ಚಾಮರಾಜನಗರ: ಜಿಲ್ಲಾ ಕೇಂದ್ರವಾದ ಚಾಮರಾಜನಗರದ ನಗರ ಸಭೆಯ ಈ ಚುನಾವಣೆ ಹಲವು ವಿಶೇ ಷತೆಗಳಿಗೆ ನಾಂದಿ ಹಾಡಿದೆ.ಹಾಲಿ 31 ಸದಸ್ಯರ ಪೈಕಿ ಮರು ಆಯ್ಕೆ ಬಯಸಿ 11 ಸದಸ್ಯರು ಸ್ಪರ್ಧಿಸಿ ದ್ದಾರೆ. ಇಬ್ಬರು ಮಾಜಿ ಸದಸ್ಯರು ಸ್ಪರ್ಧಿ ಸುವ ಮೂಲಕ ಮತ್ತೊಮ್ಮೆ ಸದಸ್ಯ ರಾಗುವ ಹಂಬಲ ಹೊಂದಿದ್ದಾರೆ. ಬಿಜೆಪಿಗೆ 4 ವಾರ್ಡ್‍ನಲ್ಲಿ, ಕಾಂಗ್ರೆಸ್‍ಗೆ 3 ವಾರ್ಡ್‍ನಲ್ಲಿ ಬಂಡಾಯ ಎದುರಾಗಿದೆ. ಇಬ್ಬರು ಹಾಲಿ ಸದಸ್ಯರು ತಾವು ಈ ಹಿಂದೆ ಗೆದ್ದಿದ್ದ ವಾರ್ಡ್‍ನಿಂದಲೇ ಸ್ಪರ್ಧಿಸುವ ಮೂಲಕ ಗಮನ ಸೆಳೆದಿದ್ದಾರೆ. ಕೆಲವರು ತಾವಿದ್ದ ಪಕ್ಷ ತೊರೆದು ಬೇರೆ ಪಕ್ಷ ಸೇರುವ ಜೊತೆಗೆ ಆ ಪಕ್ಷದಿಂದ ಟಿಕೆಟ್ ಪಡೆದು ಸ್ಪರ್ಧಿಸಿದ್ದು, ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
11 ಸದಸ್ಯರ ಸ್ಪರ್ಧೆ: 31 ಸದಸ್ಯರ ಬಲ ವುಳ್ಳ ಚಾಮರಾಜನಗರ ನಗರಸಭೆಗೆ ಇದೇ ತಿಂಗಳ 31ರಂದು ಚುನಾವಣೆ ನಡೆಯಲಿದೆ. ಕಳೆದ ಅವಧಿಯಲ್ಲಿ ಸದಸ್ಯರಾಗಿದ್ದವರ ಪೈಕಿ 11 ಮಂದಿ ಮತ್ತೊಮ್ಮೆ ಸ್ಪರ್ಧಿಸುವ ಮೂಲಕ ಗಮನ ಸೆಳೆದಿದ್ದಾರೆ.
ಎಸ್.ನಂಜಂಡಸ್ವಾಮಿ, ಶೋಭಾ, ಆರ್.ಎಂ.ರಾಜಪ್ಪ, ಸಿ.ಜಿ.ಶ್ರೀಕಾಂತ್, ಎಂ. ಕಲಾವತಿ, ಆರ್.ಪಿ.ನಂಜುಂಡಸ್ವಾಮಿ, ನಾರಾಯಣಸ್ವಾಮಿ, ಮಹೇಶ್, ಪಿ.ಚಿನ್ನ ಸ್ವಾಮಿ, ಚಂಗುಮಣಿ, ಮಹದೇವಯ್ಯ ಅವರುಗಳು ವಿವಿಧ ವಾರ್ಡ್‍ಗಳಿಂದ ಸ್ಪರ್ಧಿ ಸಿದ್ದಾರೆ. ಮತ್ತೊಮ್ಮೆ ಸದಸ್ಯರಾಗ ಬೇಕು ಎಂಬ ಆಸೆ ಹೊತ್ತು ಇವರು ಸ್ಪರ್ಧಿಸಿದ್ದು, ಮತದಾರರು ಯಾರನ್ನು ಸದಸ್ಯರಾಗಿ ಆಯ್ಕೆ ಮಾಡುತ್ತಾರೋ ಅಥವಾ ಯಾರನ್ನು ಮನೆಯಲ್ಲಿ ಕೂರಿಸುತ್ತಾನೆಯೋ ಕುತೂಹಲ ಕೆರಳಿಸಿದೆ.ಇಬ್ಬರು ಅದೇ ವಾರ್ಡ್‍ನಿಂದ ಸ್ಪರ್ಧೆ: ಕಳೆದ ಅವಧಿಯಲ್ಲಿ ಗೆಲ್ಲುವು ಸಾಧಿಸಿದ್ದ ಸದಸ್ಯರ ಪೈಕಿ ಇಬ್ಬರು ಸದಸ್ಯರು ಮಾತ್ರ ತಾವು ಗೆಲುವು ಸಾಧಿಸಿದ್ದ ವಾರ್ಡ್ ನಿಂದಲೇ ಮತ್ತೊಮ್ಮೆ ಸ್ಪರ್ಧಿಸಿದ್ದಾರೆ.
