ಮಳೆ ಹಾನಿ: ಶಾಸಕ, ಸಂಸದರಿಂದ ಪರಿಶೀಲನೆ
ಮೈಸೂರು

ಮಳೆ ಹಾನಿ: ಶಾಸಕ, ಸಂಸದರಿಂದ ಪರಿಶೀಲನೆ

August 25, 2018

ಅಂತರಸಂತೆ:  ಕಬಿನಿ ಹಿನ್ನೀರು ಮತ್ತು ಮಳೆಯಿಂದ ಹಾನಿಗೊಳ ಗಾದ ಡಿ.ಬಿ.ಕುಪ್ಪೆ ಗ್ರಾಪಂ ವ್ಯಾಪ್ತಿಯ ಹಲವು ಗ್ರಾಮಗಳಿಗೆ ಸಂಸದ ಆರ್.ಧ್ರುವನಾರಾ ಯಣ್ ಮತ್ತು ಶಾಸಕ ಅನಿಲ್ ಚಿಕ್ಕಮಾದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಚ್ಚೂರು, ಆನೆಮಾಳ, ವಡಕನಮಾಳ, ಬಾವಲಿ ಮುಂತಾದ ಗ್ರಾಮಗಳಿಗೆ ಭೇಟಿ ಕೊಟ್ಟು ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿ ಸರಕಾರ ಮತ್ತು ತಾಲೂಕು ಆಡಳಿತ ನಿಮ್ಮ ನೆರವಿಗೆ ಇದೆ ಎಂದು ಹೇಳಿ ಸರ್ಕಾರ ದಿಂದ ಸಿಗುವ ಸವಲತ್ತು ಹಾಗೂ ಪರಿಹಾರ ಕೊಡಿಸುವ ಭರವಸೆ ನೀಡಿದರು.

ನಂತರ ಡಿ.ಬಿ.ಕುಪ್ಪೆ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸಭೆ ಸೇರಿ ಸುಮಾರು 20 ಮನೆಗಳು ನೆಲಕ್ಕುರುಳಿವೆ, 40ಕ್ಕೂ ಹೆಚ್ಚು ಮನೆಗಳು ಹಾನಿಯಾಗಿದೆ. ಮನೆ ನಿರ್ಮಾಣಕ್ಕೆ, ಬೆಳೆ ಪರಿಹಾರಕ್ಕೆ, ದಾಖಲೆಗಳನ್ನು ಕಳೆದುಕೊಂಡ ಸಂತ್ರಸ್ತ ರಿಗೆ, ಮನೆ, ನಿವೇಶಗಳ ದಾಖಲೆಗಳು, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಮತದಾರರ ಚೀಟಿ ಎಲ್ಲ ದಾಖಲೆಗಳನ್ನು ಒದಗಿಸಿಕೊಡಿ ಎಂದರು. ಡಿ.ಬಿ.ಕುಪ್ಪೆಯಿಂದ ಬಾವಲಿವರೆಗೆ ರಸ್ತೆಯನ್ನು ಶೀಘ್ರವಾಗಿ ದುರಸ್ತಿಗೊಳಿಸ ಬೇಕೆಂದರು. ಆನೆ ಹಾವಳಿಗೆ ಸಂಬಂಧಿಸಿ ದಂತೆ ಹಾಡಿ ಸುತ್ತಲೂ ಫೆನ್ಸಿಂಗ್ ಹಾಕಲು ಹಾಗೂ ಶಾಲಾ ಮತ್ತು ಅಂಗನವಾಡಿ ಕಟ್ಟಡ ಕಟ್ಟಲು ತೊಂದರೆ ಕೊಡಬಾರದೆಂದು ಅರಣ್ಯ ಇಲಾಖೆಗೆ ತಿಳಿಸಿದರು.

ಮುಂದಿನ 10 ದಿನಗಳ ಒಳಗೆ ಮತ್ತೆ ಅಧಿಕಾರಿಗಳ ಸಭೆ ಕರೆದು ಪರಿಹಾರಕ್ಕೆ ಸಂಬಂಧಿಸಿದಂತೆÉ ಎಲ್ಲಾ ವರದಿಗಳನ್ನು ಕೊಡಬೇಕು ಎಂದರು. ಗ್ರಾ.ಪಂ.ಅಧ್ಯಕ್ಷ ತಿರುಪತಿ, ಸದಸ್ಯರಾದ ನಾರಾಯಣ, ವೆಂಕಟೇಗೌಡ, ನಾಗರಾಜ್, ದೇವಮ್ಮ, ಗ್ರೇಡ್-2 ತಹಶೀಲ್ದಾರ್ ಆನಂದ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಶ್ರೀಕಂಠೇರಾಜೇಅರಸ್ ಹಾಗೂ ಗ್ರಾಮ ಸ್ಥರು ಹಾಜರಿದ್ದರು.

Translate »