ಮೈಸೂರು: ಮೈಸೂರಿನಲ್ಲಿ ಎನ್‍ಐಇ ವಿಶ್ವವಿದ್ಯಾ ನಿಲಯ ಸ್ಥಾಪನೆಯಾಗಲಿದ್ದು, ಸಂಸ್ಥಾಪಕ ಕುಲಾಧಿಪತಿಯಾಗಿ ಡಿ.ಎ.ಪ್ರಸನ್ನ ನೇಮಕಗೊಂಡಿದ್ದಾರೆ ಎಂದು ಎನ್‍ಐಇ ಅಧ್ಯಕ್ಷ ಶ್ರೀನಾಥ್ ಬಾಟ್ನಿ ತಿಳಿಸಿದರು.
ಮೈಸೂರಿನ ಮೆಟ್ರೋಪೋಲ್ ಹೋಟೆಲ್‍ನಲ್ಲಿ ಭಾನುವಾರ ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಇದಕ್ಕಾಗಿ ಮೈಸೂರು ಸಮೀ ಪದ ತಾಂಡ್ಯ ಕೈಗಾರಿಕಾ ಪ್ರದೇಶದ ಅಡಕನಹಳ್ಳಿ ಬಳಿ ಕೆಐಎಡಿಬಿ ನೀಡಿರುವ 50 ಎಕರೆ ಪ್ರದೇಶದಲ್ಲಿ ಬೃಹತ್ ಕ್ಯಾಂಪಸ್ ನಿರ್ಮಿಸಲಾಗುವುದು ಎಂದರು.
ಮೊದಲ ಹಂತದಲ್ಲಿ 45 ಕೋಟಿ ರೂ. ವೆಚ್ಚದಲ್ಲಿ ಪ್ರಾಥಮಿಕ ಮೂಲ ಸೌಕರ್ಯ ಕಲ್ಪಿಸಿ, ಒಟ್ಟು 175 ಕೋಟಿ ವೆಚ್ಚದಲ್ಲಿ ಸುಂದರ ಕ್ಯಾಂಪಸ್ ನಿರ್ಮಿಸಲು ಯೋಜಿ ಸಲಾಗಿದೆ. ಅನ್ವಯಿಕ ವಿಜ್ಞಾನ, ಅನ್ವಯಿಕ ಕಲೆ, ಮಾನವೀಯತೆ ವಿಭಾಗ ಮತ್ತು ಅನ್ವಯಿಕ ನಿರ್ವಹಣೆ ಸೇರಿದಂತೆ ಹಲವು ಕೋರ್ಸ್‍ಗಳು ಕ್ಯಾಂಪಸ್‍ನಲ್ಲಿ ಪ್ರಾರಂಭಿ ಸಲು ಚಿಂತನೆ ನಡೆದಿದೆ ಎಂದರು.
ಸರ್ಕಾರದ ಕಾರ್ಯದರ್ಶಿಗಳು ಸಮಿತಿಗೆ ಭೇಟಿ ನೀಡಿ, ವಿಶ್ವವಿದ್ಯಾನಿಲಯ ವನ್ನು ಪ್ರಾರಂಭಿಸುವ ದಿನಾಂಕವನ್ನು ತಿಳಿ ಸಲಿದ್ದಾರೆ ಎಂದರು. ವಿಶ್ವವಿದ್ಯಾನಿಲಯದ ಪ್ರಾರಂಭಕ್ಕೆ ಸರ್ಕಾರ ಅನುಮೋದನೆ ದೊರೆ ಯುತ್ತಿದ್ದಂತೆ ಕುಲಾಧಿಪತಿಯಾಗಿ ಪ್ರಸನ್ನ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಎನ್‍ಐ ಇಯ ಹಳೆಯ ವಿದ್ಯಾರ್ಥಿಯಾಗಿರುವ ಪ್ರಸನ್ನ, 1968ರಲ್ಲಿ ಮೈಸೂರು ವಿವಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪ್ರಥಮ ದರ್ಜೆಯಲ್ಲಿ ಪದವಿ ಪಡೆದವರು. ಬಳಿಕ ಅಹಮದಾಬಾದ್‍ನ ಇನ್ಸ್‍ಟಿಟ್ಯೂಟ್ ಆಫ್ ಮೇನೇಜ್‍ಮೆಂಟ್‍ನಲ್ಲಿ ಎಂಬಿಎ ಪದವಿ ಪಡೆದರು. ತಮ್ಮ 25 ವರ್ಷಗಳ ಅವಧಿಯಲ್ಲಿ ಅವರು ವಿಪ್ರೋ ಜಿಇ ವೈದ್ಯ ಕೀಯ ಸಂಸ್ಥೆ ಸ್ಥಾಪಿಸಿ, ಭಾರತದಲ್ಲಿ ವೈದ್ಯ ಕೀಯ ರೋಗ ನಿರ್ಣಯವನ್ನು ಮಾರ್ಪ ಡಿಸಿಕೊಳ್ಳಲು ಸರಿಯಾದ ತಂತ್ರಜ್ಞಾನ ಗಳೂ ಬರುವಂತೆ ಮಾಡಿದರು. ಅವರು ವಿಪ್ರೋದ ಉಪಾಧ್ಯಕ್ಷರಾಗಿದ್ದರು.
