ರಾಜಕಾರಣಿಗಳು ಜನಸೇವೆಗೆ ಮುಂದಾಗಬೇಕು
ಮೈಸೂರು

ರಾಜಕಾರಣಿಗಳು ಜನಸೇವೆಗೆ ಮುಂದಾಗಬೇಕು

December 5, 2018

ಬೆಟ್ಟದಪುರ: ರಾಜ ಕಾರಣವು ನಿಂತ ನೀರಾಗಿರದೇ ಹರಿಯುವ ನದಿಯಂತಿದ್ದು, ಅಧಿಕಾರದ ದೊರೆತಾಗ ರಾಜಕಾರಣಿಗಳು ಜನಸೇವೆಗೆ ಮುಂದಾಗಬೇಕು ಎಂದು ಶಾಸಕ ಕೆ.ಮಹದೇವ್ ಸಲಹೆ ನೀಡಿದರು.

ಪಿರಿಯಾಪಟ್ಟಣ ತಾಲೂಕಿನ ಕಿತ್ತೂರು ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಗ್ರಾಮ ಸ್ಪಂದನಾ ಸಭೆ ಉದ್ದೇ ಶಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ 2 ಕೈಗಾ ರಿಕೆಗಳ ಸ್ಥಾಪನೆಗೆ ಮುಖ್ಯಮಂತ್ರಿಗಳಿಂದ ಭರವಸೆ ದೊರೆತಿದ್ದು, ಶೀಘ್ರವಾಗಿಯೇ ಕೈಗಾರಿಕೆಗಳ ಸ್ಥಾಪನೆ ಯಾಗುವುದರಿಂದ ಸಾವಿರಾರು ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಸಂತಸ ವ್ಯಕ್ತ ಪಡಿಸಿದರು.
ಕುಡಿಯುವ ನೀರಿನ ಸಮಸ್ಯೆಯ ನಿವಾ ರಣೆಗೆ ಮುಂದಿನ ರಾಜ್ಯ ಬಜೆಟ್‍ನಲ್ಲಿ 220 ಕೋಟಿ ರೂ.ಗಳ ಅನುದಾನ ತರುತ್ತೇನೆ ಎಂದು ಭರವಸೆ ನೀಡಿದರು. ಅಲ್ಲದೇ ಕಿತ್ತೂರು ಗ್ರಾಮದಲ್ಲಿ ಬಹುಬೇಡಿಕೆಯಾಗಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಾಪನೆಗೆ ಅನು ಮೋದನೆ ದೊರೆಯಲಿದೆ ಎಂದು ತಿಳಿಸಿದರು.

ಜಿಪಂ ಸದಸ್ಯ ಕೆ.ಎಸ್.ಮಂಜುನಾಥ್, ಮುಖಂಡ ರಾದ ಅಣ್ಣಯ್ಯಶೆಟ್ಟಿ ಮಾತನಾಡಿದರು. ಕಾರ್ಯ ಕ್ರಮದಲ್ಲಿ ತಾಪಂ ಸದಸ್ಯರಾದ ಕೀರ್ತಿ, ಮಲ್ಲಿ ಕಾರ್ಜುನ, ಸದಸ್ಯರಾದ ಮಹದೇವಶೆಟ್ಟಿ, ಲಕ್ಷ್ಮಣೇ ಗೌಡ, ದಿನೇಶ್, ಮುಖಂಡರಾದ ನರಸಿಂಹ, ಚಂದ್ರಶೇಖರ್ ಸೇರಿದಂತೆ ಇತರರಿದ್ದರು.

Translate »