ಲೋಕಾಯುಕ್ತ ಪೊಲೀಸರಿಂದ ದೂರು ಸ್ವೀಕಾರ
ಮೈಸೂರು

ಲೋಕಾಯುಕ್ತ ಪೊಲೀಸರಿಂದ ದೂರು ಸ್ವೀಕಾರ

November 17, 2018

ಮೈಸೂರು: ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳಿಂದ ನ.19ರಿಂದ 28 ರವರೆಗೆ ಬೆಳಿಗ್ಗೆ 11ರಿಂದ ಮಧ್ಯಾಹ್ನ 1 ಗಂಟೆವರೆಗೆ ತಾಲೂಕು ಕೇಂದ್ರಗಳಲ್ಲಿ ಸಾರ್ವ ಜನಿಕರಿಂದ ದೂರು/ ಅಹವಾಲು ಸ್ವೀಕರಿಸಲಾಗುವುದು ಎಂದು ಕರ್ನಾಟಕ ಲೋಕಾ ಯುಕ್ತ ಪೊಲೀಸ್ ವಿಭಾಗದ ಪೊಲೀಸ್ ಅಧೀಕ್ಷೆ ಜೆ.ಕೆ.ರಶ್ಮಿ ತಿಳಿಸಿದ್ದಾರೆ.

ನ.19 ಕರ್ನಾಟಕ ಲೋಕಾಯುಕ್ತ, ದಿವಾನ್ಸ್‍ರಸ್ತೆ, ಮೈಸೂರು, ನ.20 ತಾಲೂಕು ಕಚೇರಿ ಆವರಣ ತಿ.ನರಸೀಪುರ, ನ.22 ಪಿಡಬ್ಲ್ಯೂಡಿ ಅತಿಥಿ ಗೃಹ ಹೆಚ್.ಡಿ.ಕೋಟೆ, ನ.23 ಪಿಡಬ್ಲ್ಯೂಡಿ ಅತಿಥಿ ಗೃಹ ಕೆ.ಆರ್.ನಗರ ತಾಲೂಕು, ನ.24 ಪಿಡಬ್ಲ್ಯೂಡಿ ಅತಿಥಿ ಗೃಹ ಪಿರಿಯಾಪಟ್ಟಣ, ನ.27 ಪಿಡಬ್ಲ್ಯೂಡಿ ಅತಿಥಿ ಗೃಹ ಹುಣಸೂರು, ನ.28 ತಾಲೂಕು ಕಚೇರಿ ಆವರಣ ನಂಜನಗೂಡು ತಾಲೂಕಿನಲ್ಲಿ ನಡೆಯಲಿದೆ. ಸರ್ಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳಿಗಾಗಿ ವಿಳಂಬ, ಲಂಚದ ಬೇಡಿಕೆ ಹಾಗೂ ಇನ್ನಿತರೆ ತೊಂದರೆ ನೀಡುವ ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಸಾರ್ವಜನಿಕರು ನಿಗದಿತ ಪ್ರಪತ್ರದಲ್ಲಿ ದೂರು ನೀಡ ಬಹುದಾಗಿದೆ. ಮಾಹಿತಿಗೆ 0821-2521100 ಅನ್ನು ಸಂಪರ್ಕಿಸುವುದು. ಸಾರ್ವಜನಿಕರು ಈ ಕಾರ್ಯಕ್ರಮದ ಪ್ರಯೋಜನ ಪಡೆಯಬೇಕೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ.

Translate »