ಹುಲಿ ಪತ್ತೆಗೆ ಮತ್ತೆ ಕಾರ್ಯಾಚರಣೆ
ಮೈಸೂರು

ಹುಲಿ ಪತ್ತೆಗೆ ಮತ್ತೆ ಕಾರ್ಯಾಚರಣೆ

August 25, 2018

ಹುಣಸೂರು: ತಾಲೂಕಿನ ಹನಗೋಡು ಸಮೀಪದ ಕೆ.ಜಿ. ಹಬ್ಬನಕುಪ್ಪೆ ಗ್ರಾಮದ ತರಗನ್ ಎಸ್ಟೇಟ್‍ನಲ್ಲಿ ಹುಲಿ ಕಾಣಿಸಿಕೊಂಡು ಭಯ ಹುಟ್ಟಿಸಿದ ಹಿನ್ನೆಲೆ ಯಲ್ಲಿ ಇಲಾಖೆ ಕಾರ್ಯಾಚರಣೆ ಕಾರ್ಯ ಕೈಗೊಂಡಿದ್ದು, ಸ್ಥಳಕ್ಕೆ ವನ್ಯಜೀವಿ ವಿಭಾಗದ ರಾಜ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಜಯರಾಂ ಮತ್ತು ಸಹಾಯಕ ರಾಜ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಜಗತ್‍ರಾಂ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ನಾಗರಹೊಳೆ ಅರಣ್ಯದ ವೀರನಹೊಸಳ್ಳಿ ವಲಯಕ್ಕೆ ಹೊಂದಿಕೊಂಡಿರುವ ಕೆ.ಜಿ. ಹಬ್ಬನಕುಪ್ಪೆ ಗ್ರಾಮದಲ್ಲಿರುವ 650 ಎಕರೆ ಪ್ರದೇಶದ ತರಗನ್ ಎಸ್ಟೇಟ್‍ನಲ್ಲಿ ಕಳೆದ 8 ದಿನಗಳಿಂದ ನಿರಂತರವಾಗಿ ಕಾರ್ಯಾ ಚರಣೆ ನಡೆಸಿದರೂ ಹುಲಿ ಪತ್ತೆಯಾಗ ದಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿ ಸಲಾಗಿತ್ತು. ಮತ್ತೆ ಕಾರ್ಯಾಚರಣೆ ನಡೆ ಸುವಂತೆ ಹುಲಿ ಯೋಜನಾ ನಿರ್ದೇಶಕ ರವಿಶಂಕರ್ ಅವರಿಗೆ ಜಯರಾಂ ಸೂಚಿ ಸಿದರು ಎಂದು ಎಸಿಎಫ್ ಪ್ರಸನ್ನಕುಮಾರ್ ತಿಳಿಸಿದ್ದಾರೆ.

ಹುಲಿ ಪತ್ತೆ ಕಾರ್ಯಾಚರಣೆಗೆ ಮತ್ತಷ್ಟು ಕ್ಯಾಮರಾಗಳನ್ನು ಬಳಸಿ ಇನ್ನೂ ಹೆಚ್ಚಿನ ಕಡೆ ಅಳವಡಿಸುವಂತೆ ಹಾಗೂ ಕಾರ್ಯಾಚರಣೆಗೆ ಎಸ್‍ಡಿಪಿಎಫ್ ಸಿಬ್ಬಂದಿಯನ್ನು ಹೆಚ್ಚಿನಸಂಖ್ಯೆಯಲ್ಲಿ ಬಳಸಿಕೊಳ್ಳಲು ಸೂಚಿಸಿದ್ದಾರೆ.

Translate »