ಸಾಮಾನ್ಯ ಜ್ಞಾನ, ಶಿಕ್ಷಣ ಇದ್ದರೆ ಸ್ವಚ್ಛತೆ ತಾನಾಗಿಯೇ ಬರುತ್ತದೆ
ಮೈಸೂರು

ಸಾಮಾನ್ಯ ಜ್ಞಾನ, ಶಿಕ್ಷಣ ಇದ್ದರೆ ಸ್ವಚ್ಛತೆ ತಾನಾಗಿಯೇ ಬರುತ್ತದೆ

August 14, 2018

ತಿ.ನರಸೀಪುರ:  ಮನುಷ್ಯನಲ್ಲಿ ಸಾಮಾನ್ಯ ಜ್ಞಾನ, ಶಿಕ್ಷಣ ಇದ್ದಲ್ಲಿ ಸ್ವಚ್ಛತೆ ತಾನಾಗಿಯೇ ಬರುತ್ತದೆ ಎಂದು ಶಾಸಕ ಎಂ.ಅಶ್ವಿನ್‍ಕುಮಾರ್ ಹೇಳಿದರು.

ತಾಲೂಕಿನ ತಲಕಾಡು ಗ್ರಾಮದ ನಾಯಕರ ಸಮುದಾಯ ಭವನದ ಆವರಣದಲ್ಲಿ ಸ್ವಚ್ಛ ಭಾರತ್ ಮಿಷನ್ ಸಹಭಾಗಿತ್ವದಲ್ಲಿ ಸ್ವಚ್ಛ ಸರ್ವೆಕ್ಷಣಾ ಗ್ರಾಮೀಣ 2018ರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜನರ ಸೌಕರ್ಯಕ್ಕಾಗಿ ಸರ್ಕಾರ ಸಾಕಷ್ಟು ಶೌಚಾಲಯಗಳನ್ನು ನಿರ್ಮಾಣ ಮಾಡಿದೆ. ಆದರೆ ಜನತೆ ಅದನ್ನು ಬಳಸಲು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಶೌಚಾಲಯ ಬಳಕೆ ಕುರಿತಂತೆ ತಾಲ್ಲೂಕಿನಾದ್ಯಂತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಗ್ರಾಮೀಣ ಪ್ರದೇಶದ ಜನರು ಸರ್ಕಾರದಿಂದ ಸಿಗುವ ಸೌಲಭ್ಯವನ್ನು ಪಡೆದು ಮನೆಗೊಂದು ಶೌಚಾಲಯ ನಿರ್ಮಾಣ ಮಾಡಿಕೊಳ್ಳುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಯಶಸ್ಸಿಗೆ ಕಾರಣರಾಗಬೇಕು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಶೌಚಾಲಯ ನಿರ್ಮಾಣದ ಯೋಜನೆ ಶೀಘ್ರ ದಲ್ಲಿ ಕೊನೆಗೊಳ್ಳುತ್ತಿದ್ದು, ಬಳಕೆ ಮಾಡಿಕೊಳ್ಳ ದಿದ್ದಲ್ಲಿ ಅನುದಾನ ನಿಲ್ಲಿಸಲಾಗುವುದು. ಆನಂತರ ಜನರೇ ಹಣ ಹಾಕಿ ಶೌಚಾಲಯ ನಿರ್ಮಾಣ ಮಾಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಜನರೇ ಸಾಕಷ್ಟು ಶೌಚಾಲಯ ನಿರ್ಮಾಣ ಮಾಡಿಕೊಳ್ಳುವ ಮೂಲಕ ಬಯಲು ಮುಕ್ತ ತಾಲ್ಲೂಕನ್ನಾಗಿ ಮಾಡಲು ಸಹಕಾರ ನೀಡುತ್ತಿರುವುದು ಸ್ವಾಗತಾರ್ಹ. ಈ ನಿಟ್ಟಿನಲ್ಲಿ ಕಟ್ಟಿರುವ ಶೌಚಾ ಲಯವನ್ನು ಬಳಕೆ ಮಾಡಿಕೊಂಡು ರೋಗ ಮುಕ್ತ ಜೀವನ ನಡೆಸುವಂತೆ ಸಲಹೆ ನೀಡಿದರು.

ಜಿ.ಪಂ ಸದಸ್ಯ ಟಿ.ಎಚ್.ಮಂಜುನಾಥ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳ ಯೋಜನೆಯನ್ನು ಪರಿಣಾಮಕಾರಿ ಯಾಗಿ ಜಾರಿಗೆ ತರಲು ಅಧಿಕಾರಿಗಳು ಶ್ರಮವಹಿಸಬೇಕಿದೆ.

ಗ್ರಾ.ಪಂ ಅಧ್ಯಕ್ಷೆ ಕವಿತಾ, ಉಪಾಧ್ಯಕ್ಷ ರಾಜು, ಸದಸ್ಯರಾದ ಶಿವಮ್ಮ, ರಮೇಶ್, ಕುಕ್ಕೂರು ಶಂಕರ್, ಪ್ರೇಮ್ ಕುಮಾರ್, ಸುಂದರ್‍ನಾಯ್ಕ, ಭಾಗೀರಥಿ, ಪುಷ್ಪಾ, ಯಶೋಧಮ್ಮ, ಶಂಭುದೇವನಪುರ ರಮೇಶ್, ಹೆಮ್ಮಿಗೆ ಸೋಮಣ್ಣ, ಹೊಸ ಪುರ ಮಲ್ಲು, ಕುಕ್ಕೂರು ಉಮಾಪತಿ, ಪ್ರಭಾಕರ್, ರಘು, ಸತೀಶ್, ದೀಪ್ ದರ್ಶನ್ ಇಒ ಡಾ.ನಂಜೇಶ್, ಪಿಡಿಒ ಅಮ್ಜದ್ ಪಾಷಾ ಇತರರು ಇದ್ದರು.

Translate »