ಹೆಚ್.ಡಿ.ಕೋಟೆಯಲ್ಲಿ ದಲಿತ ಸಂಘಟನೆಗಳ ಪ್ರತಿಭಟನೆ
ಮೈಸೂರು

ಹೆಚ್.ಡಿ.ಕೋಟೆಯಲ್ಲಿ ದಲಿತ ಸಂಘಟನೆಗಳ ಪ್ರತಿಭಟನೆ

August 14, 2018

ಹೆಚ್.ಡಿ.ಕೋಟೆ: ದೆಹಲಿಯ ಜಂತರ್ ಮಂತರ್‍ನಲ್ಲಿ ಸಂವಿಧಾನವನ್ನು ಸುಟ್ಟು ದೇಶದ ಜನರ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ತಾಲೂಕು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಮತ್ತು ತಾಲೂಕು ಪ್ರಗತಿ ಪರ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿ ತಾಲೂಕು ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ಈ ಕೂಡಲೆ ಕೃತ್ಯ ಎಸಗಿದವರನ್ನು ಈ ದೇಶ ದಿಂದ ಗಡಿಪಾರು ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ದೊಡ್ಡಸಿದ್ದು ಹಾದನೂರು ಮಾತನಾಡಿ ಭಾರತ ಇಂದು ಬಲಿಷ್ಠ ರಾಷ್ಟ್ರವಾಗಿ ರೂಪು ಗೊಂಡು ಅಭಿವೃದ್ಧಿಯತ್ತ ಸಾಗುತ್ತಿದೆ, ಭಾರತ ದಲ್ಲಿ ಹಲವು ಜಾತಿ, ಧರ್ಮ, ಭಾಷೆಗಳಿದ್ದರೂ ಸಹ ಸರ್ವರಿಗೂ ಸಮಪಾಲು, ಸರ್ವ ರಿಗೂ ಸಮಬಾಳು ಎಂಬ ಸಂದೇಶವನ್ನು ಸಂವಿಧಾನದಲ್ಲಿ ಅಳವಡಿಸಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.

ಅಂಬೇಡ್ಕರ್ ಬರೆದ ಸಂವಿಧಾನವನ್ನು ಸುಡುವ ಮೂಲಕ ತಮ್ಮ ವಿಕೃತ ಮನಸ್ಸನ್ನು ಅನಾವರಣಗೊಳಿಸುವ ಮೂಲಕ ದಲಿತ ವಿರೋಧಿ ನೀತಿಯನ್ನು ತೋರ್ಪಡಿಸಿದ್ದಾರೆ. ಅವರನ್ನು ಬಂಧಿಸಿ ದೇಶದಿಂದ ಗಡಿ ಪಾರು ಮಾಡಬೇಕು ಎಂದು ಒತ್ತಾಯಿಸಿದರು.
ತಾಲ್ಲೂಕು ಆದಿಕರ್ನಾಟಕ ಅಧ್ಯಕ್ಷ ಮುದ್ದ ಮಲ್ಲಯ್ಯ, ಸಿಪಿಐಎಂಎಲ್‍ನ ಚೌಡಹಳ್ಳಿ ಜವರಯ್ಯ, ತಾಲೂಕು ಬಿಎಸ್‍ಪಿ ಅಧ್ಯಕ್ಷ ಶ್ರೀನಿವಾಸ್ ಯಶವಂತಪುರ, ಮಲಾರ ಮಹದೇವು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.

ನಂತರ ತಹಶೀಲ್ದಾರ್ ಆರ್.ಮಂಜುನಾಥ್ ಮನವಿ ಪತ್ರ ಪಡೆದರು, ಪ್ರತಿಭಟನೆಯಲ್ಲಿ ದಸಂಸ ಕಲಾ ಮಂಡಳಿ ಸಂಚಾಲಕ ಸಣ್ಣ ಕುಮಾರ್, ಪಟ್ಟಣ ಸಂಚಾಲಕ ಚನ್ನ (ಸೋಮಣ್ಣ), ಎವಿಎಸ್‍ಎಸ್ ಸಂಘಟನೆಯ ಅಂತರ ಸಂತೆ ಪ್ರಕಾಶ್ (ಬುದ್ದ), ಆನಂದ್ ಕೆ.ಜಿ.ಹಳ್ಳಿ, ಕುಮಾರ್ ಮಹದೇವಸ್ವಾಮಿ, ಜಿ.ಸ್ವಾಮಿ, ಸವ್ವೆ ಸಿದ್ದಯ್ಯ, ಹೈರಿಗೆ ಶಿವರಾಜು, ಮಟಕೆರೆ ಮಹೇಶ್, ಮಹದೇವಪ್ಪ, ಸಿದ್ದು, ದೀಪು, ಮಧು, ಆಟೋ ಮಂಜು, ಚಲುವರಾಜು, ಪುಟ್ಟಬಸವ, ಆನಗಟ್ಟಿ ಸಿದ್ದಪ್ಪ(ಕುಳ್ಳಣ್ಣ), ವಿಜಯ್‍ಕುಮಾರ್, ನಟರಾಜು, ಬಸವ ರಾಜು ಇದ್ದರು.

Translate »