ಕೆಆರ್‍ನಗರ ತಾಪಂ ಇಓ ಅಮಾನತಿಗೆ ಆಗ್ರಹ
ಮೈಸೂರು

ಕೆಆರ್‍ನಗರ ತಾಪಂ ಇಓ ಅಮಾನತಿಗೆ ಆಗ್ರಹ

December 5, 2018

ಕೆ.ಆರ್.ನಗರ: ಚುನಾಯಿತ ಜನಪ್ರತಿನಿಧಿಗಳ ಅಧಿಕಾರ ಮೊಟುಕುಗೊಳಿಸಿ, ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ತಾಪಂ ಕಾರ್ಯನಿರ್ವಹಣಾಧಿಕಾರಿ ಯನ್ನು ಕೂಡಲೇ ಅಮಾನತುಗೊಳಿಸಲು ಸಂಬಂಧಪಟ್ಟವರಿಗೆ ಲಿಖಿತವಾಗಿ ದೂರು ನೀಡಲಾಗುವುದು ಎಂದು ತಾಪಂ ಅಧ್ಯಕ್ಷ ಹೆಚ್.ಟಿ.ಮಂಜುನಾಥ್ ತಿಳಿಸಿದರು.

ಪಟ್ಟಣದ ತಮ್ಮ ಕಚೇರಿಯಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಪಂ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿಮೋಹನ್ ಅವರು ತಾಪಂ ಅಧ್ಯಕ್ಷರು, ಸದಸ್ಯರ ಅಧಿಕಾರ ಮೊಟುಕುಗೊಳಿಸಿ, ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು, ಅಧಿಕಾರ ದುರುಪಯೋಗ ಪಡಿಸಿಕೊಳ್ಳು ತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡಲಾಗುವುದು ಎಂದು ಹೇಳಿದರು.

ನ.24ರಂದು ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರು ಹಾಗೂ ನಮ್ಮ ಅಧಿಕಾರವನ್ನು ಮುಟ್ಟುಗೋಲು ಹಾಕಿ ಕೊಳ್ಳಲು ಯತ್ನಿಸಿದ ಕಾರ್ಯನಿರ್ವಹ ಣಾಧಿಕಾರಿ ಲಕ್ಷ್ಮೀಮೋಹನ್ ಅವರ ನಡೆ ಯನ್ನು ಖಂಡಿಸಲಾಗಿತ್ತು. ಆ ಸಂದರ್ಭ ದಲ್ಲಿ ಅವರು ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸುವುದಾಗಿ ಸಮಜಾಯಿಷಿ ನೀಡಿದ ಬಳಿಕ ಸಭೆಯನ್ನು ಡಿ. 3ರಂದು ನಡೆಸಲು ತೀರ್ಮಾನಿಸಲಾಗಿತು. ಆದರೆ ಇಂದು ಸಭೆ ನಡೆಸದೆ ಮುಂದೂ ಡಿದ್ದು, ಈ ಬಗ್ಗೆ ಮಾಹಿತಿಯನ್ನೂ ನೀಡಿಲ್ಲ. ದೂರವಾಣಿ ಸಂಪರ್ಕಕ್ಕೂ ಸಹ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕಿನ ಅಭಿವೃದ್ಧಿಗೆ ಸಂಬಂಧಿಸಿ ದಂತೆ ಯಾವುದೇ ಕೆಲಸಗಳನ್ನು ಹೇಳಿ ದರೂ ಸಹ ಅದನ್ನು ಇಓ ಅವರು ಪರಿಗ ಣಿಸದೆ ಮನಸೋ ಇಚ್ಛೆ ವರ್ತಿಸುತ್ತಾರೆ. ಸಂಯುಕ್ತ ಅನುದಾನ, ಲಿಂಕ್ ಡಾಕ್ಯೂ ಮೆಂಟ್ಸ್, ಸ್ಟಾಂಪ್ ಡ್ಯೂಟಿ ಸೇರಿದಂತೆ ಇತರೆ ಸರ್ಕಾರಿ ಕ್ರಿಯಾ ಯೋಜನೆಗೆ ಅನು ಮೋದನೆ ಪಡೆಯಲು ಸಾಮಾನ್ಯ ಸಭೆಯಲ್ಲಿ 22 ಸದಸ್ಯರು, ಅಧ್ಯಕ್ಷರಿಗೆ ಅಧಿಕಾರ ನೀಡಿ ದ್ದರೂ ಕಾಮಗಾರಿಗಳನ್ನು ನಾವು ಸೂಚಿಸಿದ ಗ್ರಾಮಗಳನ್ನು ಬಿಟ್ಟು, ತಮಗಿಷ್ಟ ಬಂದ ಗ್ರಾಮಗಳಿಗೆ ನೀಡುವ ಮೂಲಕ ದುರ್ವರ್ತನೆ ತೋರುತ್ತಾರೆ ಎಂದು ದೂರಿದರಲ್ಲದೆ, ಇಓ ಲಕ್ಷ್ಮೀ ಮೋಹನ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಡಳಿತ ಮಂಡಳಿ ಪರವಾಗಿ ಒತ್ತಾಯಿಸಿದರು. ಈ ವೇಳೆ ತಾಪಂ ಸದಸ್ಯರಾದ ಗಂಧನ ಹಳ್ಳಿ ಮಂಜು ನಾಥ್, ಕುಮಾರ್, ಚಂದ್ರಶೇಖರ್, ರೇವಣ್ಣ, ಸಣ್ಣಪ್ಪ, ಇನ್ನಿತರÀರಿದ್ದರು.

Translate »