ಕೆಪಿಎಸ್‍ಸಿ 2015ರ ನೇಮಕಾತಿ ಅವೈಜ್ಞಾನಿಕ ಆದೇಶ: ಕರಾದಸಂಸ ಖಂಡನೆ-ಪ್ರತಿಭಟನೆ
ಮೈಸೂರು

ಕೆಪಿಎಸ್‍ಸಿ 2015ರ ನೇಮಕಾತಿ ಅವೈಜ್ಞಾನಿಕ ಆದೇಶ: ಕರಾದಸಂಸ ಖಂಡನೆ-ಪ್ರತಿಭಟನೆ

November 17, 2018

ಮೈಸೂರು: ಕೆಪಿಎಸ್‍ಸಿ 2015ರ ನೇಮಕಾತಿಗೆ ಸಂಬಂಧಿಸಿದಂತೆ ಎಸ್‍ಸಿ-ಎಸ್‍ಟಿ ಹಾಗೂ ಓಬಿಸಿ ಅಭ್ಯರ್ಥಿಗಳು ಮೆರಿಟ್ ಗಳಿಸಿದ್ದರೂ ಅವರನ್ನು ಸಾಮಾನ್ಯ ವರ್ಗದಲ್ಲಿ ಪರಿಗಣಿಸದೇ ಆಯಾಯ ಜಾತಿ ಮೀಸಲಾತಿಯಡಿ ಪರಿಗಣಿಸಬೇಕೆಂಬ ಸರ್ಕಾರದ ಆದೇಶ ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ದಸಂಸ) ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಮೈಸೂರಿನ ಪುರಭವನದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಎಸ್‍ಸಿ-ಎಸ್‍ಟಿ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳ ಮೆರಿಟ್ ನಿರಾಕರಿಸಿ ಅವರ ಹಕ್ಕು ಕಸಿಯುವ ಆದೇಶವನ್ನು ಸರ್ಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಈವರೆಗೂ ಎಸ್‍ಸಿ-ಎಸ್‍ಟಿ ಮತ್ತು ಓಬಿಸಿ ಅಭ್ಯರ್ಥಿಗಳಲ್ಲಿ ಮೆರಿಟ್ ಪಡೆದವರು ಸಾಮಾನ್ಯ ವರ್ಗದ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುತ್ತಿದ್ದರು. ಮೀಸಲು ಕೋಟಾದಲ್ಲಿ ಇನ್ನುಳಿದ ಅಭ್ಯರ್ಥಿಗಳು ಆಯ್ಕೆಯಾಗುತ್ತಿ ದ್ದರು. ಇದರಿಂದ ಶೇಕಡಾವಾರು ಆಯ್ಕೆ ಪಟ್ಟಿಯಲ್ಲಿ ಮೀಸಲಿಟ್ಟಿದ್ದ ಸ್ಥಾನಕ್ಕಿಂತ ಅಧಿಕ ವಾಗಿ ಅವಕಾಶ ಪಡೆಯುತ್ತಿದ್ದರು. ಸರ್ಕಾ ರದ ಈ ಆದೇಶದಿಂದ ಶೋಷಿತ ಸಮು ದಾಯದ ಅಭ್ಯರ್ಥಿಗಳು ಎಷ್ಟೇ ಪ್ರತಿಭಾ ವಂತರಾಗಿದ್ದರೂ ಅವಕಾಶ ವಂಚಿತರಾಗಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

1998, 1999 ಮತ್ತು 2004ನೇ ಕೆಪಿ ಎಸ್‍ಸಿ ಪ್ರೊಬೆಷನರಿ ಹುದ್ದೆಗಳ ನೇಮ ಕಾತಿಗೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್, ಆಯೋಗವು ಪಾಲನೆ ಮಾಡಬೇಕಾದ ಮಾರ್ಗಸೂಚಿಗಳನ್ನು ನೀಡಿದೆ. ಇದನ್ನು ಸುಪ್ರೀಂಕೋರ್ಟ್ ಕೂಡ ದೃಢಪಡಿಸಿದೆ. ಈ 3 ವರ್ಷಗಳಿಗೆ ಅನ್ವಯಿಸಬೇಕಿರುವ ಕೋರ್ಟ್ ಮಾರ್ಗಸೂಚಿಗಳನ್ನು ಇದೀಗ 2015 ನೇಮಕಾತಿಗೆ ಅನ್ವಯಿಸಲು ಆದೇಶ ಹೊರಡಿಸಿರುವುದು ಎಷ್ಟು ಸರಿ ಎಂದು ಕಿಡಿಕಾರಿದರು. ದಸಂಸ ವಿಭಾಗೀಯ ಸಂಚಾ ಲಕ ದೇವಗಳ್ಳಿ ಸೋಮಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗರಾಜ ಮಲ್ಲಾಡಿ, ಜಿಲ್ಲಾ ಸಂಚಾಲಕ ಚುಂಚನಹಳ್ಳಿ ಮಲ್ಲೇಶ್, ಸಂಘಟನೆಯ ಆಲಗೂಡು ಶಿವಕುಮಾರ್, ಶಂಭುಲಿಂಗಸ್ವಾಮಿ, ಹಿನಕಲ್ ಸೋಮು, ಬೆಲವತ್ತ ರಾಮಚಂದ್ರ, ಗಂಗಾಧರ್, ಆಲ ಗೂಡು ಶಿವಣ್ಣ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »