ಕಾಡುಮೊಲ ಬೇಟೆ; ಓರ್ವನ ಬಂಧನ
ಚಾಮರಾಜನಗರ

ಕಾಡುಮೊಲ ಬೇಟೆ; ಓರ್ವನ ಬಂಧನ

August 25, 2018

ಹನೂರು:  ಅರಣ್ಯದೊಳಗೆ ಅತಿಕ್ರಮ ಪ್ರವೇಶ ಮಾಡಿ ಕಾಡುಮೊಲ ಬೇಟೆಯಾಡಿ ಪರಾರಿಯಾಗಿದ್ದ ಆರೋಪಿಯೊಬ್ಬನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಗೋಪಿನಾಥಂ ಗ್ರಾಮದ ಶಂಕರನ್ ಬಂಧಿತ ಆರೋಪಿ. ಗೋಪಿನಾಥಂ ವನ್ಯಜೀವಿ ವಲಯದಲ್ಲಿ ಎನ್ಸಿಎಫ್ ತಂಡ ಚಿರತೆ ಅಧ್ಯಯನಕ್ಕಾಗಿ ಅಳವಡಿಸಿದ್ದ ಕ್ಯಾಮರಾದಲ್ಲಿ ವ್ಯಕ್ತಿಗಳಿಬ್ಬರು ಎರಡು ಬೇಟೆನಾಯಿಗಳ ಜತೆ ಕಾಡುಮೊಲ ಬೇಟೆಯಾಡಿ ಕೊಂಡೊಯ್ಯುತ್ತಿರುವ ದೃಶ್ಯ ಸೆರೆಯಾಗಿದೆ. ಕೂಡಲೇ ಕಾರ್ಯಾಚರಣೆ ಆರಂಭಿಸಿದ ವಲಯ ಅರಣ್ಯಾಧಿಕಾರಿ ಶಂಕರ್ ಅಂತರಗಟ್ಟಿ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಕ್ಯಾಮರಾದಲ್ಲಿ ಸೆರೆಯಾಗಿರುವ ವ್ಯಕ್ತಿಗಳು ಗೋಪಿನಾಥಂ ಗ್ರಾಮದ ಶಂಕರನ್ ಹಾಗೂ ಮಾದೇಶ್ ಎಂದು ತಿಳಿದು ಬಂದಿದ್ದು, ಇವರಲ್ಲಿ ಶಂಕನ್‍ನನ್ನು ಬಂಧಿಸಿದ್ದಾರೆ. ಸಾಕು ನಾಯಿಗಳ ಸಹಾಯದಿಂದ ಕಾಡುಮೊಲವನ್ನು ಬೇಟೆಯಾಡಿರುವುದಾಗಿ ಆರೋಪಿ ಶಂಕರನ್ ವಿಚಾರಣೆ ಸಂದರ್ಭದಲ್ಲಿ ತಪೆÇ್ಪಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

Translate »