ಅಭಿವೃದ್ಧಿ ಮರೆತು ವರ್ಗಾವಣೆಯಲ್ಲಿ ನಿರತರಾಗಿರುವ ಶಾಸಕ
ಚಾಮರಾಜನಗರ

ಅಭಿವೃದ್ಧಿ ಮರೆತು ವರ್ಗಾವಣೆಯಲ್ಲಿ ನಿರತರಾಗಿರುವ ಶಾಸಕ

August 25, 2018

ಗುಂಡ್ಲುಪೇಟೆ: ಕೇವಲ ಸನ್ಮಾನ ಸ್ವೀಕರಿಸುವುದು ಮತ್ತು ವರ್ಗಾವಣೆ ದಂಧೆಯನ್ನು ನಡೆಸುವುದರ ಲ್ಲಿಯೇ ಶಾಸಕ ಸಿ.ಎಸ್.ನಿರಂಜನಕುಮಾರ್ ಕಾಲ ಕಳೆಯುತ್ತಿದ್ದಾರೆ ಎಂದು ಯುವ ಕಾಂಗ್ರೆಸ್ ಮುಖಂಡ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.

ಪಟ್ಟಣದ ಖಾಸಗಿ ಹೋಟೆಲ್‍ನಲ್ಲಿ ಸುದ್ದಿ ಗೋಷ್ಠಿ ನಡೆಸಿದ ಕಾಂಗ್ರೆಸ್ ಮುಖಂಡರು ನೂತನ ಶಾಸಕ ಸಿ.ಎಸ್.ನಿರಂಜನಕುಮಾರ್ ನಿಷ್ಟ್ರೀಯತೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಸಿ.ಎಸ್.ನಿರಂಜನಕುಮಾರ್ 100 ದಿನಗಳಾ ದರೂ ಸನ್ಮಾನ ಸ್ವೀಕರಿಸುತ್ತಲೇ ಕಾಲ ಕಳೆಯು ತ್ತಿದ್ದಾರೆ. ಕೇವಲ ಅಧಿಕಾರಿಗಳ ವರ್ಗಾ ವಣೆ ಬಿಟ್ಟರೆ ಬೇರಾವುದೇ ಕಾರ್ಯಗಳೂ ಆಗುತ್ತಿಲ್ಲ ಎಂದು ಆರೋಪಿಸಿದರು.

ರಾಜ್ಯದ ಹಾಗೂ ಜಿಲ್ಲೆಯ ಇತರ ಕ್ಷೇತ್ರದ ಶಾಸಕರು ತಮ್ಮ ಅನುದಾನದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದರೆ ನಿರಂಜನಕುಮಾರ್ ಮಾತ್ರ ಹಿಂದಿನ ಸಚಿವೆ ಡಾ.ಗೀತಾ ಮಹದೇವಪ್ರಸಾದ್ ಅವರ ಅವಧಿಯಲ್ಲಿ ಬಿಡುಗಡೆಯಾದ ಅನುದಾನ ಗಳಿಗೆ ಅಧಿಕಾರಿಗಳ ಮೇಲೆ ಒತ್ತಡ ತಂದು ಮತ್ತೊಮ್ಮೆ ಭೂಮಿಪೂಜೆ ನಡೆಸುತ್ತಾ ಗಿಮಿಕ್ ಮಾಡುತ್ತಿದ್ದಾರೆ. ಸರ್ಕಾರದಿಂದ ಯಾವುದೇ ಅನುದಾನ ಬಂದಿಲ್ಲ ಎಂದು ಹೇಳಿಕೊಳ್ಳುತ್ತಿರುವುದು ಇವರ ಅಸಮ ರ್ಥತೆಯನ್ನು ತೋರಿಸುತ್ತದೆ ಎಂದರು.

ಹಿಂದಿನ ಸರ್ಕಾರದ ಅವಧಿಯಲ್ಲಿ ಪುರಸಭೆಗೆ ಕೋಟ್ಯಾಂತರ ರೂಪಾಯಿ ವಿಶೇಷ ಅನುದಾನ ಬಂದಿದ್ದರೂ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲು ಮುಂದಾಗದೇ ಇರುವುದು ಇವರು ಪಟ್ಟಣದ ಮೇಲೆ ಇಟ್ಟಿ ರುವ ಕಾಳಜಿಯನ್ನು ತೋರುತ್ತದೆ.
ಪಟ್ಟಣದ ಜೋಡಿ ರಸ್ತೆಯ ಅಭಿವೃದ್ಧಿ ಕಾಮಗಾರಿ ಪ್ರಾರಂಭಿಸುವ ಮೊದಲು ರಸ್ತೆಯ ಗುಂಡಿಯಲ್ಲಿ ಗಿಡನೆಟ್ಟು ಪ್ರತಿ ಭಟನೆ ನಡೆಸಿದ್ದರು. ಆದರೆ ಶಾಸಕರಾಗಿ 100 ದಿನಗಳಾದರೂ ಯಾವುದೇ ಪ್ರಗತಿಯಾಗಿಲ್ಲ. ಕೆರೆಗಳಿಗೆ ನೀರು ತುಂಬಿಸುವ ವಿಚಾರದಲ್ಲಿಯೂ ಉಗ್ರವಾಗಿ ಮಾತನಾಡುತ್ತಿದ್ದವರು ಇತ್ತೀಚೆಗೆ ಸುಮ್ಮನಾಗಿದ್ದಾರೆ ಎಂದು ಆರೋಪಿಸಿ. ಇದೇ ರೀತಿ ನಿಷ್ಕ್ರೀಯತೆಯನ್ನು ಪ್ರದರ್ಶಿಸು ತ್ತಿದ್ದರೆ ಕಾಂಗ್ರೆಸ್ ಸುಮ್ಮನಿರುವುದಿಲ್ಲ. ಬೀದಿ ಗಿಳಿದು ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.