ಕಳೆದ ಬಾರಿ 13ನೇ ವಾರ್ಡ್‍ನಿಂದ ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಗೆಲುವ ಸಾಧಿ ಸಿದ್ದ ಎಂ.ಕಲಾವತಿ, 30ನೇ ವಾರ್ಡಿನಿಂದ ಗೆಲುವು ಸಾಧಿಸಿದ್ದ ಮಹದೇವಯ್ಯ ಅದೇ ವಾರ್ಡ್‍ನಿಂದ ಮತ್ತೊಮ್ಮೆ ಸ್ಪರ್ಧಿಸುವ ಮೂಲಕ ಗಮನ ಸೆಳೆದಿದ್ದಾರೆ.
ಇಬ್ಬರು ಮಾಜಿ ಸದಸ್ಯರು ಸ್ಪರ್ಧೆ: ಈ ಚುನಾವಣೆಯಲ್ಲಿ ಇಬ್ಬರು ಮಾಜಿ ಸದಸ್ಯರು ಸ್ಪರ್ಧಿಸುವ ಮೂಲಕ ಮತ್ತೊಮ್ಮೆ ಸದಸ್ಯ ರಾಗುವ ಆಸೆ ಹೊತ್ತಿದ್ದಾರೆ. ಕಳೆದ ಸಲಕ್ಕಿಂತ ಮುಂದಿನ ಅವಧಿಯಲ್ಲಿ ಸದಸ್ಯರಾಗಿ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಚಿನ್ನಮ್ಮ ಈ ಬಾರಿ 14ನೇ ವಾರ್ಡ್‍ನಿಂದ ಕಾಂಗ್ರೆಸ್‍ನಿಂದಲೇ ಸ್ಪರ್ಧಿಸಿದ್ದರೆ, ಮಾಜಿ ಸದಸ್ಯ ಸುದರ್ಶನಗೌಡ 21ನೇ ವಾರ್ಡಿ ನಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಗಮನ ಸೆಳೆದಿದ್ದಾರೆ.
ಕಾಂಗ್ರೆಸ್, ಬಿಜೆಪಿಗೆ ಬಂಡಾಯ: ಬಿಜೆಪಿಗೆ 4 ವಾರ್ಡ್‍ನಲ್ಲಿ, ಕಾಂಗ್ರೆಸ್‍ಗೆ 3ನೇ ವಾರ್ಡ್‍ನಲ್ಲಿ ಬಂಡಾಯ ಎದುರಾ ಗಿದೆ. 17ನೇ ವಾರ್ಡಿನಿಂದ ಸಿ.ಎ.ಬವಸಣ್ಣ, 23ನೇ ವಾರ್ಡಿನಿಂದ ಕಲ್ಯಾಣಿ, ಎನ್. ಮಂಜುಳ, 29ನೇ ವಾರ್ಡಿನಿಂದ ಬೇಬಿ, 31ನೇ ವಾರ್ಡಿನಿಂದ ಎಸ್.ಶ್ರೀಕಂಠ ಮೂರ್ತಿ ಬಿಜೆಪಿ ಟಿಕೆಟ್ ಬಯಸಿದ್ದರು. ಪಕ್ಷದಿಂದ ಇವರಿಗೆ ಟಿಕೆಟ್ ಸಿಗಲಿಲ್ಲ. ಹಾಗಾಗಿ ಇವರೆಲ್ಲಾ ಅದೇ ವಾರ್ಡ್ ಗಳಿಂದ ಪಕ್ಷೇತರರಾಗಿ ಸ್ಪರ್ಧಿಸುವ ಮೂಲಕ ಬಂಡಾಯ ಸಾರಿದ್ದಾರೆ.
