ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ: ಗ್ರಾಪಂ ನೌಕರರ ಪ್ರತಿಭಟನೆ
ಮೈಸೂರು

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ: ಗ್ರಾಪಂ ನೌಕರರ ಪ್ರತಿಭಟನೆ

November 17, 2018

ಮೈಸೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ (ಸಿಐಟಿಯು ಸಂಯೋ ಜಿತ) ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರು ತಾಲೂಕು ಕಚೇರಿ ಎದುರು ಜಮಾಯಿಸಿದ ಪ್ರತಿ ಭಟನಾಕಾರರು, 18 ಸಾವಿರ ನೌಕರರನ್ನು ಎಲೆಕ್ಟ್ರಾನಿಕ್ ಫಂಡ್ಸ್ ಮ್ಯಾನೇಜ್‍ಮೆಂಟ್‍ಗೆ (ಇಎಫ್‍ಎಂಎಸ್) ಸೇರಿಸಿಲ್ಲ. ಈ ಸಂಬಂಧ ನೌಕರರ ವಿವರಗಳನ್ನು ಪಿಡಿಓ ಹಾಗೂ ಇಓಗಳು ಕೂಡಲೇ ಸರ್ಕಾರಕ್ಕೆ ಕಳುಹಿ ಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿ ಸಿದರು. ಗ್ರಾಮ ಪಂಚಾಯಿತಿಗಳು ಬಾಕಿ ಉಳಿಸಿಕೊಂಡಿರುವ ನೌಕರರ ವೇತನ ನೀಡಲು ಕ್ರಮ ವಹಿಸಬೇಕು. ಎಸ್‍ಎಸ್ ಎಲ್‍ಸಿ ಉತ್ತೀರ್ಣರಾದವರಿಗೆ ಕಾರ್ಯ ದರ್ಶಿ-2 ಹುದ್ದೆಗೆ ಬಡ್ತಿ ನೀಡಬೇಕು. ಈಗ ಕೆಲಸ ನಿರ್ವಹಿಸುತ್ತಿರುವ ಕಂಪ್ಯೂಟರ್ ಆಪರೇಟರ್‍ಗಳಿಗೆ ಬಡ್ತಿ ನೀಡಬೇಕು. ಜೊತೆಗೆ 1252 ಪಂಚಾಯಿತಿಗಳು ಗ್ರೇಡ್-2 ಹಂತದಲ್ಲಿದ್ದು, ಇವುಗಳನ್ನು ಮೇಲ್ದ ರ್ಜೆಗೇರಿಸಬೇಕು ಎಂದು ಒತ್ತಾಯಿಸಿದರು.

ಗಳಿಕೆ ರಜೆ ಸೌಲಭ್ಯ ನೀಡಿ, ಭಾನುವಾರ ಕೆಲಸ ಮಾಡಿದರೆ ಹೆಚ್ಚುವರಿ ವೇತನ ಕೊಡ ಬೇಕು. 5998 ಬಿಲ್ ಕಲೆಕ್ಟರ್ ಹುದ್ದೆ ಗಳು ಹಾಗೂ ಕಿರು ನೀರು ಪೂರೈಕೆ ಹಾಗೂ ಕೊಳವೆ ನೀರು ಪೂರೈಕೆಯ ಸ್ಥಾವರ ಗಳಿಗೆ ಅನುಗುಣವಾಗಿ 16 ಸಾವಿರ ಹುದ್ದೆಗಳನ್ನು ಸೃಷ್ಟಿಸಬೇಕು. ಸುಪ್ರೀಂ ಕೋರ್ಟ್ ಆದೇಶ ದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಧ್ಯಕ್ಷ ಕೆ.ಬಸವರಾಜು, ಸಂಘಟನೆಯ ವರುಣಾ ನಾಗರಾಜು, ಚೆನ್ನಪ್ಪ ಸೇರಿದಂತೆ ಮತ್ತಿತ ರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »