ಮಕ್ಕಳ ಮನೆಯಲ್ಲಿ ವಾರ್ಷಿಕೋತ್ಸವ, ವಿಶ್ವ ಪರಿಸರ ದಿನ
ಮೈಸೂರು

ಮಕ್ಕಳ ಮನೆಯಲ್ಲಿ ವಾರ್ಷಿಕೋತ್ಸವ, ವಿಶ್ವ ಪರಿಸರ ದಿನ

August 14, 2018

ನಂಜನಗೂಡು: ಅಗಲಿದ ಪುತ್ರ ಶೋಕ ಮರೆಯಲು ರೇಣುಕಾ ಸೋಮ ಶೇಖರ್‍ರವರು ಮಗನ ನೆನಪಿನಲ್ಲಿ ಆರಂಭಿಸಿದ ಅನುರಾಗ್ ಮಕ್ಕಳ ಮನೆ ಪ್ರಥಮ ವಾರ್ಷಿ ಕೋತ್ಸವ ಮತ್ತು ವಿಶ್ವ ಪರಿಸರ ದಿನಾಚರಣೆ ಯನ್ನು ನಂಜುಂಡೇಶ್ವರ ಟೌನ್ ಶಿಪ್ ದೇವಿರ ಮ್ಮನಹಳ್ಳಿ ಬಡಾವಣೆಯಲ್ಲಿ ಆಚರಿಸಲಾಯಿತು.

ಸಮಾರಂಭವನ್ನು ಉದ್ಘಾಟಿಸಿದ ಚಿಕ್ಕ ಮಂಗಳೂರು ಜಿಲ್ಲೆಯ ಎನ್.ಆರ್.ಪುರದ ಮಠದ ಬಸವಯೋಗಿ ಪ್ರಭುಗಳು ಮಾತ ನಾಡಿ ಸಾಹಿತ್ಯ, ಪರಿಸರ, ಆರೋಗ್ಯ, ಕ್ರೀಡೆ ಮತ್ತು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಬೇಕಾ ಗುವಂತಹ ಉತ್ಸವಗಳು ಇಲ್ಲಿ ನೆರವೇರಿದ್ದು, ಕಾಯಕ ದಾಸೋಹದ ವ್ಯವಸ್ಥಿತವಾದ ಸಮಾರಂಭ ಇದಾಗಿದೆ ಎಂದರು.

ಸಮಾರಂಭದಲ್ಲಿ ಪ್ರಾಸ್ತವಿಕ ನುಡಿ ತಿಳಿಸಿದ ಶ್ರೀ ಗುರುಮಲ್ಲೇಶ್ವರ ಸೇವಾ ಸಮಿತಿ ಅಧ್ಯಕ್ಷರು ಹಾಗೂ ಫ್ರೋ|| ಸದಾಶಿವಮೂರ್ತಿ ಯವರು ಅನುರಾಗ್ ಮಕ್ಕಳ ಮನೆಯ ಸಂಸ್ಥಾಪಕ ದೇವನೂರು ಗ್ರಾಮದ ಡಿ.ಜಿ. ಸೋಮಶೇಖರ್ ಮೂರ್ತಿಯವರ ಬದುಕಿ ನಲ್ಲಿ ಅವರು ಅನುಭವಿಸಿದ ತಿರುವುಗಳನ್ನು ಸಭೆಗೆ ತಿಳಿಸಿ ಪುತ್ರ ಅನುರಾಗ್ ಬಸವರಾಜ್ ದುಃಖ ಮರೆಯಲು ಶ್ರೀಗಳ ಪ್ರೇರಣೆಯಂತೆ ವಸತಿ ಶಾಲೆ ಪ್ರಾರಂಭಿಸಿದ ಘಟನೆಯನ್ನು ತಿಳಿಸಿ ಸಂಸ್ಥೆ ಯಶಸ್ವಿಯಾಗಿ ನಡೆಯಲು ಎಲ್ಲರ ಸಹಾಯ ಮತ್ತು ಸಹಕಾರ ಅತ್ಯವಶ್ಯ ಎಂದರು.

ಕಾರ್ಯಕ್ರಮದಲ್ಲಿ ಪ್ರತಿಧ್ವನಿ ವೇದಿಕೆ ಅಧ್ಯಕ್ಷರಾದ ತ್ರಿನೇಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ವಕೀಲರಾದ ಮಹೇಶ್ ಅತ್ತಿಖಾನೆ, ಜೆಎಸ್‍ಎಸ್ ಕಾಲೇಜಿನ ಶಿಕ್ಷಕ ಅಂಧಯ್ಯ ಶಿರೂರ್ ಮಠ್, ಅಕ್ಕನ ಬಳಗದ ಅಧ್ಯಕ್ಷೆ ಚಿನ್ನತಾಯಮ್ಮ, ಕಿಡ್ಸ್ ಪ್ಯಾರಾಡೈಸ್ ಸಂಸ್ಥೆಯ ಅಧ್ಯಕ್ಷೆ ಕಾವ್ಯ, ಡಾ. ಎಂ ರಂಗನಾಥ್, ವೈ.ರಮೇಶ್, ಅನುರಾಗ್ ಮಕ್ಕಳ ಮನೆಯ ಸಂಸ್ಥಾಪಕ ಅಧ್ಯಕ್ಷ ಡಿ.ಜಿ. ಸೋಮಶೇಖರ್ ಪರಿಸರ ಕಾಯಕಯೋಗಿ ವೈ.ರಮೇಶ್‍ರವರನ್ನು ಸನ್ಮಾನಿಸಿದರು.

ಸಮಾರಂಭದ ಸಾನಿಧ್ಯವನ್ನು ಮಲ್ಲನ ಮೂಲೆ ಮಠಾಧೀಶರಾದ ಚೆನ್ನಬಸವಸ್ವಾಮಿ ಗಳು ವಹಿಸಿದ್ದರು.ಕುರಹಟ್ಟಿ ಮಾದಪ್ಪ ಸ್ವಾಮಿಗಳು, ಸೂರಳ್ಳಿ ಗಿರೀಶ್ ಸ್ವಾಮಿಗಳು, ಜಡೇಸ್ವಾಮಿಗಳು, ಮರಿಸ್ವಾಮಿ, ಬಸವ ಲಿಂಗಸ್ವಾಮಿಗಳು, ಎಸ್.ಐ.ಜಯಸ್ವಾಮಿ ಗಳು ಇದ್ದರು.

Translate »