ಮಣಿಪಾಲ್ ಎಜುಕೇಷನ್ ಅಂಡ್ ಮೆಡಿಕಲ್ ಗ್ರೂಪ್‍ನ ಕಾರ್ಯ ನಿರ್ವಾಹಕ ಅಧ್ಯಕ್ಷರಾಗಿ ಮಣಿಪಾಲ್ ವಿಶ್ವವಿದ್ಯಾನಿಲ ಯಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ಮಣಿಪಾಲ್ ಅಕುನೋವಾ ಲಿಮಿಟೆಡ್ ಸ್ಥಾಪಿಸುವ ಮೂಲಕ ಪ್ರಮುಖ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಸ್ಥಾಪಿಸಿ, ಯಶಸ್ವಿ ಉದ್ಯಮಿಯಾಗಿದ್ದಾರೆ ಎಂದರು.
ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ 1967ರಲ್ಲಿ ಎನ್‍ಐಇಯಲ್ಲಿನ ವಿದ್ಯುತ್ ಪದವಿಗೆ ವಿಶೇಷವಾದ ಹಳೆಯ ವಿದ್ಯಾರ್ಥಿಯಾಗಿದ್ದರು. ಪ್ರಸನ್ನ ಅವರು ಎನ್‍ಐಇ ಅಲುಮ್ನಿಯಾಗಿದ್ದಾರೆ. ಸಮರ್ಥ, ಮೌಲ್ಯಾಧಾರಿತ, ಕ್ರಿಯಾತ್ಮಕ, ಫಲಿತಾಂಶ ಆಧಾರಿತ ವ್ಯಕ್ತಿಯಾಗಿದ್ದಾರೆ. ಎನ್‍ಐಇ ನಿರ್ವಹಣಾ ಮಂಡಳಿಯಲ್ಲಿ ಸೇರಿದ್ದ ಅವರು ಆಡಳಿತ ಮಂಡಳಿ ಸದಸ್ಯರೊಂದಿಗೆ ಎನ್‍ಐಇ ವಿಶ್ವವಿದ್ಯಾನಿಲಯದ ಕಲ್ಪನೆಯನ್ನು ತಂದರು. ಅವರ ದೂರ ದೃಷ್ಟಿ, ನಾಯಕತ್ವ, ದೃಢತೆ, ಕಠಿಣ ಕೆಲಸದ ಪರಿಣಾಮವಾಗಿ ಅವರ ಕಲ್ಪನೆ ಇಂದು ಸಾಕಾರಗೊಳ್ಳುವತ್ತ ಸಾಗಿದೆ ಎಂದು ಹೇಳಿದರು. ಎನ್‍ಐಇ ಆಡಳಿತ ಮಂಡಳಿ ಸದಸ್ಯ ಹಾಗೂ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಮಾತನಾಡಿ, ಕಳೆದ 50 ವರ್ಷಗಳಿಂದ ಪ್ರಸನ್ನ ನನಗೆ ಚಿರಪರಿಚಿತರು. ಸಮರ್ಥ, ಮೌಲ್ಯಾಧಾರಿತ, ಕ್ರಿಯಾಶೀಲ ವ್ಯಕ್ತಿತ್ವದವರು. ಅವರ ಉತ್ತಮ ನಾಯಕತ್ವ ಹಾಗೂ ದೂರದೃಷ್ಟಿ ಫಲವಾಗಿ ಜವಾಬ್ದಾರಿಯುತ ಸ್ಥಾನ ದೊರೆತಿದೆ ಎಂದು ಅಭಿನಂದಿಸಿದರು.