ಕೊಡಗು ನೆರೆ ಸಂತ್ರಸ್ತರಿಗೆ ಚಪ್ಪರದಹಳ್ಳಿ ಸಹಕಾರ ಸಂಘದಿಂದ ಲಕ್ಷ ರೂ. ನೆರವು
ಮೈಸೂರು

ಕೊಡಗು ನೆರೆ ಸಂತ್ರಸ್ತರಿಗೆ ಚಪ್ಪರದಹಳ್ಳಿ ಸಹಕಾರ ಸಂಘದಿಂದ ಲಕ್ಷ ರೂ. ನೆರವು

August 25, 2018

ಬೆಟ್ಟದಪುರ: ಕೊಡಗು ಜಿಲ್ಲೆಯ ಪ್ರವಾಹ ಪೀಡಿತ ಸಂತ್ರಸ್ತರ ನೆರವಿಗೆ ಪಿರಿಯಾಪಟ್ಟಣ ತಾಲೂಕಿನ ಚಪ್ಪರದಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ದಿಂದ ಲಕ್ಷ ರೂ ನೀಡಲು ತೀರ್ಮಾನಿ ಸಲಾಗಿದೆ.

ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಗ್ರಾಮದಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2018-19ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಬೆಟ್ಟದಪುರ ಎಂಸಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಚಂದ್ರಶೇಖರ್ ಅವರು ನೆರವಿನ ಹಣ ವನ್ನು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಕಳಸಿಕೊಡುವುದಾಗಿ ತಿಳಿಸಿದರು.

ಸಹಕಾರ ಸಂಘಗಳಲ್ಲಿ ಸಾಲ ಪಡೆದವರು ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡುವುದರಿಂದ ಈ ಸಂಘವು 11.84. 827 ರೂಗಳನ್ನು ಆದಾಯ ಪಡೆದು ಅಭಿ ವೃದ್ಧಿ ಹೊಂದುತ್ತಿದೆ ಎಂದರು.

ರಾಜ್ಯ ಸರ್ಕಾರದಿಂದ ಸಾಲಮನ್ನಾ ಮಾಡಿರುವ ಆದೇಶ ಬಂದ ಕೂಡಲೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಗಳಲ್ಲಿ ರೈತರು ತೆಗೆದುಕೊಂಡಿರುವ ಸಾಲ ಮನ್ನಾ ಮಾಡುವುದಾಗಿ ತಿಳಿಸಿದರು.

ನಂತರ ಕಾರ್ಯಕಾರಿ ಮಂಡಳಿಯ ಅಧ್ಯಕ್ಷ ರಾದ ಎಚ್.ಬಿ.ನಾಗೇಂದ್ರ ಮಾತನಾಡಿ ಕರ್ನಾಟಕ ಆರೋಗ್ಯ ವಿಮೆ ಯೋಜನೆ ಅಡಿಯಲ್ಲಿ ಸಹಕಾರ ಸಂಘಗಳಿಂದ ಅನಾ ರೋಗ್ಯಕ್ಕೊಳಗಾದ ಸದಸ್ಯರಿಗೆ ಸಾಲ ಸೌಲಭ್ಯ ದೊರಕುತ್ತಿದ್ದು, ಸಾಲ ಪಡೆದ 5 ವರ್ಷಗಳ ಒಳಗೆ ಸಾಲ ಮರು ಪಾವತಿ ಮಾಡುವ ಯೋಜನೆ ಇದಾ ಗಿದೆ. ಆದ್ದರಿಂದ ಈ ಯೋಜನೆ ಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಹಾಣಾಧಿಕಾರಿ ಹುಚ್ಚಪ್ಪ ವಾರ್ಷಿಕ ಲೆಕ್ಕಪತ್ರ ಹಾಗೂ ಆದಾಯ ಕುರಿತು ಸಮಗ್ರ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಅಪ್ಪಾಜಿ ಗೌಡ, ನಿರ್ದೆಶಕರಾದ ಪುಟ್ಟಲಕ್ಷ್ಮಮ್ಮ, ಕಾಳೇಗೌಡ, ಸಿ.ಜೆ.ದೇವರಾಜು, ಅಶ್ವಥ್ ಕುಮಾರ್, ಎ.ಜೆ.ಬೆಟ್ಟೇಗೌಡ, ರಾಮ ಚಂದ್ರ, ಮೀನಾಕ್ಷಿ, ಯತೀಶ್, ಸಿಬ್ಬಂದಿ ಸಿ.ಕೆ.ಮಂಜು ನಾಥ್, ಎಂ.ಆರ್.ಯೋಗಾ ನಂದ, ರವಿ ಕುಮಾರ್, ಎಚ್.ಡಿ. ಅವಿನಾಶ್, ಹಮೀದ್ ಖಾನ್ ಸೇರಿದಂತೆ ಗ್ರಾಮಸ್ಥರು ಇದ್ದರು.

Translate »