ಮೈಸೂರು ಮರ್ಚೆಂಟ್ಸ್ ಕೋ ಆಪರೇಟಿವ್ ಬ್ಯಾಂಕ್‍ಗೆ 8.32 ಕೋಟಿ ರೂ. ಲಾಭ
ಮೈಸೂರು

ಮೈಸೂರು ಮರ್ಚೆಂಟ್ಸ್ ಕೋ ಆಪರೇಟಿವ್ ಬ್ಯಾಂಕ್‍ಗೆ 8.32 ಕೋಟಿ ರೂ. ಲಾಭ

August 14, 2018

ಮೈಸೂರು: ಮೈಸೂರಿನ ದಿ ಮೈಸೂರು ಮರ್ಚೆಂಟ್ಸ್ ಕೋ ಆಪರೇಟಿವ್ ಬ್ಯಾಂಕಿನ 59ನೇ ಸರ್ವ ಸದಸ್ಯರ ಸಭೆಯು ನಗರದ ಜೆ.ಪಿ. ನಗರದಲ್ಲಿರುವ ಬಸಂತ್ ಕನ್ವನ್‍ಷನ್ ಸೆಂಟರ್‍ನಲ್ಲಿ ಬ್ಯಾಂಕಿನ ಅಧ್ಯಕ್ಷ ಎ.ಪ್ರಭು ಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆಯಿತು.

ಬ್ಯಾಂಕ್ ಈ ಸಾಲಿನಲ್ಲಿ ಒಟ್ಟಾರೆ 8.32 ಕೋಟಿ ರೂ. ಲಾಭ ಗಳಿಸಿದ್ದು, ಶೇ. 20 ರಷ್ಟು ಲಾಭಾಂಶ ವನ್ನು ಶೇ. 25ರಂತೆ ವಿತರಿಸಲಾಗುವುದು ಎಂದು ಅಧ್ಯಕ್ಷ ಎ. ಪ್ರಭುಪ್ರಸಾದ್ ಘೋಷಿಸಿದರು.
ಸರ್ವ ಸದಸ್ಯರ ಸಭೆಯ ಅಂಗವಾಗಿ ಬ್ಯಾಂಕಿನ ಸದಸ್ಯರುಗಳಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಕಣ್ಣಿನ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.

ಬ್ಯಾಂಕಿನ ಉಪಾಧ್ಯಕ್ಷ ಆರ್.ಆನಂದ್ ಸ್ವಾಗತಿಸಿದರು. ಬಿ.ಆರ್.ನಂದೀಶ್ ವಂದಿ ಸಿದರು. ಇದೇ ಸಂದರ್ಭದಲ್ಲಿ ಬ್ಯಾಂಕಿನ ಹಿರಿಯ ಸದಸ್ಯರುಗಳಾದ ಜಲಜಾಕ್ಷಿ, ಕೆ.ಎಸ್.ರತ್ನಮ್ಮ, ಎಲ್.ರತ್ನಮ್ಮ, ಪಿ. ಎಲ್.ನಾಗರತ್ನಮ್ಮ, ಆರ್.ಪಿ. ವೆಂಕಟಾ ಚಲಂ, ಪಿ.ಪುಟ್ಟಣ್ಣ, ಎಂ.ಭೋಜರಾಜ್, ಡಾ.ಸಿ.ಶಿವಯ್ಯ, ಎನ್.ನಾಗರಾಜ, ಎಸ್. ನಾಗರಾಜ್, ಬಿ.ಬಸವರಾಜ್, ವಿ.ಪಶು ಪತಿ, ಜಿ.ನೀಲಕಂಠಶೆಟ್ಟಿ, ಎಂ.ವೆಂಕಟೇಶ್ ಮತ್ತು ಆರ್.ಪ್ರಸನ್ನಗುಪ್ತ ಅವರನ್ನು ಸನ್ಮಾನಿಸಲಾಯಿತು.

Translate »