ಆ.27, ಚಾಮರಾಜನಗರದಲ್ಲಿ ಕೃಷಿ ಕಾಲೇಜು ಆರಂಭ
ಚಾಮರಾಜನಗರ

ಆ.27, ಚಾಮರಾಜನಗರದಲ್ಲಿ ಕೃಷಿ ಕಾಲೇಜು ಆರಂಭ

August 25, 2018
  • ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ತಾತ್ಕಾಲಿಕವಾಗಿ ತರಗತಿ
  • ಜಿಲ್ಲೆಯ ಅಭಿವೃದ್ಧಿಗೆ ಇದು ಪೂರಕ
  • ಕೃಷಿ ಸಚಿವ ಶಿವಶಂಕರ ರೆಡ್ಡಿ ಭಾಗಿ

ಚಾಮರಾಜನಗರ: ಚಾಮರಾಜನಗರದ ನೂತನ ಕೃಷಿ ಮಹಾವಿದ್ಯಾಲಯದ ಪ್ರಾರಂಭೋತ್ಸವವು ಇದೇ ತಿಂಗಳ 27ರಂದು ನೆರವೇರಲಿದೆ ಎಂದು ಸಂಸದ ಆರ್.ಧ್ರುವನಾರಾಯಣ್ ತಿಳಿಸಿದರು.ತಾಲೂಕಿನ ಹರದನಹಳ್ಳಿ ಗ್ರಾಮದ ಬಳಿ ಇರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ಕರೆದಿದ್ದ ಸುದ್ಧಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.

ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ತಾತ್ಕಾಲಿಕವಾಗಿ ತರಗತಿಗಳು ಆರಂಭ ವಾಗಲಿದೆ. ಅಂದು ಬೆಳಿಗ್ಗೆ 11 ಗಂಟೆಗೆ ಕೃಷಿ ಸಚಿವ ಎನ್.ಹೆಚ್.ಶಿವಶಂಕರ ರೆಡ್ಡಿ ಅವರು ನೂತನ ಕೃಷಿ ಮಹಾವಿದ್ಯಾಲಯದ ಪ್ರಾರಂಭೋತ್ಸಕ್ಕೆ ಚಾಲನೆ ನೀಡುವರು. ಅ ದಿನದಿಂದಲೇ ಮೊದಲ ವರ್ಷದ ಕೃಷಿ ಕಾಲೇಜಿನ ತರಗತಿ ಆರಂಭವಾಗಲಿದೆ. ಈಗಾಗಲೇ ವಿದ್ಯಾರ್ಥಿಗಳು ಪ್ರವೇಶಾತಿ ಆಗಿದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಕಳೆದ ಅವಧಿಯ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದ ಸಿದ್ದ ರಾಮಯ್ಯ ಅವರು ಕಳೆದ ಬಜೆಟ್‍ನಲ್ಲಿ ಚಾಮರಾಜನಗರಕ್ಕೆ ಕೃಷಿ ಕಾಲೇಜು ಮಂಜೂರು ಮಾಡಿದ್ದರು. ಈಗ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಈ ಸಾಲಿನಿಂದಲೇ (2018-19) ಚಾಮ ರಾಜನಗರದಲ್ಲಿ ಬಿಎಸ್‍ಸಿ ಕೃಷಿ ಪದವಿಯನ್ನು 31 ವಿದ್ಯಾರ್ಥಿಗಳ ಸಂಖ್ಯೆದೊಂದಿಗೆ ಪ್ರಸ್ತುತ ಹರದನಹಳ್ಳಿ ಬಳಿ ಇರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪ್ರಾರಂಭಕ್ಕೆ ಆಡಳಿತಾ ತ್ಮಕ ಅನುಮೋದನೆ ನೀಡಿದರು. ಆ ಪ್ರಕಾರ ಇದೇ ತಿಂಗಳ 27 ರಿಂದ ಕೃಷಿ ಕಾಲೇಜಿನ ತರಗತಿಗಳು ಆರಂಭವಾಗಲಿದೆ. ಈಗಾಗಲೇ 11 ವಿದ್ಯಾರ್ಥಿಗಳು ಹಾಗೂ 16 ವಿದ್ಯಾರ್ಥಿ ನಿಯರು ಸಿಇಟಿ ಮೂಲಕ ಕಾಲೇಜಿನ ಪ್ರವೇಶ ಪಡೆದಿದ್ದಾರೆ. ಉಳಿದ 4 ವಿದ್ಯಾರ್ಥಿಗಳ ಪ್ರವೇಶಾತಿ ಎರಡನೇ ಹಂತದಲ್ಲಿ ನಡೆಯ ಲಿದೆ ಎಂದು ಧ್ರುವನಾರಾಯಣ್ ತಿಳಿಸಿದರು.

ನೂತನ ಕೃಷಿ ಕಾಲೇಜಿಗೆ ಬೇಕಾಗುವ 75 ಎಕರೆ ಕೃಷಿಗೆ ಯೋಗ್ಯ ಇರುವ ಹಾಗೂ ನೀರಾವರಿ ಸೌಲಭ್ಯ ಇರುವ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗು ವಂತೆ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಇರುವ ಜಾಗವಾದ ಯಡಬೆಟ್ಟದ ತಪ್ಪಲಿನಲ್ಲಿರುವ ಮೆಡಿಕಲ್ ಕಾಲೇಜಿನ ಬಳಿ ಗುರುತಿಸಲಾಗಿದೆ. ಈ ಜಾಗವನ್ನು ರಾಜ್ಯ ಸರ್ಕಾರದ ಅನುಮೋದನೆಗೆ ಹಾಗೂ ಬೆಂಗಳೂರಿನ ಕೃಷಿ ವಿಶ್ವ ವಿದ್ಯಾನಿಲಯಕ್ಕೆ ವರ್ಗಾಯಿಸುವ ಪ್ರಕ್ರಿಯೆ ಚಾಲ್ತಿಯಲ್ಲಿ ಇದೆ ಎಂದು ಧ್ರುವನಾರಾ ಯಣ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಿಪಂ ಸದಸ್ಯ ಕೆ.ಪಿ.ಸದಾಶಿವ ಮೂರ್ತಿ ಎಪಿಎಂಸಿ ಅಧ್ಯಕ್ಷ ಬಿ.ಕೆ.ರವಿ ಕುಮಾರ್, ತಾಪಂ ಸದಸ್ಯ ಮಹದೇವ ಶೆಟ್ಟಿ, ಚಾಮರಾಜನಗರ ಕೃಷಿ ಮಹಾ ವಿದ್ಯಾಲಯದ ವಿಶೇಷಾಧಿಕಾರಿ ಡಾ.ಎಸ್.ಎನ್.ವಾಸುದೇವನ್, ಮುಖ್ಯಸ್ಥೆ ಡಾ.ಚಂದ್ರಕಲಾ ಹಣಗಿ ಸುದ್ಧಿಗೋಷ್ಠಿ ಯಲ್ಲಿ ಹಾಜರಿದ್ದರು.

Translate »