ಶಿಕ್ಷಣದ ಜೊತೆಗೆ ಕ್ರೀಡೆ, ಯೋಗ ರೂಢಿಸಿಕೊಳ್ಳಿ: ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ
ಮೈಸೂರು

ಶಿಕ್ಷಣದ ಜೊತೆಗೆ ಕ್ರೀಡೆ, ಯೋಗ ರೂಢಿಸಿಕೊಳ್ಳಿ: ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ

September 5, 2018

ಹುಣಸೂರು: ಯುವ ಜನರು ತಮ್ಮ ಶೈಕ್ಷಣಿಕ ಚಟುವಟಿಕೆಯ ಜೊತೆಗೆ ಕ್ರೀಡೆ ಮತ್ತು ಯೋಗವನ್ನು ಕಡ್ಡಾಯವಾಗಿ ರೂಡಿಸಿಕೊಳ್ಳಬೇಕು ಎಂದು ಉನ್ನತ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಟಿ.ದೇವೆಗೌಡರು ತಿಳಿಸಿದರು.

ತಾಲೂಕಿನ ಮರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಲಾಸಲೇಟ್ ವಿದ್ಯಾಸಂಸ್ಥೆಯಲ್ಲಿ ಪಿಯು ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾಭ್ಯಾಸದ ಜೊತೆಗೆ ನಾಟಕ, ಕ್ರೀಡೆ, ಯೋಗ ಅಭ್ಯಾಸಗಳನ್ನು ಮೈಗೂಡಿಸಿ ಕೊಂಡರೆ ಉತ್ತಮ ಆರೋಗ್ಯ ಲಭಿಸುವುದು ಎಂದರು.

ಪ್ರಸ್ತುತ ದಿನಗಳಲ್ಲಿ ಶೆ.80ರಷ್ಟು ನೀರುದ್ಯೋಗಿಗಳಿದ್ದು ಯುವ ಶಕ್ತಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳು ಹಳ್ಳಿ ಕಡೆಗೆ ಎಂಬಂತೆ ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಉದ್ಯೋಗಧಾರಿತ ಶಿಕ್ಷಣ ನೀಡಲು ಪ್ರಯತ್ನಿಸಲಾಗುತ್ತಿದೆ ಎಂದರು.

ಸಮಾಜದ ಯಾವುದೇ ಕ್ಷೇತ್ರಗಳಲ್ಲಿ ಜಾತಿ ಇರಬಾರದು ಹುಟ್ಟಿನಿಂದ ಹೆಣ್ಣು-ಗಂಡು ಎಂಬ ಎರಡು ಜಾತಿಗಳಿದ್ದು, ತಮ್ಮ ಸ್ವಾರ್ಥಕ್ಕಾಗಿ ಜಾತಿ ಬಣ್ಣ ಬಳೆದುಕೊಳ್ಳುವುದು ಸರ್ವೆ ಸಾಮಾನ್ಯವಾಗಿದೆ. ಈ ಅನಿಷ್ಟ ವ್ಯವಸ್ಥೆಯಿಂದ ಹೊರ ಬರಬೇಕಾಗಿದೆ ಆಗಲೇ ಪ್ರತಿಯೊಬ್ಬರು ಗುರಿ ಮುಟ್ಟಲು ಸಾಧ್ಯ ಎಂದರು.

ಶಿಕ್ಷಣ, ಸಂಘಟನೆ ಮತ್ತು ಹೋರಾಟ ಅಂಬೇಡ್ಕರ್‍ರವರ ಈ ಅಶಯದಂತೆ ಯುವ ಜನರು ಉತ್ತಮ ವಿದ್ಯಾವಂತರಾಗಿ ಸಮಾಜವನ್ನು ಬದಲಾವಣೆ ಮಾಡಲು ಸಾಧ್ಯ ಎಂದರು.ವಿದ್ಯಾರ್ಥಿಗಳ ಸ್ವಾಗತ ನೃತ್ಯದ ಮೂಲಕ ಅತಿಥಿಗಳನ್ನು ಸ್ವಾಗತಿಸಲಾಯಿತು ಜಾಕಬ್ ಮತ್ತು ತಂಡದವರು ಕ್ರೀಡಾಂಗಣಕ್ಕೆ ಕ್ರೀಡಾಜ್ಯೋತಿಯನ್ನು ತಂದರು ಅಂತಾರಾಷ್ಟ್ರೀಯ ಐಸ್ ಸ್ಕೇಟಿಂಗ್ ಚಾಂಪಿಯನ್ ಏಕಲವ್ಯ ಪ್ರಶಸ್ತಿ ವಿಜೇತ ಆಕಾಶ್ ಅರಾಧ್ಯರವರು ಜ್ಯೋತಿಯನ್ನು ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ಹೆಚ್.ಪಿ.ಸತೀಶ್, ಶರವಣ, ಕೃಷ್ಣರಾಜಗುಪ್ತ, ಧನುಷ್‍ಕುಮಾರ್, ತಾ.ಪಂ ಸದಸ್ಯ ಕೆಂಗಯ್ಯ, ಚಾಮಮ್ಮ, ಗೊವಿಂದೇಗೌಡ, ಲೋಕೇಶ, ಗಣೇಶ್‍ಗೌಡ, ಭಾಸ್ಕರ್, ಚಂದ್ರೇಗೌಡ, ಫಾದರ್‍ಗೆಮ್ಸ್, ಜಾರ್ಜ್‍ಜೋಸೆಪ್, ಹಾಗು ಇನ್ನು ಅನೇಕ ಗಣ್ಯರು ಉಪಸ್ಥಿತರಿದ್ದರು.

Translate »