ಎನ್‍ಐಇನಲ್ಲಿ ಆ.31ರಿಂದ 2 ದಿನ `ಆಕಾರ್-2018’  ಅಂತರ ಕಾಲೇಜು ಸ್ಪರ್ಧೆ
ಮೈಸೂರು

ಎನ್‍ಐಇನಲ್ಲಿ ಆ.31ರಿಂದ 2 ದಿನ `ಆಕಾರ್-2018’  ಅಂತರ ಕಾಲೇಜು ಸ್ಪರ್ಧೆ

August 25, 2018

ಮೈಸೂರು:  ಮೈಸೂರಿನ ಮಾನಂದವಾಡಿ ರಸ್ತೆಯಲ್ಲಿರುವ ಎನ್‍ಐಇ ಕಾಲೇಜಿನ ಇಂಜಿನಿಯರಿಂಗ್ ವಿಭಾಗವು ಆ.31 ಮತ್ತು ಸೆ.1ರಂದು `ಆಕಾರ್-2018’ ಅಂತರ ಕಾಲೇಜು ಸ್ಪರ್ಧೆ, `ವಿಪತ್ತು ನಿರ್ವಹಣೆ ಹಾಗೂ ವಾಹನ ಸಂಚಾರ ತಾಂತ್ರಿಕತೆ ಮತ್ತು ನಿರ್ವಹಣೆ’ ಕುರಿತು ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಿದೆ ಎಂದು ಎನ್‍ಐಇ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಎನ್.ಸುರೇಶ್ ಇಂದಿಲ್ಲಿ ತಿಳಿಸಿದರು.

ಪಾದಚಾರಿಗಳ ಸುರಕ್ಷತೆಗಾಗಿ ಆ.26ರಂದು ಬೆಳಿಗ್ಗೆ 6.30 ಗಂಟೆಗೆ ಕಾಲೇಜಿನ ಅಮೃತ ಮಹೋತ್ಸವ ಕಟ್ಟಡ ದಿಂದ 5 ಕಿ.ಮೀ `ಆಕಾರ್ ಓಟ’ ಏರ್ಪಡಿಸಲಾಗಿದ್ದು, ಸಂಸದ ಪ್ರತಾಪ್‍ಸಿಂಹ ಚಾಲನೆ ನೀಡಲಿದ್ದಾರೆ. ಪೊಲೀಸ್ ಉಪ ಆಯುಕ್ತ ಡಾ.ವಿಕ್ರಮ್ ಅಮ್ಟೆ ಭಾಗವಹಿಸಲಿದ್ದಾರೆ ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಆ.31ರಂದು ಬೆಳಿಗ್ಗೆ 9.30 ಗಂಟೆಗೆ ಸಮ್ಮೇಳನ ಉದ್ಘಾಟನೆಗೊಳ್ಳಲಿದ್ದು, ನ್ಯೂಯಾರ್ಕ್‍ನ ಸಿ.ವಿ.ಅಸೋಸಿಯೇಷನ್‍ನ ಸಿ.ವಿ.ಶಶಿಕಮಾರ್, ಎನ್‍ಐಇ ಗೌರವ ಕಾರ್ಯದರ್ಶಿ ಜಿ.ಎಸ್. ರಾಮಚಂದ್ರ ಭಾಗವಹಿಸುವರು. ಸಮ್ಮೇ ಳನದಲ್ಲಿ ಸಿ.ವಿ.ಶಶಿಕುಮಾರ್, ದೆಹಲಿ ಐಐಟಿಯ ಡಾ.ಕೆ.ರಾಮಚಂದ್ರರಾವ್, ಡಾ.ಅರ ವಿಂದ್ ಕೃಷ್ಣಸ್ವಾಮಿ, ದುಬೈ ಎಲ್ ಅಂಡ್ ಟಿ ಲಿಮಿಟೆಡ್‍ನ ಸೀನಿಯರ್ ಇಂಜಿನಿಯರ್ ಚೇತನ್ ವಿಶ್ವನಾಥ್, ಇನ್ನಿತರರು ವಿಚಾರ ಮಂಡಿಸಲಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಕಟ್ಟಡ ಸಾಮಗ್ರಿಗಳಿಗೆ ಸಂಬಂಧಿಸಿದ ವಸ್ತು ಪ್ರದರ್ಶನ, ಛಾಯಾಚಿತ್ರಣ, ಭಿತ್ತಿಪತ್ರ ತಯಾರಿಕೆ, ರಸಪ್ರಶ್ನೆ ಸ್ಪರ್ಧೆಗಳು ನಡೆಯಲಿವೆ. ಅಲ್ಲದೆ, ಸೆ.1ರ ಸಂಜೆ 7ಕ್ಕೆ ಸಾಂಸ್ಕøತಿಕ ಸಂಜೆಯಲ್ಲಿ ವೈನಿಕ ವಿ.ರಾಜೇಶ್ ವೈದ್ಯ ತಂಡದಿಂದ ಸಂಗೀತ ಕಾರ್ಯಕ್ರಮವಿದೆ. ಪ್ರವೇಶ ಉಚಿತ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪ್ರಾಂಶುಪಾಲ ಪ್ರೊ.ಜಿ.ರವಿ, ಪ್ರಾಧ್ಯಾಪಕರಾದ ಡಾ.ಗಣೇಶ್‍ಪ್ರಸಾದ್, ಡಾ.ಕೆ.ಸಿ. ಮಂಜುನಾಥ್, ಸಂಕಲ್ಪ ಗ್ರೂಪ್‍ನ ನಿಖಿಲ್ ಜಗದೀಶ್ ಉಪಸ್ಥಿತರಿದ್ದರು.

Translate »