನೆ ಗಳನ್ನು ನಗರಸಭೆ ಅಧಿಕಾರಿಗಳು ಪೊಲೀಸ್ ರಕ್ಷಣೆಯೊಂದಿಗೆ ಕಾರ್ಯಾಚರಣೆ ನಡೆಸಿ ಅಂಗಡಿಗಳನ್ನು ಬಂದ್ ಮಾಡಿದರು.ನಗರಸಭೆ ಪೌರಾಯುಕ್ತ ಪರಮೇ ಶ್ವರಪ್ಪ, ನಗರ ಪೊಲೀಸ್ ಠಾಣೆ ಸರ್ಕಲ್ ಇನ್ಸ್‍ಪೆಕ್ಟರ್ ರಂಗಸ್ವಾಮಿ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.
ನಗರದ ಮಟನ್ ಮಾರ್ಕೇಟ್, ಸುನ್ನೀ ಚೌಕ , ಮುಜಾವರ್ ಮೊಹಲ್ಲಾ ಮತ್ತು ಹಾಸನ ರಸ್ತೆ ಬಲಭಾಗದಲ್ಲಿರುವ ಒಟ್ಟು 9 ಅನಧಿಕೃತ ಕಸಾಯಿ ಖಾನೆಗಳಿಗೆ ಬೀಗ ವನ್ನು ಹಾಕಿ ಮಾಲಿಕರ ಮೇಲೆ ದೂರನ್ನು ದಾಖಲಿಸಿಕೊಳ್ಳಲಾಯಿತು. ಕಾರ್ಯಾ ಚರಣೆಯಲ್ಲಿ ನಗರಸಭೆ ಪರಿಸರ ಅಭಿಯ ಂತರ ಯೋಗೀಶ್, ಆರೋಗ್ಯ ನಿರೀಕ್ಷಕ ರೇವಣ್ಣ ಸಿದ್ದಪ್ಪ, ಜ್ಯೋತಿ ಸೇರಿದಂತೆ ಪೊಲೀಸ್ ಇಲಾಖೆಯ ಸಿಬ್ಬಂದಿ ಪಾಲ್ಗೊಂಡಿದ್ದರು.
ಕಾರ್ಯಾಚರಣೆ ನಿರಂತರವಾಗಿರಲಿ: ಪಟ್ಟಣದಲ್ಲಿ ಹಲವು ವರ್ಷಗಳಿಂದ ವಿವಿಧೆಡೆ ಗೋ ಹತ್ಯೆ ಮತ್ತು ಗೋ ಮಾಂಸಗಳ ಮಾರಾಟ ದಂಧೆಯು ಅವ್ಯಹತವಾಗಿ ನಡೆಯುತ್ತಿತ್ತು. ಇದರ ವಿರುದ್ಧ ಕಾನೂನು ಕ್ರಮ ತೆಗೆದು ಕೊಳ್ಳಬೇಕೆಂದು ಸ್ಥಳೀಯ ನಗರಸಭೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು. ಆದರೆ, ಇದರಿಂದ ಯಾವುದೇ ಪ್ರಯೋಜನವಾಗಿರಲಿಲ್ಲ.
ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಈ ಸಂಬಂಧ ಮನವಿ ಸಲ್ಲಿಸಿದ ಪರಿಣಾಮ ಗುರುವಾರ ನಗರದ ವಿವಿಧೆಡೆ ನಗರಸಭೆ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಚರಣೆ ನಡೆಸಿ ಕಸಾಯಿಖಾನೆ ಗಳನ್ನು ಬಂದ್ ಮಾಡಿಸಿದ್ದಾರೆ. ಈ ಪ್ರಕ್ರಿಯೆ ನಿರಂತರವಾಗಿರಬೇಕು ಎಂದು ತಾಲೂಕು ಗೋ ಪರಿವಾರ್ ಮುಖಂಡ ಫಾರಸ್ ಜೈನ್ ಹೇಳಿದರು.
ಮಳಿಗೆಗಳು ಅಲ್ಲದೇ ಮನೆಗಳಲ್ಲಿ ಗೋವು ಗಳ ಹತ್ಯೆ, ಮಾಂಸ ಮಾರಾಟ ಹಾಗೂ ಸರ ಬರಾಜು ನಿರಂತರವಾಗಿ ನಡೆ ಯುತ್ತಿದೆ. ಇದನ್ನು ನಗರಸಭೆ ಗಂಭೀರವಾಗಿ ಪರಿಗಣಿಸಿ ನಿಷೇಧಿಸಬೇಕು. ರೈತರ ಬೆನ್ನಲುಬಾದ ಗೋವುಗಳ ರಕ್ಷಣೆಯಲ್ಲಿ ಭಾಗಿ ಯಾದ ಸ್ಥಳೀಯ ನಗರಸಭೆ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗೆ ನಮ್ಮ ಗೋ ಪರಿವಾರ್ ಮತ್ತು ವಿವಿಧ ಸಂಘ ಸಂಸ್ಥೆಗಳಿಂದ ಅಭಿನಂದಿಸಲಾಗುವುದು ಎಂದರು.