ದಾನಗಳಲ್ಲೇ ಶ್ರೇಷ್ಠ ರಕ್ತದಾನ
ಮೈಸೂರು

ದಾನಗಳಲ್ಲೇ ಶ್ರೇಷ್ಠ ರಕ್ತದಾನ

December 5, 2018

ತಿ.ನರಸೀಪುರ: ಅಪಘಾತ ಮತ್ತು ಅನಾರೋಗ್ಯದ ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ಜೀವ ರಕ್ಷಣೆಗೆ ರಕ್ತದ ಅಗತ್ಯವಾಗಿದ್ದು, ದಾನದಲ್ಲೇ ರಕ್ತದಾನ ಶ್ರೇಷ್ಠ ಎಂದು ಸಮಾಜ ಸೇವಕ ಹಾಗೂ ವರುಣಾ ಹಿರಿಯ ಕಾಂಗ್ರೆಸ್ ಮುಖಂಡ ಟಿ.ಮಹದೇವಸ್ವಾಮಿ ಹೇಳಿದರು.

ತಾಲೂಕಿನ ಬನ್ನೂರು ಪಟ್ಟಣದಲ್ಲಿರುವ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಹಿರಿಯ ರಾಜಕಾರಣಿ, ನಟ ಡಾ.ಅಂಬರೀಶ್ ಸ್ಮರಣಾರ್ಥವಾಗಿ ರಕ್ತ ದಾನಿಗಳ ಸಂಘ ಹಾಗೂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬೃಹತ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಅನ್ನದಾನವನ್ನೇ ಶ್ರೇಷ್ಠ ಎನ್ನುತ್ತಿದ್ದ ನಮಗೆಲ್ಲರಿಗೂ ಜೀವವನ್ನು ಉಳಿಸುವ ರಕ್ತದಾನವೇ ಈಗ ಶ್ರೇಷ್ಠವಾಗುತ್ತಿದೆ. ಕೆಲವರಲ್ಲಿ ರಕ್ತದಾನದ ಬಗ್ಗೆ ತಪ್ಪು ಅಭಿ ಪ್ರಾಯಗಳಿವೆ. ರಕ್ತದಾನ ಮಾಡುವುದ ರಿಂದ ದೇಹದಲ್ಲಿ ರಕ್ತಕಣಗಳ ಮರು ಉತ್ಪಾದನೆಯಾಗಲಿದ್ದು, ಮತ್ತೊಬ್ಬರ ಜೀವವನ್ನು ಉಳಿಸಲಿಕ್ಕೆ ಆಧಾರವಾಗ ಲಿದೆ. ಶಾಲಾ ಮಕ್ಕಳಲ್ಲಿಯೂ ರಕ್ತದಾನ ಮಹತ್ವ ತಿಳಿಸಲು ಕಾಲೇಜಿನಲ್ಲಿ ಶಿಬಿರ ಆಯೋಜಿಸಿರುವುದು ಸೂಕ್ತವಾಗಿದೆ. ಯುವ ಸಮುದಾಯ ರಕ್ತದಾನ ಮಾಡುವ ಮೂಲಕ ಬದುಕನ್ನು ಅರ್ಥ ಪೂರ್ಣ ವಾಗಿ ನಡೆಸಬೇಕು ಎಂದು ಸಲಹೆ ನೀಡಿದರು.

ಶಿಬಿರದ ಆಯೋಜಕರಾದ ಬನ್ನೂರು ರಕ್ತದಾನಿಗಳ ಸಂಘದ ಅಧ್ಯಕ್ಷ ಜಿ.ಕೆ. ನಯನ್‍ಗೌಡ ಮಾತನಾಡಿದರು.
ಶಿಬಿರದಲ್ಲಿ ರಕ್ತದಾನ ಮಾಡಿದವರಿಗೆ ಪ್ರಮಾಣಪತ್ರವನ್ನು ನೀಡಲಾಯಿತು. ಸಮು ದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ವಿ.ಎನ್.ರವಿಕುಮಾರ್, ಕಾಲೇಜು ಪ್ರಾಂಶುಪಾಲ ಗೂಳೇಗೌಡ, ಪುರಸಭೆ ಉಪಾಧ್ಯಕ್ಷ ಬಿ.ಎಸ್.ರಾಮ ಲಿಂಗೇಗೌಡ, ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ಎಂ.ದೇವರಾಜು, ಜೆಡಿಎಸ್ ರೈತದಳ ಅಧ್ಯಕ್ಷ ಬಿ.ಆರ್.ನಾರಾಯಣಸ್ವಾಮಿ, ಮುಖಂಡ ರಾದ ಕೇತುಪುರ ನಾಗರಾಜು, ಕೆ.ಆರ್. ಸಂತೋಷ್, ಪಿ.ರಮೇಶ ಇನ್ನಿತರರಿದ್ದರು.

Translate »