ಕೌಶಲ್ಯ ತರಬೇತಿ ಪಡೆದು ಸ್ವಾವಲಂಬಿಗಳಾಗಲು ಗಿರಿಜನರಿಗೆ ಕರೆ
ಮೈಸೂರು

ಕೌಶಲ್ಯ ತರಬೇತಿ ಪಡೆದು ಸ್ವಾವಲಂಬಿಗಳಾಗಲು ಗಿರಿಜನರಿಗೆ ಕರೆ

August 14, 2018

ಹುಣಸೂರು:  ಸರಕಾರ ದಿಂದ ಸಿಗುವ ಕೌಶಲ್ಯ ತರಬೇತಿಗಳನ್ನು ಆದಿವಾಸಿ ಯುವ ಜನತೆ ಪಡೆದುಕೊಳ್ಳುವ ಮೂಲಕ ಸ್ವಾವಲಂಬಿಗಳಾಗಿ ಎಲ್ಲರಂತೆ ಗೌರವದ ಬದುಕು ನಡೆಸಬೇಕು ಎಂದು ಮೈಸೂರು ಮತ್ತು ಕೊಡಗು ಸಂಸದ ಪ್ರತಾಪ್ ಸಿಂಹ ಆದಿವಾಸಿಗಳಿಗೆ ಸಲಹೆ ನೀಡಿದರು.

ನಗರದ ಡೀಡ್ ಸಂಸ್ಥೆಯ ಕೌಶಲ್ಯ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಇತ್ತೀಚೆಗೆ ಹೊಲಿಗೆ, ಕಂಪ್ಯೂಟರ್, ವಾಹನ ಚಾಲನಾ ತರಬೇತಿಗಳನ್ನು, ಆದಿವಾಸಿ ವಿದ್ಯಾವಂತ ಯುವಕರು ಪಡೆದುಕೊಳ್ಳುವ ಮೂಲಕ ಜಾಗೃತರಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದರು. ಹಲವಾರು ವರ್ಷಗಳಿಂದ ಧ್ವನಿಯಾಗಿ ಪ್ರೋತ್ಸಾಹ ನೀಡುತ್ತಿರುವ ಡೀಡ್ ಸಂಸ್ಥೆಯನ್ನು ಶ್ಲಾಘಿಸಿದರು.

ಕೇಂದ್ರ ಸರಕಾರ ಗಿರಿಜನರ ಕ್ಷೇಮಾಭಿ ವೃದ್ಧಿಗಾಗಿ, ವಿಶೇಷ ಯೋಜನೆಗಳನ್ನು ನೀಡು ತ್ತಿದ್ದು, ಸಮಗ್ರ ಸೌಲಭ್ಯ ಪಡೆದುಕೊಂಡರೆ ಸಮಾಜಮುಖಿಗಳಾಗಬಹುದು ಆ ನಿಟ್ಟಿನಲ್ಲಿ ಜಾಗೃತರಾಗಿ ದುಶ್ಚಟಗಳಿಂದ ದೂರವಿದ್ದು ಮೇಲ್ಪಂಕ್ತಿಗೆ ಬನ್ನಿ ಎಂದು ಕಿವಿಮಾತು ಹೇಳಿ ದರು. ಕಾರ್ಯಕ್ರಮದಲ್ಲಿ ಡಾ.ಶ್ರೀಕಾಂತ್ ಮಾತನಾಡಿ, ಹಾಡಿಯ ವಸತಿ ರಹಿತ 40 ಯುವ ಜನರು ತರಬೇತಿ ಪಡೆಯುತ್ತಿದ್ದು. ಈಗಾಗಲೇ 25 ಚಾಲಕರು, 5 ಜನ ಕಂಪ್ಯೂ ಟರ್ ಹಾಗೂ 18 ಮಂದಿ ಹೊಲಿಗೆ ತರಬೇತಿ ನೀಡಲಾಗಿದೆ ಎಂದರು. ಸಂಸದರು ಕೇಂದ್ರ ಸರ್ಕಾರದ ನೆರವು ಕೊಡಿಸಿ, ತರ ಬೇತಿಗಳು ಕೇಂದ್ರಗಳನ್ನು ತೆರೆದು ಯುವ ಜನತೆಗೆ ಆದ್ಯತೆ ನೀಡಲು ಮನವಿ ಮಾಡಿದರು.

Translate »