ರಾಜ್ಯ ಉಪ್ಪಾರ ಮೀಸಲಾತಿ ಹೋರಾಟ ಸಮಿತಿಯಿಂದ ಪ್ರತಿಭಟನೆ
ಚಾಮರಾಜನಗರ

ರಾಜ್ಯ ಉಪ್ಪಾರ ಮೀಸಲಾತಿ ಹೋರಾಟ ಸಮಿತಿಯಿಂದ ಪ್ರತಿಭಟನೆ

November 23, 2018

ಚಾಮರಾಜನಗರ: ನಂಜನಗೂಡು ತಾಲೂಕಿನ ಚಾಮಲಾಪುರಹುಂಡಿಯಲ್ಲಿ ಅಪ್ರಾಪ್ತೆಯ ಕೊಲೆ ಮಾಡಿರುವ ಆರೋಪಿಗಳನ್ನು ಗಲ್ಲುಶಿಕ್ಷೆಗೆ ಗುರಿಪಡಿಸ ಬೇಕು ಎಂದು ಒತ್ತಾಯಿಸಿ ನಗರದಲ್ಲಿ ಗುರುವಾರ ಕರ್ನಾಟಕ ರಾಜ್ಯ ಉಪ್ಪಾರ ಮೀಸಲಾತಿ ಹೋರಾಟ ಸಮಿತಿ ಕಾರ್ಯ ಕರ್ತರು ಪ್ರತಿಭಟನೆ ನಡೆಸಿದರು.

ಚಾಮರಾಜೇಶ್ವರ ದೇವಾಲಯದ ಆವರಣದಲ್ಲಿ ಕರ್ನಾಟಕ ರಾಜ್ಯ ಉಪ್ಪಾರ ಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಬಾಗಳಿರೇವಣ್ಣ ಅವರ ನೇತೃತ್ವದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಅಲ್ಲಿಂದ ಮೆರವÀಣಿಗೆ ಹೊರಟು ಭುವನೇಶ್ವರಿ ವೃತ್ತ ಹಾದು ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಪಿ.ಲಿಂಗರಾಜು, ಮುಖಂಡರಾದ ಮಾದೇಶ್‍ಉಪ್ಪಾರ್, ಮಾರ್ಕೇಟ್‍ಗಿರೀಶ್, ಜಿ.ಎಂ.ಶಂಕರ್, ಮಂಗಳಮ್ಮ, ಆನಂದ್ ಉಪ್ಪಾರ್, ಆರ್.ಮಹದೇವಶೆಟ್ಟಿ, ಕೆ.ನೀಲಶೇಖರ, ಪಿ.ರಂಗ ಸ್ವಾಮಿ, ಶಿವಶಂಕರ್, ರಾಚಶೆಟ್ಟಿ, ಸಿದ್ದು, ಚಿಕ್ಕಅಂಕ ಶೆಟ್ಟಿ, ಹರೀಶ್‍ಕುಮಾರ್, ಶಿವಣ್ಣ, ಸೋಮಣ್ಣ, ನಂಜುಂಡ ಶೆಟ್ಟಿ, ಎಂ.ಮಾದೇಶ್, ಕೆಂಪನಪುರ ಮಹದೇವಶೆಟ್ಟಿ ರಂಗಸ್ವಾಮಿ ಇತರರು ಭಾಗವಹಿಸಿದ್ದರು.

Translate »