ಸ್ಥಳೀಯ ಚುನಾವಣೆ ಕಣದಲ್ಲಿ 486 ಅಭ್ಯರ್ಥಿಗಳು
ಹಾಸನ

ಸ್ಥಳೀಯ ಚುನಾವಣೆ ಕಣದಲ್ಲಿ 486 ಅಭ್ಯರ್ಥಿಗಳು

August 25, 2018

ಹಾಸನ: ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆಯಲ್ಲಿ ಜಿಲ್ಲೆಯ 5 ನಗರ ಸ್ಥಳೀಯ ಸಂಸ್ಥೆಗಳ ಒಟ್ಟು 135 ವಾರ್ಡ್‍ಗಳಲ್ಲಿ ಅಂತಿಮವಾಗಿ 486 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಜಿಲ್ಲೆಯಲ್ಲಿ 5 ನಗರ ಸ್ಥಳೀಯ ಸಂಸ್ಥೆ ಗಳಿಗೆ ಚುನಾವಣೆ ನಡೆದಿದೆ ಇದರಲ್ಲಿ ಹಾಸನ 35, ಅರಸೀಕೆರೆಯ ನಗರಸಭೆಯ 31 ಹಾಗೂ ಚನ್ನರಾಯಪಟ್ಟಣ, ಹೊಳೆ ನರಸೀಪುರ ಮತ್ತು ಸಕಲೇಶಪುರ ಪುರಸಭೆ ಗಳ 23 ವಾರ್ಡ್‍ಗಳಿಗೆ ಚುನಾವಣೆ ನಡೆ ಯಲಿದೆ. ಹಾಸನ ನಗರಸಭೆಯಲ್ಲಿ ಒಟ್ಟು 175 ಮಂದಿ ನಾಮಪತ್ರ ಸಲ್ಲಿಸಿದ್ದರು. 1 ನಾಮ ಪತ್ರ ತಿರಸ್ಕೃತಗೊಂಡಿದ್ದು, 17 ಮಂದಿ ತಮ್ಮ ನಾಮಪತ್ರ ಹಿಂಪಡೆದಿದ್ದಾರೆ. ಅಂತಿಮ ವಾಗಿ 157 ಮಂದಿ ಕಣದಲ್ಲಿದ್ದಾರೆ.

ಅರಸೀಕೆರೆ ಪುರಸಭೆ ಚುನಾವಣೆಗೆ 118 ಮಂದಿ ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ 3 ನಾಮಪತ್ರಗಳು ತಿರಸ್ಕೃತ ಗೊಂಡಿವೆ. 115 ಅಭ್ಯರ್ಥಿಗಳ ಪೈಕಿ 8 ಮಂದಿ ನಾಮಪತ್ರ ಹಿಂಪಡೆದಿದ್ದು, 107 ಮಂದಿ ಅಂತಿಮ ಸ್ಪರ್ಧಾ ಕಣದಲ್ಲಿದ್ದಾರೆ.

ಚನ್ನರಾಯಪಟ್ಟಣ ಪುರಸಭೆ ಚುನಾ ವಣೆಗೆ 81 ಮಂದಿ ತಮ್ಮ ನಾಮ ಪತ್ರ ಸಲ್ಲಿಸಿದ್ದರು. 2 ನಾಮಪತ್ರಗಳು ತಿರಸ್ಕೃತ ಗೊಂಡಿವೆ. 7 ಮಂದಿ ನಾಮಪತ್ರ ಹಿಂಪಡೆದಿ ದ್ದಾರೆ. 72 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಹೊಳೆನರಸೀಪುರ ಪುರಸಭೆಯಲ್ಲಿ 120 ನಾಮಪತ್ರಗಳು ಸಲ್ಲಿಕೆಯಾಗಿದ್ದು, 18 ನಾಮಪತ್ರಗಳು ತಿರಸ್ಕೃತಗೊಂಡಿವೆ. 37 ಮಂದಿ ನಾಮಪತ್ರ ಹಿಂಪಡೆದಿದ್ದು, 65 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ.

ಸಕಲೇಶಪುರ ಪುರಸಭೆಯಲ್ಲಿ 92 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, 1 ನಾಮಪತ್ರ ತಿರಸ್ಕೃತಗೊಂಡಿದೆ. 6 ಮಂದಿ ನಾಮಪತ್ರ ಹಿಂಪಡೆದಿದ್ದು, 85 ಅಭ್ಯರ್ಥಿ ಗಳು ಅಂತಿಮ ಕಣದಲ್ಲಿದ್ದಾರೆ. ಒಟ್ಟಾರೆ ಜಿಲ್ಲೆಯ 5 ನಗರ ಸ್ಥಳೀಯ ಸಂಸ್ಥೆಗಳಿಂದ 586 ಮಂದಿ ನಾಮಪತ್ರ ಸಲ್ಲಿಸಿದ್ದರು, 25 ನಾಮಪತ್ರಗಳು ತಿರಸ್ಕೃತ ಗೊಂಡಿದ್ದು, 561 ಕ್ರಮಬದ್ದಗೊಂಡಿವೆ. 75 ಮಂದಿ ನಾಮಪತ್ರ ಹಿಂಪಡೆದಿದ್ದು, 486 ಅಭ್ಯರ್ಥಿ ಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ.

Translate »