ಚಾಂಪಿಯನ್ ಬೇಬಿಯಾಗಿ ಹೊರಹೊಮ್ಮಿದ ಎಸ್.ಸಾನ್ವಿ
ಮೈಸೂರು

ಚಾಂಪಿಯನ್ ಬೇಬಿಯಾಗಿ ಹೊರಹೊಮ್ಮಿದ ಎಸ್.ಸಾನ್ವಿ

November 17, 2018

ಮೈಸೂರು: ಮಕ್ಕಳ ದಿನಾಚರಣೆ ಅಂಗವಾಗಿ ಮೈಸೂರಿನ ಜೆಎಲ್‍ಬಿ ರಸ್ತೆ ರೋಟರಿ ಸಭಾಂಗಣದಲ್ಲಿ ಮೈಸೂರು ರೋಟರಿ ಉತ್ತರ ಮತ್ತು ಇನ್ನರ್‍ವ್ಹೀಲ್ ಕ್ಲಬ್ ಉತ್ತರ ವತಿಯಿಂದ ಆರೋಗ್ಯವಂತ ಮಕ್ಕಳ ಸ್ಪರ್ಧೆ ನಡೆಯಿತು. ಬೇಬಿ ಎಸ್.ಸಾನ್ವಿ ಚಾಂಪಿಯನ್ ಬೇಬಿಯಾಗಿ ಹೊರ ಹೊಮ್ಮಿದಳು. ಸ್ಪರ್ಧೆಯಲ್ಲಿ 1ರಿಂದ ಮೂರು ವರ್ಷದೊಳಗಿನ ಮಕ್ಕಳು ಭಾಗವಹಿಸಿದ್ದರು. 1 ವರ್ಷದೊಳಗಿನ, 1ರಿಂದ 2 ಹಾಗೂ 2ರಿಂದ 3 ವರ್ಷದೊಳಗಿನ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.

ಮೈಸೂರು ರೋಟರಿ ಉತ್ತರ ಅಧ್ಯಕ್ಷ ಎಂ.ಕೆ.ನಂಜಯ್ಯ ಸ್ಪರ್ಧೆಗೆ ಚಾಲನೆ ನೀಡಿದರು. ಮಕ್ಕಳ ಆರೋಗ್ಯ ಚೆನ್ನಾಗಿದ್ದರೆ, ಅವರ ಬೆಳವಣಿಗೆಯೂ ಉತ್ತಮವಾಗಿರುತ್ತದೆ. ಮಕ್ಕಳು ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯದಿಂದಿದ್ದರೆ, ಮುಂದೆ ಅವರು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವ ಜೊತೆಗೆ ಅವರ ಭವಿಷ್ಯವೂ ಉತ್ತಮಗೊಳ್ಳಲು ಸಾಧ್ಯವಾಗುತ್ತದೆ ಎಂದರು.
55 ಮಕ್ಕಳು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ಮಕ್ಕಳ ಆರೋಗ್ಯವನ್ನು ಜೆಎಸ್‍ಎಸ್ ಆಸ್ಪತ್ರೆ ವೈದ್ಯರಾದ ಡಾ.ಮಹೇಂದ್ರಪ್ಪ, ಡಾ.ಪಂಚಾಕ್ಷರಿ ಮತ್ತು ಡಾ.ಅಭಿಷೇಕ್ ತಪಾಸಣೆ ನಡೆಸಿದರು. ಈ ಸಂದರ್ಭದಲ್ಲಿ ರೋಟರಿ ಪಿಆರ್‍ಓ ಎಂ.ಜೆ.ಸ್ವಾಮಿ, ಕಾರ್ಯದರ್ಶಿ ಎಸ್.ಎಚ್.ಜಗ ದೀಶ್, ಇನ್ನರ್‍ವ್ಹೀಲ್ ಉತ್ತರದ ಅಧ್ಯಕ್ಷೆ ಚಿತ್ರಾ ಸುಬ್ಬಯ್ಯ, ಕಾರ್ಯದರ್ಶಿ ಉಷಾ ಹೆಗಡೆ, ಡಾ.ಮಹೇಂದ್ರಪ್ಪ, ಇನ್ನಿತರರು ಉಪಸ್ಥಿತರಿದ್ದರು. ಸಂಜೆ ನಡೆದ ಸಮಾರಂಭದಲ್ಲಿ ರೋಟರಿ ಉತ್ತರ ಅಧ್ಯಕ್ಷ ಎಂ.ಕೆ.ನಂಜಯ್ಯ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿದರು.

ವಿಜೇತ ಮಕ್ಕಳು: ಒಂದು ವರ್ಷದೊಳಗಿನ ಮಕ್ಕಳು: ಸಾನ್ವಿ ಎಸ್.ಮಿರ್ಜಿ (ಪ್ರಥಮ), ಆರುಶ್ ಜಗದೀಶ್ (ದ್ವಿತೀಯ), ಜೈಪ್ರೀತಿ (ತೃತೀಯ) ಬೇಬಿ ಆಫ್ ಅರ್ಚನಾ, ರಿದಿತ್ ಶರ್ಮಾ (ಸಮಾಧಾನ ಬಹುಮಾನ). 1ರಿಂದ 2 ವರ್ಷದೊಳಗಿನವರು: ಪಿ.ಕ್ಷಿತಿಜ್‍ದೇವ್ (ಪ್ರಥಮ), ಎಸ್.ಧನ್ವಿತ್ ದೀಕ್ಷಿತ್ (ದ್ವಿತೀಯ), ಬ್ರಿಯಾನ್ ಡೊಮಿನಿಕ್ ರಾಡ್ರಿಗಸ್ (ತೃತೀಯ), ರಾಜೀವ್ ಆನಂದ್, ವಚನ (ಸಮಾಧಾನ ಬಹುಮಾನ).

2ರಿಂದ 3 ವರ್ಷದೊಳಗಿನ ಮಕ್ಕಳು: ಎ.ವಿ.ಹಿತೈಷಿ (ಪ್ರ), ಆದ್ಯ ಶಶಿಕಿರಣ್ (ದ್ವಿ), ಶೋಬಿತ್ ಹೆಬ್ಬಾಳೆ (ತೃ), ಫಾಜಿಲ್ ಅಹಮದ್ ಮತ್ತು ಸಾಯಿ ಸನ್ಮತಿ (ಸಮಾಧಾನ ಬಹುಮಾನ).

Translate »