ಚಾಮುಲ್ ನಿರ್ದೇಶಕ ಎಚ್.ಎಸ್. ನಂಜುಂಡಪ್ರಸಾದ್ ಮಾತನಾಡಿ, ತಮ್ಮ ಸಹೋದರ ದಿ.ಎಚ್.ಎಸ್.ಮಹದೇವ ಪ್ರಸಾದ್ ಮಂತ್ರಿಯಾಗಿದ್ದಾಗ ಎಲ್ಲಾ ಇಲಾಖೆಗಳ ಸಚಿವರ ಜತೆಗೂಡಿ ಹೆಚ್ಚಿನ ಅನುದಾನ ತಂದು ಕ್ಷೇತ್ರದ ಸರ್ವ ತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಎಲ್ಲಾ ಗ್ರಾಮಗಳಿಗೂ ರಸ್ತೆ, ಕುಡಿಯುವ ನೀರು, ಶಾಲೆಗಳು, ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಸಮುದಾಯ ಭವನಗಳನ್ನು ನಿರ್ಮಿಸಲಾಗಿದೆ. ಆದರೆ ಸರ್ಕಾರದಿಂದ ಇನ್ನೂ ಹೆಚ್ಚಿನ ಅನುದಾನ ಗಳನ್ನು ತಂದು ಬಾಕಿಯುಳಿದ ಕೆಲಸಗಳನ್ನು ಮಾಡಬೇಕು ಎಂದು ಒತ್ತಾಯಿಸಿದರು.

ಪುರಸಭೆ ಮಾಜಿ ಅಧ್ಯಕ್ಷ ಎಲ್. ಸುರೇಶ್ ಮಾತನಾಡಿ, ಪಟ್ಟಣ ಹಾಗೂ ಸುತ್ತಲಿನ ಎಲ್ಲಾ ರೆಸಾರ್ಟ್ ಹಾಗೂ ಲಾಡ್ಜ್‍ಗಳಲ್ಲಿ ಜೂಜಾಟ, ವೇಶ್ಯಾವಾಟಿಕೆ, ಕೇರಳಕ್ಕೆ ಅಕ್ರಮವಾಗಿ ಜಾನುವಾರು ಕಳ್ಳಸಾಗಾಣಿಕೆ ಹಾಗೂ ಕಲ್ಲು ಸಾಗಾಣಿಕೆ, ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ನಡೆಸಿದ್ದ ನಿರಂಜನಕುಮಾರ್ ತಮ್ಮ ಹಿಂದಿನ ನಿಲುವನ್ನು ಕೈಬಿಟ್ಟು ಇತ್ತೀಚಿಗೆ ಸುಮ್ಮನಿರುವುದು ಅನುಮಾನಾಸ್ಪದ ವಾಗಿದೆ. ತಮ್ಮ ಅಧಿಕಾರ ಬಳಸಿ ಅಕ್ರಮ ದಂಧೆಕೋರರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಕುಮಾರ ಸ್ವಾಮಿ, ಜಿಪಂ ಸದಸ್ಯ ನವೀನ್ ಕೆರೆಹಳ್ಳಿ, ತಾಪಂ ಅಧ್ಯಕ್ಷ ಜಗದೀಶಮೂರ್ತಿ, ತಾ.ಪಂ. ಮಾಜಿ ಅಧ್ಯಕ್ಷ ಎಚ್.ಎನ್.ನಟೇಶ್, ಎಪಿಎಂಸಿ ಅಧ್ಯಕ್ಷ ಗುರುಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷ ಪಿ.ಚಂದ್ರಪ್ಪ, ಉಪಾಧ್ಯಕ್ಷ ಜಿ.ಕೆ.ನಾಗೇಂದ್ರ, ಪುರಸಭೆ ಸದಸ್ಯ ಇಲಿಯಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಬಿ.ರಾಜಶೇಖರ್ ಮುಖಂಡರಾದ ದೇಪಾಪುರ ಸಿದ್ದಪ್ಪ, ನಾಗೇಶ್ ಸೇರಿದಂತೆ ಹಲವರು ಇದ್ದರು.

Translate »