ಅದೇ ರೀತಿ ಕಾಂಗ್ರೆಸ್‍ನಿಂದ 15ನೇ ವಾರ್ಡ್‍ನಿಂದ ಪಿ.ಚಿನ್ನಸ್ವಾಮಿ, 24ನೇ ವಾರ್ಡಿನಿಂದ ಲಕ್ಷ್ಮೀ, 26ನೇ ವಾರ್ಡಿ ನಿಂದ ಮೋಹನಾಂಬ ಟಿಕೆಟ್ ಬಯಸಿ ದ್ದರು. ಪಕ್ಷದಿಂದ ಕೈ ಕೊಟ್ಟ ಕಾರಣ ಅದೇ ವಾರ್ಡಿನಿಂದ ಪಕ್ಷೇತರರಾಗಿ ಸ್ಪರ್ಧಿಸುವ ಮೂಲಕ ಪಕ್ಷದ ಅಧಿಕೃತ ಅಭ್ಯರ್ಥಿ ಹಾಗೂ ಪಕ್ಷದ ನಾಯಕರ ವಿರುದ್ಧ ಸಮರ ಸಾರಿದ್ದಾರೆ. ಮತದಾರರು ಯಾರನ್ನು ಬೆಂಬಲಿಸುತ್ತಾರೋ ಕಾದು ನೋಡಬಾಕಾಗಿದೆ.
ಪತಿ ಬದಲು ಪತ್ನಿ, ತಾಯಿ ಬದಲು ಪುತ್ರ ಸ್ಪರ್ಧೆ : ಕಳೆದ ಬಾರಿ 10ನೇ ವಾರ್ಡಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೇಶವಮೂರ್ತಿ ಗೆಲವು ಸಾಧಿಸಿ ಮೊದಲ ಬಾರಿಗೆ ನಗರಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಈ ಬಾರಿ ಅವರು ಸ್ಪರ್ಧಿಸಿಲ್ಲ. ಆದರೆ ಅವರ ಪತ್ನಿ ಎಂ.ಎಸ್.ಕುಮುದ ಅವರನ್ನು 26ನೇ ವಾರ್ಡಿನಿಂದ ಬಿ.ಜೆ.ಪಿ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಿದ್ದಾರೆ.
ಕಳೆದ ಚುನಾವಣೆಯಲ್ಲಿ 26ನೇ ವಾರ್ಡಿನಿಂದ ಕೆಜೆಪಿ ಅಭ್ಯರ್ಥಿಯಾಗಿ ವಿಜಯಕುಮಾರಿ ಸ್ಪರ್ಧಿಸಿ ಗೆದ್ದಿದ್ದರು. ಉಪಾಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ಆದರೆ ಈ ಬಾರಿ ಅವರು ಸ್ಪರ್ಧಿಸದೆ ತಮ್ಮ ಮಗ ವಿ.ಶ್ರೀನಿವಾಸಪ್ರಸಾದ್ ಅವರನ್ನು 20ನೇ ವಾರ್ಡಿನಿಂದ ಕಾಂಗ್ರೆಸ್‍ನಿಂದ ಕಣಕ್ಕೆ ಇಳಿಸಿದ್ದಾರೆ. ಪತಿ ಬದಲು ಸ್ಪರ್ಧಿಸಿರುವ ಪತ್ನಿಗೆ-ತಾಯಿ ಬದಲು ಸ್ಪರ್ಧಾಳು ಆಗಿರುವ ಮಗನಿಗೆ ಆ ವಾರ್ಡಿನ ಮತದಾನದ ಉತ್ತರ ಹೇಗಿರುತ್ತದೆ ಎಂಬುದು ಕುತೂಹಲ ಕೆರಳಿಸಿದೆ.